ಈಗಲೇ ಬತ್ತಿದ ಜೀವನದಿ ಕಾವೇರಿ | KRS ಅಣೆಕಟ್ಟಿನಲ್ಲಿ ಕ್ಷೀಣಿಸಿದ ನೀರಿನ ಪ್ರಮಾಣ | ಕುಡಿಯುವ ನೀರಿಗೆ ಉಂಟಾಗಲಿದೆ ಹಾಹಾಕಾರ…!?

December 25, 2023
2:14 PM

ಜೀವನದಿ ಕಾವೇರಿ ಬರಿದಾಗಿದ್ದಾಳೆ. ಹಿಂದೆ ಕಂಡು ಕೇಳರಿಯದಷ್ಟು ಕಾವೇರಿ ನದಿಯ ಒಡಲು ಖಾಲಿಯಾಗಿದೆ. ಈ ಬಾರಿ ಮುಂಗಾರು ಹಾಗೂ ಹಿಂಗಾರು ಎರಡೂ ಕೈಕೊಟ್ಟ ಹಿನ್ನೆಲೆ KRS ಆಣೆಕಟ್ಟೆಯಲ್ಲಿ ನೀರಿನ ಪ್ರಮಾಣ (KRS Dam Water level) ಕ್ಷೀಣಿಸಿದ್ದು, ರೈತರ ಬೇಸಿಗೆ ಬೆಳೆ ಸೇರಿದಂತೆ ಕುಡಿಯುವ ನೀರಿಗೆ (Drinking Water) ತೊಂದರೆ ಉಂಟಾಗಲಿದೆ. ಒಂದು ವೇಳೆ ಮಳೆ ಬಾರದಿದ್ದರೆ ಬೆಂಗಳೂರು (Bengaluru) ಸೇರಿದಂತೆ ಮೈಸೂರು, ಮಂಡ್ಯ, ರಾಮನಗರ ಜಿಲ್ಲೆಗಳಲ್ಲಿ ನೀರಿನ ಹಾಹಾಕಾರ ಸೃಷ್ಟಿಯಾಗಲಿದೆ. 

Advertisement

ಕೆಆರ್‌ಎಸ್‌ನಲ್ಲಿ ನೀರಿನ ಮಟ್ಟ ಕುಸಿದಿರುವ ಹಿನ್ನೆಲೆಯಲ್ಲಿ ಕಳೆದ ವಾರ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ನೇತೃತ್ವದಲ್ಲಿ KRS ನಲ್ಲಿ ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆ ನಡೆಸಲಾಗಿದೆ. ಸಭೆ ಬಳಿಕ ನೀರಿನ ಕೊರತೆ ಹಿನ್ನೆಲೆ ರೈತರಿಗೆ ಬೇಸಿಗೆ ಬೆಳೆ ಬೆಳೆಯದಂತೆ ಸೂಚನೆ ನೀಡಲಾಗಿದೆ.

6 ರಿಂದ 8 ಟಿಎಂಸಿ ಡೆಡ್ ಸ್ಟೋರೇಜ್ : ಮತ್ತೊಂದು ಕಡೆ ಕಾವೇರಿ ನೀರು ಪ್ರಾಧಿಕಾರ ಜನವರಿ ಅಂತ್ಯದವರೆಗೆ ಮತ್ತೆ ತಮಿಳುನಾಡಿಗೆ ಪ್ರತಿನಿತ್ಯ ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶ ನೀಡಿದೆ. ಸದ್ಯ ಡ್ಯಾಂನಲ್ಲಿ ಸುಮಾರು 20 ಟಿಎಂಸಿ ನೀರು ಶೇಖರಣೆಯಾಗಿದೆ. ಆದರೆ ಇದರಲ್ಲಿ ಸುಮಾರು 6 ರಿಂದ 8 ಟಿಎಂಸಿ ಡೆಡ್ ಸ್ಟೋರೇಜ್ ಆಗಿದೆ.

ಬಳಕೆಗೆ ಬೇಕು ಇಷ್ಟು ನೀರು : ಇನ್ನು ಬಳಕೆಗೆ 12 ರಿಂದ 13 ಟಿಎಂಸಿ ನೀರು ಮಾತ್ರ ಲಭ್ಯವಾಗಲಿದೆ. ಈ ನಡುವೆ ಕುಡಿಯುವ ನೀರಿಗಾಗಿ ಪ್ರತಿ ತಿಂಗಳು 2 ರಿಂದ ಎರಡೂವರೆ ಟಿಎಂಸಿ ನೀರು ಬೇಕಾಗಿದೆ. ಹೀಗಾಗಿ ಡ್ಯಾಂನಲ್ಲಿ ಶೇಖರಣೆಯಾಗಿರುವ ನೀರು ಜೂನ್ ವೇಳೆಗೆ ಖಾಲಿಯಾಗಲಿದ್ದು, ಅಷ್ಟರಲ್ಲಿ ವರುಣ ದೇವ ಕೃಪೆ ತೋರದಿದ್ದರೆ, ಕುಡಿಯುವ ನೀರಿಗೆ ಜನರು ಹಾಹಾಕಾರ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ.

ಒಟ್ಟಾರೆ ಈ ಬಾರಿ ವರುಣ ದೇವ ಕೈಕೊಟ್ಟ ಹಿನ್ನೆಲೆ ಇತ್ತ ರೈತರು ಬೆಳೆ ಬೆಳೆಯಲಾಗದೆ ಪರಿತಪಿಸುತ್ತಿದ್ದರೆ ಮತ್ತೊಂದು ಕಡೆ ಕಾವೇರಿ ನೀರು ಪ್ರಾಧಿಕಾರ ತಮಿಳುನಾಡು ಪರವಾಗಿ ಆದೇಶ ನೀಡುವ ಮೂಲಕ ಒಂದರ ಹಿಂದೆ ಒಂದರಂತೆ ಬರೆ ಎಳೆಯುತ್ತಿದೆ. ಈಗ ರೈತರ ಸಂಕಟದ ಜೊತೆಗೆ ಕುಡಿಯುವ ನೀರಿಗೂ ತಾತ್ಪರ್ಯ ಎದುರಾಗಲಿದ್ದು, ಮುಂದೆ ಕುಡಿಯುವ ನೀರಿಗಾಗಿ ಜನ ಬೀದಿಗೆ ಇಳಿಯುವ ಸಂದರ್ಭ ನಿರ್ಮಾಣವಾಗಲಿದೆ.

– ಅಂತರ್ಜಾಲ ಮಾಹಿತಿ

Kaveri is drained of life. The river bed of Kaveri is empty like never seen before. This time due to both Monsoon and Hindsoon, the water level in KRS Dam has decreased and there will be problem for drinking water including summer crops of farmers. If there is no rain, there will be water shortage in Mysore, Mandya, Ramanagara districts including Bengaluru

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮುಂಗಾರು ಮೇ 27 ರಂದು ಆರಂಭ | ನಿಗದಿತ ಸಮಯಕ್ಕಿಂತ ಮೊದಲೇ ಮಳೆಗಾಲ ಆರಂಭ | ಕೇರಳದಲ್ಲಿ ಇಂದು ಮಳೆ ಸಾಧ್ಯತೆ |
May 13, 2025
7:20 AM
by: ದ ರೂರಲ್ ಮಿರರ್.ಕಾಂ
ಈ ರಾಶಿಯವರಿಗೆ, ಮುಟ್ಟಿದ್ದೆಲ್ಲ ಚಿನ್ನ ಆ ರಾಶಿಗಳು ಯಾವುದು ತಿಳಿಯೋಣ
May 13, 2025
6:53 AM
by: ದ ರೂರಲ್ ಮಿರರ್.ಕಾಂ
ಆಪರೇಷನ್ ಸಿಂದೂರ್ ಕೇವಲ ಹೆಸರಲ್ಲ, ಅದು ದೇಶದ ಜನರ ಸಾಮೂಹಿಕ ಭಾವನೆ – ಪ್ರಧಾನಿ ನರೇಂದ್ರ ಮೋದಿ
May 12, 2025
10:14 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 12-05-2025 | ಇಂದು ರಾಜ್ಯದಾದ್ಯಂತ ಅಲ್ಲಲ್ಲಿ ಮಳೆಯ ಮುನ್ಸೂಚನೆ
May 12, 2025
2:17 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group