1954 ರಿಂದ 2025 | ಅಡಿಕೆ ಮೇಲೆ ಆಪಾದನೆಗಳು ಬಂದ ದಾರಿ ಯಾವುದೆಲ್ಲಾ…?

May 20, 2025
7:32 AM
1985 ರಲ್ಲಿ ಅಡಿಕೆ ಮಾರುಕಟ್ಟೆಗೆ ಕೊಠಾರಿ ಸಮೂಹ ಪ್ರವೇಶ ಮಾಡಿತು. ಅಲ್ಲಿಂದ ಅಡಿಕೆ ಧಾರಣೆ ನಿಧಾನವಾಗಿ ಏರಲಾರಂಭಿಸಿತು. ಪಾನ್ ಪರಾಗ್ ಎಂಬ ಗುಟ್ಕಾ ಅಡಿಕೆ ಬೆಳೆಗಾರರಿಗೆ ಹಣವನ್ನು ತಂದು ಕೊಡುವ ಮರವಾಗಿ ಹೊರಹೊಮ್ಮಿತು. ಇದರೊಂದಿಗೆ ಮುಂದಿನ ವರ್ಷಗಳಲ್ಲಿ ನಾನಾ ರೀತಿಯ ಗುಟ್ಕಾ ಕಂಪನಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟವು.

ಹೆಚ್ಚು ಕಡಿಮೆ 1990 ರ ತನಕ ಅಡಿಕೆ ಕ್ಷೇತ್ರ ಎದುರಿಸಿದ ಸಮಸ್ಯೆಗಳು ಹಲವು.ಧಾರಣೆಯಲ್ಲಿ ಏರು ಪೇರು,ಕೊಳೆ ರೋಗ,ನೀರಿನ ಅಭಾವ,ಸಾಗಣೆ ಸಮಸ್ಯೆ ಇತ್ಯಾದಿಗಳು.ಆದರೆ ಅಡಿಕೆ ಮೇಲೆ ಯಾವುದೇ ಆಪಾದನೆಗಳು ಇರಲಿಲ್ಲ. ಧಾರಣೆಯೂ ಅಲ್ಲಿಂದಲ್ಲಿಗೆ ಇತ್ತು. ತೋಟದ ವಿಸ್ತರಣೆಯೂ ಹತೋಟಿಯಲ್ಲಿತ್ತು. 1985 ರಲ್ಲಿ ಅಡಿಕೆ ಮಾರುಕಟ್ಟೆಗೆ ಕೊಠಾರಿ ಸಮೂಹ ಪ್ರವೇಶ ಮಾಡಿತು. ಅಲ್ಲಿಂದ ಅಡಿಕೆ ಧಾರಣೆ ನಿಧಾನವಾಗಿ ಏರಲಾರಂಭಿಸಿತು. ಪಾನ್ ಪರಾಗ್ ಎಂಬ ಗುಟ್ಕಾ ಅಡಿಕೆ ಬೆಳೆಗಾರರಿಗೆ ಹಣವನ್ನು ತಂದು ಕೊಡುವ ಮರವಾಗಿ ಹೊರಹೊಮ್ಮಿತು. ಇದರೊಂದಿಗೆ ಮುಂದಿನ ವರ್ಷಗಳಲ್ಲಿ ನಾನಾ ರೀತಿಯ ಗುಟ್ಕಾ ಕಂಪನಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟವು.ಅಲ್ಲಿ ತನಕ ಮಲೆನಾಡು ಪ್ರದೇಶದಲ್ಲಿ ಕೆಂಪಡಿಕೆ ಒಂದಿಗೆ ಚಾಲಿ ಅಡಿಕೆ ಮಾಡುತ್ತಿದ್ದವರು ಗುಟ್ಕಾ ತಯಾರಕರ ಬೇಡಿಕೆ ಈಡೇರಿಸಲು ಕೆಂಪಡಿಕೆಗೆ ಮಹತ್ವ ಕೊಟ್ಟರು.ಈ ಗುಟ್ಕಾ ದೇಶದಲ್ಲಿ ಎಸ್ಟು ಪ್ರಭಾವ ಬೀರಿತೆಂದರೆ ಸಿಗರೇಟ್ ಮತ್ತು ಬೀಡಿ ಇವಕ್ಕೆಲ್ಲ ಬೇಡಿಕೆ ಕುಸಿಯಲಾರಂಭಿಸಿತು.…..ಮುಂದೆ ಓದಿ….

ಈ ರೀತಿಯಾಗಿ ಪಾನ್ ಮಸಾಲ,ಗುಟ್ಕಾ ಇವೆಲ್ಲಾ ಅಡಿಕೆಗೆ ಹೆಚ್ಚಿನ ಬೇಡಿಕೆ ಸಲ್ಲಿಸುತ್ತಿದಂತೆ ಹಂತ ಹಂತವಾಗಿ ಅಡಿಕೆ ಬೆಳೆ ವಿಸ್ತರಣೆ ಆಗುತ್ತಾ ಹೋಯಿತು.ಇದೆ ಸಂದರ್ಭದಲ್ಲಿ ಅಡಿಕೆ ಮೇಲೆ ಆಪಾದನೆಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಂತು.ಈ ಆಪಾದನೆಗಳು ಸತ್ಯಾಸತ್ಯತೆಗಳನ್ನು ತಿಳಿಯಲು ಸಮಿತಿಗಳು ,ಕೋರ್ಟುಗಳು,ಸರಕಾರಗಳು ಅಡಿಕೆಯ ಬಗ್ಗೆ ಮಾಹಿತಿ ಕಲೆಹಾಕಲು ಮುಂದಾದವು.ಈ ನಿಟ್ಟಿನಲ್ಲಿ ಇಲ್ಲಿ ಏನೇನು ಆಗಿದೆ ಎಂದು ತಿಳಿಸುವ ಪ್ರಯತ್ನ ಇದಾಗಿದೆ.

1. ಆಹಾರ ಕಲಬೆರಕೆ ಕಾಯಿದೆ -1954 : ಗುಟ್ಟಾದ ಜನಪ್ರಿಯತೆ ಹೆಚ್ಚಾದಂತೆ ತಂಬಾಕಿನ ಇತರ ಉತ್ಪನ್ನಗಳಿಗೆ ಸಹಜವಾಗಿ ಬೇಡಿಕೆ 1990ರ ಆರಂಭದಲ್ಲಿ ಕುಸಿಯಲಾರಂಭಿಸಿತು. ಪರಿಣಾಮವಾಗಿ ಬಹುಶಃ ಒಂದು ಲಾಬಿ ಇದರ ವಿರುದ್ಧ ಶುರು ಆಯಿತು. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ 1993 ರಲ್ಲಿ ಸದ್ದಿಲ್ಲದೆ ಅಡಿಕೆ ಅಪಾಯಕಾರಿ ಎಂದು ಕಾನೂನು ಮಾಡಿತು.ಅನಾದಿ ಕಾಲದಿಂದಲೂ ಅಡಿಕೆ ಆಹಾರ ಸಾಮಗ್ರಿಯಾಗಿ ಇದ್ದುದರಿಂದ ಅಡಿಕೆ ಆಹಾರ ಕಲಬೆರಕೆ ತಡೆ ಕಾಯಿದೆ ಅಡಿಯಲ್ಲಿ ಕಠಿಣ ನಿಯಂತ್ರಣಕ್ಕೆ ಒಳಪಟ್ಟಿತು.ಈ ಕಾಯಿದೆಯ ರೂಲ್ 42ರ ಪ್ರಕಾರ ಅಡಿಕೆ ಉತ್ಪನ್ನದ ಪ್ರತೀ ಪೊಟ್ಟಣದಲ್ಲಿ,ಇವುಗಳಿಗೆ ಸಂಬಂಧಿಸಿದ ಜಾಹೀರಾತುಗಳಲ್ಲಿ ನವೆಂಬರ್ 9, 1993 ಇಂದ ದಪ್ಪ ಅಕ್ಷರಗಳಲ್ಲಿ ಚೂಯಿಂಗ್ ಆಫ್ ಸುಪಾರಿ ಇಸ್ ಇಂಜೂರಿಯಸ್ ಟು ಹೆಲ್ತ್ ಎಂದು ಕಡ್ಡಾಯವಾಗಿ ಮುದ್ರಿಸಲು ಶಾಸನ ವಿಧಿಸಲಾಯಿತು.

ಈ ಕಾಯಿದೆಯ ವಿರುದ್ಧ mamcos ಮತ್ತಿತರು 2003 ರಲ್ಲಿ ಪ್ರಶ್ನಿಸಿ ಇದರ ರದ್ದತಿ ಮಾಡಬೇಕೆಂದು ರಿಟ್ ಅರ್ಜಿ ಸಲ್ಲಿಸಿ 2007 ರಲ್ಲಿ ಈ ಅರ್ಜಿಯನ್ನು ಎತ್ತಿ ಹಿಡಿದು ಎಚ್ಚರಿಕೆ ನೀಡುವ ಮುದ್ರಣ ಕಾಯಿದೆಯನ್ನು ತೆಗೆದು ಹಾಕಿತು.ಆದರೆ ಈ ತೀರ್ಪಿನ ವಿರುದ್ಧ ಭಾರತ ಸರಕಾರ 4-8-2008 ರಂದು ಕರ್ನಾಟಕ ಹೈಕೋರ್ಟಿಗೆ ಮನವಿ ಮಾಡಿ ಮೊದಲಿನ ತೀರ್ಪ್ಪನ್ನು ರದ್ದುಗೊಳಿಸುವಂತೆ ಕೋರಿತು.

2.ನರಸಿಂಹಯ್ಯ ಸಮಿತಿ-1997 :  ಯುವಜನತೆ ಮೇಲೆ ಗುಟ್ಕಾ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಕರ್ನಾಟಕ ಸರಕಾರ ನೇಮಿಸಿದ ಈ ಸಮಿತಿ ಗುಟ್ಕಾ,ಸಿಗರೇಟ್,ಬೀಡಿ ಮತ್ತು ಇತರ ತಂಬಾಕುಯುಕ್ತ ಮೇಲೆ ಕಠಿಣ ನಿಯಂತ್ರಣ ಹೇರುವಂತೆ ಶಿಫಾರಸು ಮಾಡುವುದರೊಂದಿಗೆ ನಿಷೇಧ ಹೇರಲು ಆಗ್ರಹಿಸಿತ್ತು.

Advertisement

3.ಅಲಹಾಬಾದ್ ಹೈಕೋರ್ಟ್ ತೀರ್ಪು-2002 :  ಈ ಸಮಯದಲ್ಲಿ ಪ್ರಕಟಗೊಂಡ ಅನೇಕ ಸಂಶೋಧನಾ ಲೇಖನಗಳು,ವರದಿಗಳು ಅಡಿಕೆಯ ವಿವಿಧ ಉತ್ಪನ್ನಗಳ ಸೇವನೆ ಹಾನಿಕಾರಕ ಎಂಬ ಮಾಹಿತಿ ನೀಡಿದವು.ಇದರೊಂದಿಗೆ ವಿಶ್ವ ಆರೋಗ್ಯ ಸಂಸ್ಥೆಯು ಇದನ್ನೇ ಹೇಳಿತು.ಈ ಎಲ್ಲಾ ಅಂಶಗಳ ಆಧಾರದಲ್ಲಿ ಬಾಯಿ ಕ್ಯಾನ್ಸರ್ ಸೊಸೈಟಿ ಇದನ್ನು ಅಲಹಾಬಾದ್ ಹೈಕೋರ್ಟ್ ಮುಂದೆ ಇಟ್ಟು ಉತ್ತರ ಪ್ರದೇಶದಲ್ಲಿ ಪಾನ್ ಮಸಾಲ ಮತ್ತು ಗುಟ್ಕಾಕ್ಕೆ ನಿಷೇಧ ಹೇರಲಾಯಿತು.ಈ ನಿಷೇಧ ಮುಂದೆ ಹಲವು ರಾಜ್ಯಗಳಲ್ಲಿ ಕಂಡು ಬಂತು.‌

ಸುಪ್ರೀಂ ಕೋರ್ಟ್ ಅಂಗಳಕ್ಕೆ : ಅಲಹಾಬಾದ್ ಹೈಕೋರ್ಟ್ ಕೊಟ್ಟ ತೀರ್ಪು ವಿರುದ್ಧ ಅಡಿಕೆ ಬೆಳೆಗಾರರು ಸಂಸ್ಥೆಗಳು ಮತ್ತು ವ್ಯಾಪಾರಿಗಳು ತಕ್ಷಣ ಮಧ್ಯಪ್ರವೇಶಿಸುವಂತೆ ಮೊರೆಹೋಗಿದ್ದಾಗ ,5-8,-,2002 ರಂದು ಮೇಲಿನ ತೀರ್ಪಿಗೆ ತಡೆ ಆಜ್ಞೆ ನೀಡಿತು.  ಆದರೆ ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಗುಟ್ಕಾ ನಿಷೇಧದ ಬಗ್ಗೆ ಹೇಳುತ್ತಾ ಬಂದಿದ್ದು ಇದು ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ.

ಗುಟ್ಕಾ ಪ್ಲಾಸ್ಟಿಕ್ ಪೊಟ್ಟಣಗಳಿಗೆ 2010 ರಲ್ಲಿ ನಿಷೇಧ :  ಈ ಪೊಟ್ಟಣಗಳಿಂದ ಪರಿಸರ ಮಾಲಿನ್ಯ ಆಗುವುದೆಂದು ಭಾರತೀಯ ಅಸ್ತಮಾ ಆರೈಕೆ ಸೊಸೈಟಿ ರಾಜಸ್ಥಾನ ಹೈಕೋರ್ಟಿನಲ್ಲಿ ದಾವೆ ಹೂಡಿದಾಗ ಕೋರ್ಟ್ ಆಗ ರಾಜ್ಯದಲ್ಲಿ ಈ ಪ್ಯಾಕ್ಗಳಲ್ಲಿ ಗುಟ್ಕಾ ಉತ್ಪಾಡಿಸುವುದನ್ನು ನಿಷೇಧಿಸಿತು.ಇದರ ವಿರುದ್ಧ ಉದ್ಯಮ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು 2010 ರಲ್ಲಿ ನೀಡಿದ ರೂಲಿಂಗ್ ನೀಡಿ ಪ್ಲಾಸ್ಟಿಕ್ ಪೊಟ್ಟಣಗಳಲ್ಲಿ ಮಾರಾಟ ಮಾಡದಂತೆ ತಡೆಯಲು ಕೇಂದ್ರ ಸರಕಾರಕ್ಕೆ ಆದೇಶಿಸಿತು.

ಮತ್ತೆ ಸುಪ್ರೀಂ ಕೋರ್ಟ್ ಅಂಗಳಕ್ಕೆ :  ಮೇಲೆ ತಿಳಿಸಿದ ಎಲ್ಲಾ ಸಮಸ್ಯೆಗಳನ್ನು ಅಧ್ಯಯನ ಮಾಡಲು ಮುಂದೆ ಸುಪ್ರೀಂ ಕೋರ್ಟಿನ ಆದೇಶಕ್ಕನುಗುಣವಾಗಿ ನೇಮಿಸಲಾದ ಸಮಿತಿಯಲ್ಲಿ ಹಲವು ಮೆಡಿಕಲ್ ಸಂಶೋಧನಾ ಸಂಸ್ಥೆಗಳು ಅಧ್ಯಯನ ಮಾಡಿ 2011 ರಲ್ಲಿ ಸಾವಿರದ ಮುನ್ನೂರು ಪುಟಗಳ ವರದಿಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಿವೆ. ಈ ವರದಿಯು ಗುಟ್ಕಾ ಮತ್ತು ಪಾನ್ ಮಸಾಲ ಸೇವನೆಯಿಂದ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಿವೆ.

ಇದೇ ಸಂದರ್ಭದಲ್ಲಿ ಕ್ಯಾಂಪ್ಕೊ,ಮಾಮ್ಕೋ, ಟಿ ಎಸ್ ಎಸ್ ಹಾಗೂ ಗುಜರಾತಿನ ತಂಬಾಕು ಸಂಸ್ಥೆ ಇವೆಲ್ಲಾ ಬೆಳೆಗಾರರಿಗೆ ಬೆಂಬಲವಾಗಿ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿವೆ.ಇದರೊಂದಿಗೆ ಕೋರ್ಟ್ ಈ ವಿಚಾರಗಳ ಬಗ್ಗೆ ವಿಚಾರಣೆಗೆ ಎತ್ತಿಕೊಂಡು ತಜ್ಞರ ಸಮಿತಿಯ ವರದಿಯನ್ನು ಅರ್ಜಿದಾರರಿಗೆ ವಿತರಿಸಿ ಅವರು ಅದಕ್ಕೆ ಉತ್ತರ ಕೊಡುವಂತೆ ಆದೇಶಿಸಿದೆ.

Advertisement

ವಿಶ್ವ ಆರೋಗ್ಯ ಸಂಸ್ಥೆ : ಈ ಶತಮಾನದ ಆದಿ ಬಾಗದಿಂದ ಹಿಡಿದು ಕನಿಷ್ಟ ಹತ್ತು ವರ್ಷಕ್ಕೊಮ್ಮೆ ಆದರೂ ಈ ಸಂಸ್ಥೆ ಅಡಿಕೆ ಬಗ್ಗೆ ತಗಾದೆ ಎತ್ತಿದೆ.ಆರಂಭದಲ್ಲಿ ಗುಟ್ಕಾ, ಪಾನ್ ಮಸಾಲ ಇತ್ಯಾದಿಗಳು ಕ್ಯಾನ್ಸರ್ ಕಾರಕ ಎಂಬುದಾಗಿ ಹೇಳಿದ್ದು ಇದೀಗ ಅಡಿಕೆ ಕ್ಯಾನ್ಸರಿಗೆ ಕಾರಣ ಎನ್ನುತ್ತಿದೆ.ಇದು ಅಡಿಕೆ ಕ್ಷೇತ್ರಕ್ಕೆ ನುಂಗಲಾರದ ತುತ್ತಾಗಿದೆ. ಇತ್ತೀಚೆಗೆ ಬೆಳೆಗಾರರ ಒತ್ತಡ ಹಾಗೂ ಸಂಸ್ಥೆಗಳ ಆಸಕ್ತಿಯಿಂದಾಗಿ ಕೇಂದ್ರ ಸರ್ಕಾರ ಒಂದು ಅಧ್ಯಯನ ಸಮಿತಿಯನ್ನು CPCRI ನೇತೃತ್ವದಲ್ಲಿ ನೇಮಿಸಿದ್ದು ಇದು ಅಡಿಕೆಯ ಒಳಮರ್ಮವನ್ನು ಅಧ್ಯಯನ ಮಾಡಿ ವರದಿ ಸಲ್ಲಿಸಲಿದೆ. ಈ ವರದಿ ಆಧಾರದಲ್ಲಿ ಅಡಿಕೆ ಕ್ಷೇತ್ರದ ಭವಿಷ್ಯ ನಿರ್ಧಾರವಾಗಬಹುದು.

ಮೇಲಿನ ಎಲ್ಲಾ ವಿಚಾರಗಳನ್ನು ಗಮನಿಸಿದಾಗ ಅಡಿಕೆ ಮತ್ತು ಇದರ ವಿವಿಧ ಉತ್ಪನ್ನಗಳೂ ನಿಷೇಧದ ಬೀತಿಯಲ್ಲಿವೆ. ಆದರೆ ಇಲ್ಲಿ ಗಮನಿಸಬೇಕಾದ ಒಂದು ಪ್ರಮುಖ ಅಂಶವೆಂದರೆ ಭಾರತದಲ್ಲಿ ಯಾವುದನ್ನೂ ನಿಷೇಧಿಸುವುದು ಕಷ್ಟ ಸಾಧ್ಯ.ಒಂದೊಮ್ಮೆ ನಿಷೇಧ ಎಂಬ ಕಾನೂನು ಬಂದರೆ ಅದಕ್ಕೆ ಪರ್ಯಾಯ ತಕ್ಷಣ ಬಂದೇ ಬರುತ್ತದೆ.ಸರಕಾರ ನಿಷೇಧಕ್ಕೆ ಹೊರಟರೆ ಬದಲೀ ವ್ಯವಸ್ಥೆ ಬೆಳೆಗಾರರಿಗೆ ಮಾಡಿಕೊಟ್ಟು ಪರಿಹಾರವೂ ಕೊಡಬೇಕು.ಇವೆಲ್ಲಾ ಕಷ್ಟ.ಹಾಗಾಗಿ ಮುಂದೆ ಒಳ್ಳೆದಾಗಬಹುದೆಂಬ ನಿರೀಕ್ಷೆಯಲ್ಲಿ ಇರೋಣ.

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಡಾ|ವಿಘ್ನೇಶ್ವರ ಭಟ್‌ ವರ್ಮುಡಿ

ಡಾ|ವಿಘ್ನಶ್ವರ ಭಟ್ ವರ್ಮುಡಿ ಅವರು ಕೃಷಿಕರು. ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿದ್ದವರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನ ಸಂಸ್ಥೆಯದ ಪೆರ್ಲದ ನಲಂದಾ ಮಹಾವಿದ್ಯಾಲಯದ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೃಷಿ ಅರ್ಥಶಾಸ್ತ್ರಜ್ಞರಾಗಿ ಗುರುತಿಸಿಕೊಂಡಿದ್ದಾರೆ. ಹಲವು ಸಂಶೋಧನಾ ಬರಹಗಳು ಪ್ರಕಟವಾಗಿದೆ. ಅಡಿಕೆ ಮಾರುಕಟ್ಟೆ ಬಗ್ಗೆ ಅಧಿಕೃತವಾಗಿ ಮಾತನಾಡುವ ವ್ಯಕ್ತಿಯಾಗಿದ್ದಾರೆ. ಹಲವು ಸಂಘಟನೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದಾರೆ. ಅಡಿಕೆಯ ಬಗ್ಗೆ ವಿವಿಧ ಬರಹಗಳನ್ನು ಪ್ರಕಟಿಸಿದ್ದಾರೆ.

ಇದನ್ನೂ ಓದಿ

ಶರಾವತಿ ಯೋಜನೆ | ಜೀವವೈವಿಧ್ಯಕ್ಕೆ ಆಪತ್ತು- ಮನುಕುಲಕ್ಕೆ ವಿಪತ್ತು
September 23, 2025
11:05 AM
by: ದ ರೂರಲ್ ಮಿರರ್.ಕಾಂ
ನವರಾತ್ರಿ – ದಸರಾ | ಶಕ್ತಿ ತತ್ತ್ವದ ವಿಜ್ಞಾನ ಮತ್ತು ಸಂಸ್ಕೃತಿ
September 22, 2025
7:35 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಮಹಾಲಯ ಅಮಾವಾಸ್ಯೆ | ಪರಂಪರೆ, ತತ್ತ್ವ ಮತ್ತು ಆಧುನಿಕ ಜೀವನದ ಸೇತುವೆ
September 21, 2025
8:12 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಬದುಕು ಪುರಾಣ | ಜಂಭವು ಬದುಕಿಗಂಟಿದ ಕಳೆ!
September 21, 2025
7:58 AM
by: ನಾ.ಕಾರಂತ ಪೆರಾಜೆ

You cannot copy content of this page - Copyright -The Rural Mirror

Join Our Group