ಕೆಲವೊಂದು ಸಾವಿಗೆ ಕಾರಣಗಳು.. ಕಾರಣಗಳೇ ಅಲ್ಲ. ಆದರೆ ಬದುಕಿ ಬಾಳಬೇಕಿದ್ದ, ಹೆತ್ತವರ ಪಾಲಿಗೆ ಆಸರೆಯಾಗಬೇಕಿದ್ದ ಯುವ ತರುಣರ ಬದುಕು ಸಣ್ಣ ವಿಚಾರಗಳಿಗೆ ಕೊಲೆಯಲ್ಲಿ ಅಂತ್ಯವಾಗುತ್ತಿದೆ ಅನ್ನೋದೆ ಬೇಸರದ ಸಂಗತಿ. ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಹುಲಿವೇಷ ತಂಡಗಳಲ್ಲಿ (Tiger Dance Team) ಒಂದಾದ ಪುತ್ತೂರಿನ ಕಲ್ಲೇಗ ಟೈಗರ್ಸ್ (Kallega Tigers) ತಂಡದ ಪ್ರಮುಖ ನಾಯಕನನ್ನು ದುಷ್ಕರ್ಮಿಗಳು ತಲವಾರ್‌ನಿಂದ ಕಡಿದು ಬರ್ಬರವಾಗಿ ಹತ್ಯೆ ಮಾಡಿರುವ (Murder Case) ಆತಂಕಕಾರಿ ಘಟನೆ ನಿನ್ನೆ ರಾತ್ರಿ ನಡೆದಿದೆ.
ಕಲ್ಲೇಗ ಟೈಗರ್ಸ್ ತಂಡದ ಮುಖ್ಯಸ್ಥ ಅಕ್ಷಯ್ ಕಲ್ಲೇಗ (26) ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ನೆಹರೂ ನಗರ ಜಂಕ್ಷನ್‌ನಲ್ಲಿ ಅಟ್ಟಾಡಿಸಿಕೊಂಡು ಹೋಗಿ ಕಡಿದು ಹತ್ಯೆ ಮಾಡಲಾಗಿದ್ದು, ಅಕ್ಷಯ್ ಕಲ್ಲೇಗ ಪುತ್ತೂರಿನಲ್ಲಿ ಇದ್ದಾಗ ಆಗಮಿಸಿದ ತಂಡಯೊಂದು ಯದ್ವಾತದ್ವ ತಲವಾರ್‌ನಲ್ಲಿ ದಾಳಿ ನಡೆಸಿ, ಹತ್ಯೆ ಮಾಡಿದೆ. ಪುತ್ತೂರಿನ ಕಲ್ಲೇಗ ಟೈಲರ್ ಮುಖ್ಯಸ್ಥ ಅಕ್ಷಯ್ ಕಲ್ಲೇಗನನ್ನು ಮಚ್ಚಿನಿಂದ ಕಡಿದು ಹತ್ಯೆ ಮಾಡಿದ ಬೆನ್ನಲ್ಲೇ ಆರೋಪಿಗಳಾದ ಬನ್ನೂರು ನಿವಾಸಿ ಮನೀಷ್ ಮತ್ತು ಚೇತು ಪೊಲೀಸ್ ಠಾಣೆಗೆ ಶರಣಾಗಿದ್ದು, ಮತ್ತೋರ್ವ ಆರೋಪಿ ತಲೆಮಲೆಸಿಕೊಂಡಿದ್ದಾನೆ ಎಂದು ಹೇಳಲಾಗಿದೆ.
ಕೊಲೆಗೆ ಕಾರಣವೇನು?: ಮೂಲಗಳ ಪ್ರಕಾರ ದ್ವಿಚಕ್ರ ವಾಹನಗಳ ನಡುವೆ ನಡೆದ ಅಪಘಾತ ವಿಚಾರದಲ್ಲಿ ಗಲಾಟೆ ಆರಂಭವಾಗಿದ್ದು, ಈ ಎರಡು ಸಾವಿರ ರೂಪಾಯಿ ನೀಡುವ ವಿಚಾರದಲ್ಲಿ ಮಾತುಕತೆ ವಿಕೋಪಕ್ಕೆ ಹೋಗಿದೆ. ಮಾತುಕತೆ ವಿಕೋಪಕ್ಕೆ ಹೋಗುತ್ತಿದ್ದಂತೆ ಖಾಸಗಿ ಬಸ್ ಚಾಲಕ ಚೇತು ಎಂಬಾತನ ಬೆಂಬಲಿಗನಿಗೆ ಹಾಗೂ ಅಕ್ಷಯ್ ನಡುವೆ ತೀವ್ರ ವಾಗ್ವಾದ ಉಂಟಾಗಿದ್ದು, ಕೊನೆಗೆ ಅಕ್ಷಯ್ ಕಲ್ಲೇಗನನ್ನು ಮೂರಕ್ಕೂ ಅಧಿಕ ಮಂದಿಯ ತಂಡ ಅಟ್ಟಾಡಿಸಿ ಹೋಗಿ ತಲವಾರಿನಿಂದ ದಾಳಿ ನಡೆಸಿದೆ.
ಹುಲಿ ಕುಣಿತದಲ್ಲಿ ಕಲ್ಲೇಗ ಟೈಗರ್ಸ್ ತಂಡದ ನೇತೃತ್ವ ವಹಿಸಿಕೊಂಡಿದ್ದ ಅಕ್ಷಯ್ ಭಾರೀ ಹೆಸರು ಮಾಡಿದ್ದ. ಕಳೆದ ವರ್ಷದ ಬಿಗ್‌ಬಾಸ್ ಶೋನಲ್ಲಿ ರೂಪೇಶ್ ಶೆಟ್ಟಿ ಮನವಿ ಮೇರೆಗೆ ಕಲ್ಲೇಗ ಟೈಗರ್ಸ್ ತಂಡವನ್ನು ಕರೆಸಿಕೊಂಡು ಪಿಲಿಯೇಸ ನೃತ್ಯವನ್ನು ಮಾಡಲಾಗಿತ್ತು. ಪಿಲಿವೇಷದಲ್ಲಿ ಕಲ್ಲೇಗ ಟೈಗರ್ಸ್ ತಂಡದ ನೇತೃತ್ವ ವಹಿಸಿಕೊಂಡಿದ್ದ ಅಕ್ಷಯ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
An alarming incident took place last night in which the main leader of the Kallega Tigers team of Puttur, one of the prestigious tiger teams of Dakshina Kannada district, was hacked to death by thugs. Akshay Kallega (26), the head of the Kallega Tigers team, was hacked to death at the Nehru Nagar Junction of the Mani Mysore National Highway in Puttur Taluk of Dakshina Kannada District. When Akshay Kallega was in Puttur, a gang attacked and killed him in Yadwatdwa Talwar.