ಇದು ಮಲೆನಾಡಿನ(Malenadu) ಕರಾವಳಿಯ(Coastal) ಮನೆ ಮನೆ(House) ಕಥೆ…., ಒಂದಷ್ಟು ಆಪ್ತರು ಈಗ ಕಾಲ ಬದಲಾಗಿದೆ. ಪೇಟೆ ಪಟ್ಟಣದಿಂದ(City) ಯುವಕರು(Youths) ಅಲ್ಲಲ್ಲಿ ಊರಿಗೆ ಮರಳುತ್ತಿದ್ದಾರೆ ಎನ್ನುವ ಆಶಾವಾದ ದ ಅಭಿಪ್ರಾಯವನ್ನೂ ನೀಡಿದ್ದಾರೆ. ಆದರೆ ಯಾರೇ ವಾಪಸು ಬಂದರೂ ಮೊದಲಿನ ಸಾಂಸ್ಕೃತಿಕ ಶ್ರೀಮಂತಿಗೆಯ(Rich Culture) ಮಲೆನಾಡು ಕರಾವಳಿಯ ಜನ ಜೀವನ ಶೈಲಿಯ ದಿನಕ್ಕೆ ಮರಳಲಾಗದ ಪರಿಸ್ಥಿತಿ ಗೆ ಬಂದಿದೆ.
ಮಲೆನಾಡು ಕರಾವಳಿಯ ಜನರ ಜೀವನಾಧಾರದ ಅಡಿಕೆ ಬೆಳೆ ಹಲವಾರು ಸವಾಲುಗಳ ನಡುವೆ ಇದೆ. ಇವತ್ತಿನ ತಂತ್ರಜ್ಞಾನ ಯುಗದ ಪರಾಕಾಷ್ಠೆಯಲ್ಲಿ ಎಲ್ಲೋ ಕೂತೇ ನಮ್ಮೂರ ಅಡಿಕೆ ತೋಟ ನಿರ್ವಹಣೆ ಮಾಡಬಹುದು. ಆದರೆ ಕಳೆದು ಹೋದ ಆಪ್ತ ಪರಿಸರ ಸೃಷ್ಟಿಸಲು ಸಾಧ್ಯವೇ…? ಆ ಕಾಲದ ಮುಗ್ದತೆ , ನಿಷ್ಕಲ್ಮಶ ಪ್ರೀತಿ ಮತ್ತೆ ಸಮಾಜದಲ್ಲಿ ಸಿಗುತ್ತದೆಯೇ… ಗೋವಿಲ್ಲದ, ಕಾಡಿಲ್ಲದ, ಸರಿಯಾದ ಕಾಲ ಕಾಲಕ್ಕೆ ಮಳೆ ಬರದ ಸಂಪೂರ್ಣ ವ್ಯತ್ಯಯದ ವಾತಾವರಣದಲ್ಲಿನ ಈ ಮಲೆನಾಡು ವರ್ಷದಿಂದ ವರ್ಷಕ್ಕೆ ತನ್ನ ವ್ಯಾಪ್ತಿ ಕುಗ್ಗಿಸಿಕೊಂಡು ಮುಂದೆ ಮಲೆನಾಡಿನಲ್ಲಿ ಕೃಷಿ ಬದುಕು ಮಾಮೂಲಿ ದೈನಂದಿನ ಬದುಕೂ ಕಷ್ಟವಾದ ಈ ಹೊತ್ತಿನಲ್ಲಿ ಮುಂದಿನ ಪೀಳಿಗೆ ಇಲ್ಲಿ ನೆಲೆಯೂರಲಾರರು…
ನಾವು ನಮ್ಮ ಮಕ್ಕಳನ್ನು ಭಗವಂತ ನಮಗೆ ಕೊಟ್ಟ ಕೊಡುಗೆ ಎಂದು ಅವರನ್ನು ನಮಗಾಗಿ, ಸಮಾಜದ ಸತ್ಪ್ರೆಜೆಗಳಾಗಿ ರೂಪಿಸದೇ ರೋಬೋಟ್ ತರಹ ಹದಿನೈದನೇ ವರ್ಷಕ್ಕೇ ವಿಧ್ಯಾಭ್ಯಾಸಕ್ಕೆಂದು ಮನೆಯಿಂದ ಹೊರಗಟ್ಟಿದ
ದುಷ್ಪರಿಣಾಮ ಮತ್ತೆ ಯಾವತ್ತೂ ಮಕ್ಕಳು ಮನೆಗೆ ಬರಲಾರದಂತಾಗಿದ್ದಾರೆ ಎನಿಸುತ್ತದೆ.
ಇವತ್ತಿನ ಮಕ್ಕಳು ತಂದೆ ತಾಯಿ ಗಳ ಜೊತೆಗೆ ಕರಾಟೆ, ಸಂಗೀತ, ಯೋಗ, ಅಬಾಕಸ್, ಕ್ರಿಡಾ ತರಬೇತಿ, ಟ್ಯೂಷನ್ , ಕಾನ್ವೆಂಟ್ , ಶಾಲೆ, ಕಾಲೇಜು ಮತ್ತೆ ನೌಕರಿ ಮದುವೆ… ಈ ನಡುವೆ ನಮ್ಮ ಮಕ್ಕಳಾಗಿ ಮಕ್ಕಳು ನಮಗೆ ಸಿಗುವುದು ಎಷ್ಟು ಸಮಯ…? ನಮ್ಮ ಪೋಷಕ ಬಂಧುಗಳು ಮಕ್ಕಳನ್ನು ಏನೋ ರೂಪಿಸಿ ಯಾರದ್ದೋ ತರಹ ಅದೆಷ್ಟೋ ಎತ್ತರಕ್ಕೇರಿಸಲು ಸಿಕ್ಕ ಸಿಕ್ಕ ಏಣಿ ಹುಡುಕಿ ಎತ್ತರಕ್ಕೇರಿಸಿದರೆ ಮುಂದೆ ಮಕ್ಕಳು ಮತ್ತೇ ಆ ಏಣಿ ಇಳಿದು ಅಪ್ಪ ಅಮ್ಮರ ಬಳಿಗೆ ಮರಳವು..
ನಮ್ಮ ಮಕ್ಕಳು ಅದೇನೇ ಸಾಧನೆ ಮಾಡಲಿ, ಅದೆಷ್ಟೇ ಎತ್ತರದ ಹುದ್ದೆಗೇರಲಿ… ನಮಗೆ ನಮ್ಮ ಮಕ್ಕಳು ಮಕ್ಕಳಾಗೇ ಉಳಿಯಬೇಕು.. ನಮ್ಮ ಮಕ್ಕಳು ನಮ್ಮ ನೋಡೋಲ್ಲ.. ನಮಗೆ ವೃದ್ದಾಶ್ರಮವೇ ಗತಿ ಎನ್ನುವವರು ನೂರಕ್ಕೆ ನೂರರಷ್ಟು ಪೋಷಕತ್ವದಲ್ಲಿ ವಿಫಲರಾಗಿದ್ದಾರೆಂದೇ ಅರ್ಥ… ಇದು ಹಳ್ಳಿ ನಗರ ಸೇರಿದಂತೆ ಎಲ್ಲಾ ಕಡೆಯ ಪೋಷಕರಿಗೂ ಅನ್ವಯಿಸುತ್ತದೆ.
ಹಳ್ಳಿಯ ಮನೆ ಮತ್ತೆ ಮೊದಲಿನ ವೈಭವ ಕಾಣದು. ಮಕ್ಕಳು ಪೇಟೆಯಿಂದ ಹಳ್ಳಿಗೆ ಬಂದು ದೊಗಲೆ ಚೆಡ್ಡಿ ಹಾಕಿ ಯಾವತ್ತೋ ಒಂದು ದಿನ ತೋಟ ಗದ್ದೆ ಓಡಾಡಬಹುದು… ಆದರೆ ಅಜ್ಜ ಅಪ್ಪ ಮಗ ಮೊಮ್ಮಗ ಎಂಬ ಒಂದೊಂದೇ ಕೊಂಡಿ ಜೋಡಣೆ ಯಾಗದೇ ಒಂದೇ ಸಾರಿ ಹತ್ತು ಇಪ್ಪತ್ತು ವರ್ಷಗಳ ನಂತರ ಹಳ್ಳಿಯ ಮನೆಗೆ ಸಡನ್ ಆಗಿ ಎತ್ತರದಿಂದ ಜಂಪು ಮಾಡಿ ಹಾರಿದರೆ ಖಂಡಿತವಾಗಿಯೂ ಆತ ಇಲ್ಲಿನ ಬದುಕಿಗೆ ಹೊಂದಾಣಿಕೆ ಮಾಡಿಕೊಳ್ಳಲು ಕಷ್ಟ..
ಆದರೂ ಪೇಟೆಯಲ್ಲಿ ದುಡಿದ ಅನೇಕರು ಹಳ್ಳಿಗೆ ಬಂದು ಯಶಸ್ವಿಯಾಗಿದ್ದಾರೆ. ಅವರಲ್ಲಿ ಅಂತಹ ನಿಯತ್ತು ಇತ್ತು ಹಾಗಾಗಿ ಅವರು ಯಶಸ್ವಿಯಾಗಿದ್ದಾರೆ. ಆದರೆ ಎಲ್ಲರೂ ಈ ನಿಯತ್ತು ಇಲ್ಲದೇ ಬಂದರೆ ಜಂಪ್ ಮಾಡಿದರೆ ಸೊಂಟ ಮುರಿತದೆ.. ಗ್ರಾಮೀಣ ಬದುಕು ವಿಫಲವಾಗುತ್ತದೆ… ಎಪ್ಪತ್ತು ಎಂಬತ್ತರ ದಶಕದ ಮಾಡೆಲ್ ಗಳೇ ಈ ಮಲೆನಾಡು ಕರಾವಳಿಯ ಕೊನೆಯ ಪೀಳಿಗೆ…. ನಾವು ಈಗ ಮಲೆನಾಡು ಗಿಡ್ಡ ಜಾನುವಾರು ಉಳಿಸಿ.. ಮಲೆನಾಡು ಗುಡ್ಡ ಉಳಿಸಿ ಎನ್ನುವ ಹೋರಾಟ ಮಾಡುತ್ತಿದ್ದೇವೆ… ಮುಂದೆ “ಮಲೆನಾಡು ಬುಡ್ಡ (ವೃದ್ದರ) ಉಳಿಸಿ … ಎನ್ನುವ ಹೋರಾಟ ಮಾಡುವ ದಿನಗಳ ಎಲ್ಲೆಂದರೆಲ್ಲಿ ಕಾಣುತ್ತದೆ ” ವೃದ್ದಾಶ್ರಮ” ಗಳು ಆರಂಭದ ಟ್ರೆಂಡ್ ಆಗುವ ದಿನಗಳತ್ತಾ ಸಾಗುತ್ತಿದ್ದೇವೆ.., ಹಾಗಾಗದಿರಲಿ..