ಅರಣ್ಯ ಸುತ್ತಮುತ್ತ ಕೃಷಿ ಮಾಡುವ ರೈತರಿಗೆ ಕೃಷಿ ಭೂಮಿ ಮಂಜೂರಾತಿ : ಕೆಲ ಜಿಲ್ಲೆಗಳ ರೈತರಿಗೆ ಹಕ್ಕುಪತ್ರ ಬಿಡುಗಡೆ ಮಾಡಲಿರುವ ಕಂದಾಯ ಇಲಾಖೆ

March 26, 2024
11:59 PM

ರೈತರು(farmer) ಈ ಸಮಸ್ಯೆಗಳನ್ನು(problem) ಹಲವು ದಶಕಗಳ ಕಾಲದಿಂದ ಎದುರಿಸುತ್ತಿದ್ದಾರೆ. ಆದರೆ ಇದೀಗ ಕರ್ನಾಟಕ(Karnataka) ರಾಜ್ಯದಲ್ಲಿ ಸರಕಾರಿ(govt) ಅರಣ್ಯದ(forest) ಹತ್ತಿರದಲ್ಲಿ ಕೃಷಿ(Agriculture) ಮಾಡುತ್ತಿರುವ ಎಲ್ಲ ರೈತರಿಗೂ ಕೂಡ ಅರಣ್ಯ ಇಲಾಖೆ(Forest department) ಕಡೆಯಿಂದ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಅಂತಹ ರೈತರಿಗೆ ಕಂದಾಯ ಸಚಿವರು(Revenue Minister) ಇದೀಗ ಸಿಹಿ ಸುದ್ದಿ ನೀಡಿದ್ದಾರೆ.

Advertisement

ರಾಜ್ಯದ ಅರಣ್ಯ ಹಾಗೂ ಕಂದಾಯ ಜಂಟಿ ಸರ್ವೆ ನಡೆಸುವ ಮೂಲಕ ರೈತರು ಈ ಸಮಸ್ಯೆಗಳನ್ನು   ರೈತರ ಸಮಸ್ಯೆಗಳಿಗೆ ಅಂತ್ಯ ಹಾಡುವ ಭರವಸೆಯನ್ನು ನೀಡಲಾಗಿದೆ. ಇದರೊಂದಿಗೆ ಈ ಸಂಬಂಧದ ಮೂಲಕ ಸರಕಾರವು ಅಧಿಕೃತ ಅಧಿಸೂಚನೆಗಳನ್ನು ಹೊರಡಿಸಿದ್ದು ಈಗಾಗಲೇ ರಾಜ್ಯದಲ್ಲಿ ಜಂಟಿ ಸರ್ವೆ ಕೂಡ ಆರಂಭವಾಗಿದೆ.

ಸರಕಾರದ ಜಂಟಿ ಸರ್ವೆ ಇಲಾಖೆಯಿಂದ ರೈತರ ಭೂಮಿಯ ಬಗ್ಗೆ ಖಚಿತ ಮಾಹಿತಿಗಳನ್ನು ತಿಳಿಯಲಿದ್ದು ಒಂದು ವೇಳೆ ಅರಣ್ಯ ಇಲಾಖೆಯು ಕಂದಾಯ ಭೂಮಿಯನ್ನು ತಪ್ಪಾಗಿ ನಮೂದಿಸಿದ್ದರೆ ಅಥವಾ ನೋಟಿಫೈ ಮಾಡಿರುವುದು ಜಂಟಿ ಸರ್ವೆ ಹಾಗೂ ಡ್ರೋನ್ ಸರ್ವೆಯಿಂದ ಖಚಿತವಾದಲ್ಲಿ ಅಂತಹ ಭೂಮಿಯನ್ನು ಮಾಡಲು ಅರಣ್ಯ ಇಲಾಖೆಗೆ ಮನವಿಯನ್ನು ಸಲ್ಲಿಸಲಾಗುತ್ತದೆ ಎಂದು ಕಂದಾಯ ಸಚಿವರು ಮಾಹಿತಿ ನೀಡಿದ್ದಾರೆ.

ಇದರೊಂದಿಗೆ ತಿಳಿಸಿದ ಇವರು ಜಂಟಿ ಸರ್ವೆ ಬಳಿಕ ಕಂದಾಯ ಜಮೀನು ಹಾಗೂ ಅರಣ್ಯ ಜಮೀನು, ಇದರ ಗಡಿಗಳನ್ನು ನಿಖರವಾಗಿ ಗುರುತಿಸಲು ಸೂಚನೆ ನೀಡಿದ್ದು ಗಡಿ ಗುರುತಿಸಿದ ನಂತರವೇ ಅಂತಹ ಜಮೀನಿನಲ್ಲಿ ಕೃಷಿ ಚಟುವಟಿಕೆಯು ನಡೆಯುತ್ತಿದ್ದರೆ ಅಂತಹ ರೈತರಿಗೆ ರೈತ ಸಾಗುವಳಿ ಚೀಟಿಯನ್ನು ನೀಡಲಾಗುತ್ತದೆ ಇದರೊಂದಿಗೆ ಫಾರಂ 57ರ ಅಡಿಯ ಪ್ರಕಾರ ಅರ್ಹ ರೈತರು ಅರ್ಜಿ ಸಲ್ಲಿಸಿದರು ಕೂಡ ಬಕರ್ ಹುಕುಮ್ ಮೂಲಕ ಭೂಮಿ ಮಂಜೂರು ಮಾಡಲಾಗುವುದು ಎಂದು ತಿಳಿಸಲಾಗಿದೆ.

ರಾಜ್ಯದಲ್ಲಿ ಕಳೆದ ಎರಡು ತಿಂಗಳಗಳಿಂದ ಎಲ್ಲಾ ಕಡೆ ಜಂಟಿ ಸರ್ವೆ ಕಾರ್ಯವು ಪ್ರಗತಿಯಲ್ಲಿದ್ದು, ಚಿಕ್ಕಬಳ್ಳಾಪುರ, ಚಾಮರಾಜನಗರ, ಕೊಡಗು, ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಕಾರಿ ಭೂ ಮಾಪಕರು ಹಾಗೂ ಪರವಾನಗಿ ಹೊಂದಿರುವಂತಹ ಭೂಮಾಪಕರ ಸಹಾಯಗಳಿಂದ ಸರ್ವೆ ಕೆಲಸವನ್ನು ಆರಂಭಿಸಲಾಗಿದೆ.

Advertisement

ಈ ಕಾರ್ಯದಲ್ಲಿ ಅರಣ್ಯ ಮತ್ತು ಕಂದಾಯ ಭೂಮಿಯಾಗಿ ಗುರುತಿಸಿರುವ ಸಂಬಂಧ ಪಟ್ಟ ಹೆಚ್ಚು ಸಮಸ್ಯೆಗಳಿರುವ ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಬೇರೆ ಬೇರೆ ಜಿಲ್ಲೆಗಳಿಂದ ಆದ್ಯತೆಯ ಮೇರೆಯಂತೆ ಭೂಮಾಪಕರನ್ನು ತುರ್ತು ನಿಯೋಜನೆಗೊಳಿಸಿ ಜಂಟಿಯಾಗಿ ಸರ್ವೆ ಕೆಲಸ ಮುಗಿಸಲು ವೇಗ ನೀಡಲಾಗಿದೆ ಇದರೊಂದಿಗೆ ಪ್ರತಿ ಜಿಲ್ಲೆಯ ಜಮೀನನ್ನು ಸರ್ವೆ ನಡೆಸಲು ಡ್ರೋನ್ ಸರ್ವೇ ಮೂಲಕ ಚಾಲನೆ ನೀಡಲಾಗಿದೆ ಎಂದು ಕಂದಾಯ ಸಚಿವರು ಮಾಹಿತಿ ನೀಡಿದ್ದಾರೆ.

Advertisement

– ಅಂತರ್ಜಾಲ ಮಾಹಿತಿ

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅಡಿಕೆ ಕೊಳೆರೋಗ | ಸಿಎಂ ಜೊತೆ ಶಾಸಕ ಅಶೋಕ್ ಕುಮಾರ್ ರೈ ಚರ್ಚೆ
August 14, 2025
2:53 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 14-08-2025 | ಆ.20 ರವರೆಗೂ ಮಳೆ -ತುಂತುರು ಮಳೆ
August 14, 2025
2:48 PM
by: ಸಾಯಿಶೇಖರ್ ಕರಿಕಳ
ಸಗಣಿಯಿಂದ 5500 ಕಿಮೀ ಮಾಲಿನ್ಯ ರಹಿತ ಪ್ರಯಾಣ..!
August 14, 2025
7:39 AM
by: ವಿಶೇಷ ಪ್ರತಿನಿಧಿ
ಬಾಗಿಲು ಇಲ್ಲದ ಮನೆಯಂತಾದ ಕನ್ನಡ ಸ್ಥಿತಿ : ರಾಘವೇಶ್ವರ ಶ್ರೀ
August 14, 2025
7:04 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group