Advertisement
Opinion

#Alergy | ಪ್ರತಿ ಕ್ಷಣವೂ ಕಿರಿಕಿರಿ ಅನ್ನಿಸುವ ಅಲರ್ಜಿ | ಕಂಡುಕೊಳ್ಳಿ ಆಯುರ್ವೇದ ಪರಿಹಾರ

Share

ಅಲರ್ಜಿ #alergy –  ಪದೇಪದೇ ಸೀನು ಬರುವುದು, ಮೂಗಿನಿಂದ ನೀರು ಸೋರುವುದು, ಶೀತ, ಕೆಮ್ಮು, ಕಣ್ಣುಗಳು ಕೆಂಪಾಗುವುದು, ಮುಖ ಊದಿಕೊಳ್ಳುವುದು, ಚರ್ಮದ ತುರಿಕೆ, ಚರ್ಮದಲ್ಲಿ ಕೆಂಪು ಕಲೆಗಳು, ಪಿತ್ತಗಂದೆ ಬರುವುದು, ಗಂಟಲು ಕರಕರ, ಉಸಿರಾಟದಲ್ಲಿ ಅಡಚಣೆ ದ್ವನಿಯಲ್ಲಿ ಏರುಪೇರು, ವಿಪರೀತ ಆಯಾಸ, ಮೊದಲಾದ ಹಲವು ಲಕ್ಷಣಗಳು ಕಾಣಿಸಿಕೊಳ್ಳುವುದಕ್ಕೆ ಕಾರಣವಾಗಿರುವ ಅಂಶವನ್ನು ಅಲರ್ಜಿ ಎಂದು ಹೇಳಲಾಗುತ್ತದೆ.

ಅಲರ್ಜಿ ಎನ್ನುವುದು ಮಾನವನ ಶರೀರದ ರೋಗ ನಿರೋಧಕ ವ್ಯವಸ್ಥೆಗೆ ಸಂಬಂಧಪಟ್ಟ ಪ್ರತಿಕ್ರಿಯೆ. ಉದಾಹರಣೆಗೆ ಹೂವುಗಳ ಪರಾಗಕಣಗಳು, ಧೂಳು, ಹೊಗೆ, ಕೆಲವು ಆಹಾರ ಪದಾರ್ಥಗಳು, ಹಾಲು, ಮೊಟ್ಟೆ, ಸೋಯಾ, ಮೀನು ಮಾಂಸ, ಕೆಲವು ರೀತಿಯ ಔಷಧಿಗಳು( Antibiotics /painkillers/Bp tablets)) ಇಲ್ಲವೇ ಕೆಲವು ಪದಾರ್ಥಗಳನ್ನು ಮುಟ್ಟುವುದರಿಂದ, ಹಾಗೂ ಕೆಲವು ವಸ್ತುಗಳ ವಾಸನೆಯಿಂದ (ಅಗರ ಬತ್ತಿ, ಧೂಪ ), ಕ್ರಿಮಿ ಕೀಟಗಳ ಜಂತು ಸೊಳ್ಳೆ ಇವುಗಳ ಸ್ಪರ್ಶದಿಂದ ಹಾಗೂ ವಾತಾವರಣ ಬದಲಾವಣೆಯಿಂದ ನಮ್ಮ ಶರೀರದೊಳಗೆ ಅತಿಯಾದ ಪ್ರತಿಕ್ರಿಯೆ ಪ್ರಾರಂಭವಾಗುವುದನ್ನು ಅಲರ್ಜಿ ಎಂದು ಕರೆಯುತ್ತಾರೆ.

ಅಲರ್ಜಿಗೆ ಕಾರಣವಾದ ಪ್ರತಿಕ್ರಿಯೆಯನ್ನು allegic reaction ಅಂತ ಸಾಮಾನ್ಯವಾಗಿ ಕರೆಯುತ್ತೇವೆ. ನಾವು ಉಸಿರಾಡುವ ಗಾಳಿ,ಕುಡಿಯುವ ನೀರು, ಸೇವಿಸುವ ಆಹಾರಗಳ ಜೊತೆಗೆ ಒಳಗಡೆ ಪ್ರವೇಶಿಸುವ ಎಷ್ಟೋ ಕ್ರಿಮಿಕೀಟಗಳ ವಿರುದ್ಧ ಬಿಳಿ ರಕ್ತ ಕಣಗಳು ತೀವ್ರವಾಗಿ ಹೋರಾಡಿ ಆರೋಗ್ಯವನ್ನು ಸುಸ್ಥಿತಿಯಲ್ಲಿಡುತ್ತವೆ. ಇಂತಹ ಹಾನಿಯನ್ನು ಉಂಟುಮಾಡುವ ಪದಾರ್ಥಗಳು ನಮ್ಮ ಶರೀರದಲ್ಲಿ ತೀವ್ರ ಪ್ರತಿಕ್ರಿಯೆ ನೀಡುವುದನ್ನು Hypersentivity ಅಥವಾ ಅಲರ್ಜಿ ಎಂದು ಕರೆಯಲಾಗುತ್ತದೆ.

ಅಲರ್ಜಿಯಲ್ಲಿ ವಿವಿಧ ರೀತಿಗಳಿವೆ:
– ಶ್ವಾಸಕೋಶ ಸಂಬಂಧಪಟ್ಟ ಅಲರ್ಜಿ … ಧೂಳು ಹೊಗೆ ತಣ್ಣನೆಯ ಗಾಳಿ ಇವುಗಳಿಂದ ಪದೇಪದೇ ಸೀನು ಬರುವುದು, ಕೆಮ್ಮು, ಮೂಗು ಕಟ್ಟುವುದು, ಉಸಿರಾಟ ಸಮಸ್ಯೆ,ದಮ್ಮು ತಲೆನೋವು ಮೊದಲಾದ ಸಮಸ್ಯೆಗಳು ಉಂಟಾಗುವುದು… (Allergic rhinitis /Allergic bronchititis / Allergic sinusitis)
– ಚರ್ಮಕ್ಕೆ ಸಂಬಂಧಪಟ್ಟ ಅಲರ್ಜಿ (Skin allergy )… ಕೆಲವು ಔಷಧಿಗಳ ಸೇವನೆಯಿಂದ ಹಾಗೂ ಕೆಲವು ಆಹಾರ ಪದಾರ್ಥಗಳು ಇಲ್ಲವೇ ಕೆಲವು ವಸ್ತುಗಳ/ ಗಿಡ ಮರಗಳ/ ಕ್ರಿಮಿ ಕೀಟಗಳ ಸ್ಪರ್ಶದಿಂದ ಚರ್ಮದ ತುರಿಕೆ ಚರ್ಮಕೆಂಪಾಗುವುದು
(Urticaria /Allergic Dermatitis /skin rashes/ pimples)
– ಜೀರ್ಣಕೋಶಕ್ಕೆ ಸಂಬಂಧಪಟ್ಟ ಅಲರ್ಜಿ(Food allergy /ಆಹಾರ ಅಲರ್ಜಿ ).. ಕೆಲವು ಆಹಾರ ಪದಾರ್ಥಗಳ ಸೇವನೆಯಿಂದ ಶರೀರದಲ್ಲಿಅಲರ್ಜಿ ಉಂಟಾಗಿ ಅತಿಸಾರ ಮಲಬದ್ಧತೆ ವಾಂತಿ ಆಯಾಸ ಕಾಣಿಸಿಕೊಳ್ಳುವುದು.

ಆಯುರ್ವೇದ ಪರಿಹಾರ:
– ಆಹಾರದ ಅಲರ್ಜಿ…. ಅಲರ್ಜಿಗೆ ಕಾರಣವಾದ ಪದಾರ್ಥಗಳನ್ನು ತ್ಯಜಿಸುವುದು..
– ಅಗ್ನಿ ಅಥವಾ ಜೀರ್ಣಕಾರಿ ಶಕ್ತಿಯನ್ನು ಬಲಪಡಿಸಿಕೊಳ್ಳುವುದು
ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಬಿಸಿ ನೀರಿನ ಸೇವನೆ ಮಾಡುವುದು
ಅತಿಯಾಗಿ ತಿನ್ನುವುದನ್ನು ತಪ್ಪಿಸುವುದು
– ವಿರುದ್ಧ ಆಹಾರದ ಸೇವನೆ ನಿಷೇಧಿಸುವುದು(ಹಾಲುಹಣ್ಣು, ಹಾಲು ಮತ್ತು ಮೊಸರಿನ ಜೊತೆ ಮಾಂಸಹಾರ ಸೇವನೆ, Milkshakes ).
ಸಂಜೆ 7 ಗಂಟೆಯ ನಂತರ ಆಹಾರ ಸೇವಿಸುವುದನ್ನು ನಿಲ್ಲಿಸುವುದು.
ವಿಟಮಿನ್ C ಹೇರಳವಾಗಿರುವ ಆಹಾರ ಪದಾರ್ಥದ ಸೇವನೆ.
– ಸಂಸ್ಕರಿಸಿದ ಆಹಾರ ಪದಾರ್ಥಗಳು (junk food/ fastfood/ packed food etc) ಇವುಗಳ ಅತಿ ಸೇವನೆಯಿಂದ ಅಗ್ನಿ ಅಥವಾ ಜೀರ್ಣಕ್ರಿಯೆ ಶಕ್ತಿಯು ದುರ್ಬಲಗೊಂಡು ಆಹಾರದ ಅಲರ್ಜಿ ಸಮಸ್ಯೆ ಉಂಟಾಗುವುದು. ಸರಿಯಾದ ಆಹಾರವನ್ನು ಸರಿಯಾದ ಮಾರ್ಗಸೂಚಿ ಗಳನ್ನು ಬಳಸಿಕೊಂಡು ಆಹಾರ ಸೇವನೆ ಮಾಡುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಈ ಅಲರ್ಜಿ ಸಮಸ್ಯೆಯನ್ನು ನಿವಾರಿಸಬಹುದು.

Advertisement
ಬರಹ :
Dr Jyothi, Ayurveda
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಅರಣ್ಯ ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಪರಿವರ್ತನೆ : ಸಚಿವ ಕೃಷ್ಣ ಬೈರೇಗೌಡ

ಕೃಷಿ ಭೂಮಿಯ ಲಭ್ಯತೆ ಕಡಿಮೆಯಾಗಿ ಸಂಕಷ್ಟದಲ್ಲಿರುವ ರೈತರಿಗಾಗಿ ಸರ್ಕಾರವು ಅರಣ್ಯ ಭೂಮಿಯನ್ನು ಕೃಷಿ…

3 hours ago

ದೇಹವು ಆರೋಗ್ಯವಾಗಿದೆ ಎನ್ನಲು ಈ ಸಂಕೇತವೇ ಸಾಕು..

ಯಾವುದೇ ಕಾಯಿಲೆಗಳಿಲ್ಲದೆ ಆರೋಗ್ಯವಂತರಾಗಿರಲು ಎಲ್ಲರೂ ಇಷ್ಟಪಡುತ್ತಾರೆ. ಒಂದು ವೇಳೆ ಆರೋಗ್ಯ ಕೆಟ್ಟರೆ ಜೀವನವೇ…

3 hours ago

ಹೊಸ ರೇಷನ್ ಕಾರ್ಡ್ ಅನುಮೋದನೆ ಪ್ರಾರಂಭ | 2026 ಮಾರ್ಚ್ ವರೆಗೆ ಅವಕಾಶ

ಹೊಸ ರೇಷನ್ ಕಾರ್ಡ್ ಅನುಮೋದನೆ ಪ್ರಾರಂಭವಾಗಿದ್ದು 2026 ಮಾರ್ಚ್ ವರೆಗೆ ಅವಕಾಶ ಕರ್ನಾಟಕ…

3 hours ago

ಸ್ವಾವಲಂಬಿ ಸಾರಥಿ ಯೋಜನೆ | ಆಟೋ ಗೂಡ್ಸ್ ವಾಹನ ಖರೀದಿಗೆ ರೂ.4 ಲಕ್ಷ ಸಹಾಯಧನ

ಟ್ಯಾಕ್ಸಿ, ಆಟೋ ಟ್ಯಾಕ್ಟರ್, ಗೂಡ್ಸ್ ವಾಹನದ ಡ್ರೈವರ್ ಆಗಿದ್ದರೂ ಸ್ವಂತ ವಾಹನವಿಲ್ಲ ಎಂಬ…

3 hours ago

ಕ್ಯಾನ್ಸರ್ ಗುಣಪಡಿಸಲು ಗೋವಿನ ಉತ್ಪನ್ನಗಳು | ಮಧ್ಯಪ್ರದೇಶ ಸರ್ಕಾರ ಸಂಶೋಧನೆಗೆ 3.5 ಕೋಟಿ ಖರ್ಚು ಮಾಡಿದ ಹಣ ಎಲ್ಲಿ?

ಮಧ್ಯಪ್ರದೇಶ ಸರ್ಕಾರದಿಂದ ಅನುದಾನಿತ ಸಂಶೋಧನಾ ಉಪಕ್ರಮವು, ಸಾಂಪ್ರದಾಯಿಕ ಹಸು ಆಧಾರಿತ ಸಿದ್ಧತೆಗಳನ್ನು ಬಳಸಿಕೊಂಡು…

3 hours ago

ಭಾರತದ 44% ನಗರಗಳು ದೀರ್ಘಕಾಲದ ವಾಯು ಮಾಲಿನ್ಯ ಸಂಕಟದಲ್ಲಿ| CREA ಉಪಗ್ರಹ ಅಧ್ಯಯನದ ಶಾಕಿಂಗ್ ಬಹಿರಂಗ

ಉಪಗ್ರಹ ದತ್ತಾಂಶ ಆಧಾರಿತ CREA ವಿಶ್ಲೇಷಣೆಯ ಪ್ರಕಾರ, ಭಾರತದ 4,041 ನಗರಗಳಲ್ಲಿ 1,787…

3 hours ago