ಸಮಾಜವು ರಾಷ್ಟ್ರೀಯತೆಯನ್ನು ಪೋಷಿಸಿದಾಗ ಇತಿಹಾಸಗಳು ಸಮೃದ್ಧವಾಗುತ್ತವೆ. ಹಾಗೆ ಧರ್ಮದ ವಿಚಾರ ಬಂದಾಗಲು ಸಮಾಜ ಇದೇ ತಳಹದಿಯ ಮೇಲೆ ನಿಂತರೆ ದೇಶದಲ್ಲಿ ಜನ ಸಾಮರಸ್ಯದಿಂದ ಬದುಕಬಹುದು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಎಲ್ಲವೂ ಜಾತಿ, ಧರ್ಮದ ಮೇಲೆ ದೇಶ ನಡೆಯುತ್ತಿದೆ. ಎಲ್ಲದಕ್ಕೂ ಧರ್ಮವೇ ಮುಖ್ಯ. ಹಿಂದೂ, ಇಸ್ಲಾಂ ಧರ್ಮದ ಮಧ್ಯೆ ದೊಡ್ಡ ಕಂದಕವೇ ಬೆಳದಿದೆ. ಆದರೆ ಇಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ಹೇಳಿದ ಮಾತು ಎಲ್ಲರೂ ಯೋಚನೆಗೆ ಹಚ್ಚುವಂತೆ ಮಾಡಿದೆ.
ಹಿಂದೂ ಧರ್ಮ ಇಸ್ಲಾಂಗಿಂತ ಹಳೆಯದು, ಮೊದಲು ಮುಸ್ಲಿಮರು ಹಿಂದೂಗಳಾಗಿದ್ದರು ಎಂಬ ಹೇಳಿಕೆಯನ್ನು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ಹೇಳಿದ್ದಾರೆ. ಇಸ್ಲಾಂ ಹುಟ್ಟಿದ್ದು 1500 ವರ್ಷಗಳ ಹಿಂದೆ, ಭಾರತದ ಯಾರೂ ಹೊರಗಿನವರಲ್ಲ, ನಾವೆಲ್ಲರೂ ಈ ದೇಶಕ್ಕೆ ಸೇರಿದವರು, ಭಾರತದ ಮುಸ್ಲಿಮರು ಮೂಲತಃ ಹಿಂದೂಗಳು, ನಂತರ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರು ಎಂದಿದ್ದಾರೆ.
600 ವರ್ಷಗಳ ಹಿಂದೆ ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರು ಮಾತ್ರ ಇದ್ದರು ಎಂದು ಹೇಳುತ್ತಾರೆ, ನಂತರ ಜನರು ಮತಾಂತರಗೊಂಡು ಮುಸ್ಲಿಮರಾದರು. ಜನರು ಸಹೋದರತೆ, ಶಾಂತಿ, ಐಕ್ಯತೆಯನ್ನು ಕಾಪಾಡುವಂತೆ ಮನವಿ ಮಾಡಿದ ಆಜಾದ್ ಅವರು, ರಾಜಕೀಯದೊಂದಿಗೆ ಧರ್ಮವನ್ನು ಬೆರೆಸಬಾರದು, ಜನರು ಧರ್ಮದ ಹೆಸರಿನಲ್ಲಿ ಮತ ಹಾಕಬಾರದು ಎಂದು ಕಿವಿ ಮಾತು ಹೇಳಿದರು.
ಹಿಂದೂ-ಮುಸ್ಲಿಂ ಎನ್ನುವ ಬೇಧಭಾವವೇಕೆ? ಎಂದು ಆಜಾದ್ ಭಾರತೀಯ ಮುಸ್ಲಿಮರ ಬಗ್ಗೆ ಮಾತನಾಡಿದರು. ಹಿಂದೂಗಳಂತೆಯೇ ಮುಸ್ಲಿಮರು ಕೂಡ ಈ ಭಾರತದ ಮಣ್ಣಿನಲ್ಲೇ ಬೆರೆಯುತ್ತಾರೆ, ಹಾಗಾಗಿ ಮುಸ್ಲಿಮರ ದೇಹ ಹಾಗೂ ಎಲುಬುಗಳು ಕೂಡ ಭಾರತ ಮಾತೆಯ ಭಾಗವಾಗುತ್ತದೆ, ಹಾಗಿದ್ದಾಗ ಹಿಂದೂ-ಮುಸ್ಲಿಂ ಎನ್ನುವ ಬೇಧಬಾವ ಏಕೆ ಎಂದರು.
ಗುಲಾಂ ನಬಿ ಆಜಾದ್ ಕಳೆದ ವರ್ಷ ಕಾಂಗ್ರೆಸ್ ತೊರೆದು ತಮ್ಮದೇ ಆದ ಹೊಸ ಪಕ್ಷವನ್ನು ಕಟ್ಟಿದ್ದರು. ಇದು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹೊಡೆತ ಎಂದೇ ಹೇಳಬಹುದು. ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಗೂ ಮುನ್ನ ರಾಜೀನಾಮೆ ನೀಡಿದ್ದರು. ಆಜಾದ್ ಅಬರ ಮಾತು ಎಷ್ಟು ಮಂದಿಗೆ ಇಷ್ಟವಾಗುತ್ತೊ ಇಲ್ವೋ ಗೊತ್ತಿಲ್ಲ. ಆದರೆ ನಾವು ಭಾರತೀಯರು, ನಾವೆಲ್ಲರೂ ಒಂದೇ ಎನ್ನುವ ಮಾತು ಒಪ್ಪಲೇ ಬೆಕಾದ್ದು.
Source: Digital Media