ಆಲಂಕಾರು ಸಹಕಾರಿ ಸಂಘದಲ್ಲಿ ನಡೆದ ಅಧ್ಯಯನ ಪ್ರವಾಸದ ಬಗ್ಗೆ ತನಿಖೆ ನಡೆಸುವಂತೆ ಪುತ್ತೂರು ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗೆ ಆಮ್ ಆದ್ಮಿ ಪಾರ್ಟಿ ಮನವಿ ನೀಡಿ ತನಿಖೆಗೆ ಒತ್ತಾಯಿಸಿದೆ.
ಆಲಂಕಾರು ಸಹಕಾರಿ ಸಂಘದ ವತಿಯಿಂದ ಈಚೆಗೆ ಅಧ್ಯನ ಪ್ರವಾಸದ ಹೆಸರಿನಲ್ಲಿ ಕೃಷಿ, ಸಹಕಾರ ಕ್ಷೇತ್ರಗಳ ಹೊರತಾಗಿ ಪ್ರವಾಸಿ ಕೇಂದ್ರಗಳಿಗೆ ಹೋಗಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ಸದಸ್ಯರ ಹಣದಲ್ಲಿ ಈ ಪ್ರವಾಸ ನಡೆದಿದ್ದರೆ ಇದನ್ನು ಖಂಡಿಸಲಾಗುವುದು ಎಂದು ಈ ಹಿಂದೆ ಆಮ್ ಆದ್ಮಿ ಪಾರ್ಟಿ ಸುದ್ದಿಗೋಷ್ಟಿಯ ಮೂಲಕ ಎಚ್ಚರಿಸಿತ್ತು.
ಪುತ್ತೂರು ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗೆ ಮನವಿ ನೀಡುವ ವೇಳೆ ಪುತ್ತೂರು ಆಮ್ ಆದ್ಮಿ ಪಕ್ಷದ ಸಂಘಟನಾ ಕಾರ್ಯದರ್ಶಿ ಜನಾರ್ಧ ನ ಬಂಗೇರ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್ ಕೋಲ್ಪೆ, ಈಶ್ವರಮಂಗಲ ಗ್ರಾಮ ಅಧ್ಯಕ್ಷರು ರಾಜೇಶ್ ರೈ , ಕರ್ನಾಟಕ ರಾಜ್ಯ ರೈತ ಸಂಘದ ಹಸಿರು ಸೇನೆಯ ಕಾರ್ಯದರ್ಶಿ ಮನೋಹರ್ ಶೆಟ್ಟಿ, ಜಿಲ್ಲಾ ಅಧ್ಯಕ್ಷರು ಶ್ರೀಧರ್ ಶೆಟ್ಟಿ ಬೈಲುಗುತ್ತು ಮೊದಲಾದವರು ಇದ್ದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel