arecanut | ಮ್ಯಾನ್ಮಾರ್‌ ಅಡಿಕೆ ಕಳ್ಳ ಸಾಗಾಣಿಕೆಗೆ ಪರ್ಯಾಯ ದಾರಿ…! | ತ್ರಿಪುರಾದಲ್ಲಿ ರೈತರ ಪ್ರತಿರೋಧ |

October 23, 2022
9:21 PM

ಮ್ಯಾನ್ಮಾರಿನಿಂದ ಅಡಿಕೆ ಕಳ್ಳಸಾಗಾಣಿಕೆ ತಡೆಗೆ ಅಸ್ಸಾಂ ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಈಚೆಗೆ ಅಡಿಕೆ ಕಳ್ಳಸಾಗಾಣಿಕೆಯ ಕಿಂಗ್‌ಪಿನ್‌ ಒಬ್ಬನನ್ನು ಬಂಧಿಸಿದ್ದಾರೆ. ಇದೀಗ ಅಡಿಕೆ ಕಳ್ಳಸಾಗಾಣಿಕೆದಾರರು ಪರ್ಯಾಯ ಮಾರ್ಗವನ್ನು ಬಳಸುತ್ತಿದ್ದಾರೆ. ಹಳ್ಳಿಗಳಲ್ಲಿ ಅಡಿಕೆ ದಾಸ್ತಾನುಗೊಂಡು ಆ ಬಳಿಕ ಭಾರತದಲ್ಲಿ ಅಡಿಕೆ ಸಾಗಾಟ ನಡೆಯುತ್ತಿದೆ.  ಈ ನಡುವೆ ತ್ರಿಪುರಾರದಲ್ಲಿ ಅಡಿಕೆ ಕಳ್ಳಸಾಗಾಣಿಕೆದಾರರ ಹೆಸರಿನಲ್ಲಿ ಪೊಲೀಸರ ಕಿರುಕುಳವಾಗುತ್ತಿದೆ, ಅಡಿಕೆ ವ್ಯಾಪಾರಿಗಳು ಅಡಿಕೆ ಖರೀದಿ ಮಾಡುತ್ತಿಲ್ಲ ಎಂದು ಕೃಷಿಕರು ಪ್ರತಿಭಟನೆಯನ್ನೂ ನಡೆಸಿದ್ದಾರೆ.

Advertisement

ಮಿಜೋರಾಂ ಮತ್ತು ಅಸ್ಸಾಂ ಮೂಲಕ ಅಡಿಕೆ ಕಾರಿಡಾರ್ ಆಗಿ ಬಳಸಿಕೊಂಡು ಮ್ಯಾನ್ಮಾರ್‌ನಿಂದ ಅಡಿಕೆ ಕಳ್ಳಸಾಗಣೆ ನಡೆಯುತ್ತಿರುವುದನ್ನು ತಡೆಯಲು ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಬಳಿಕ ಇದೀಗ ಹೊಸ ವಿಧಾನಗಳನ್ನು ಕಂಡುಕೊಂಡು , ಆ ಮೂಲಕ ಭಾರತದೊಳಕ್ಕೆ ಅಡಿಕೆ ಕಳ್ಳಸಾಗಾಣಿಕೆ ನಡೆಯುತ್ತಿದೆ ಎಂದು ಅಸ್ಸಾಂ ಪೊಲೀಸರು ಶನಿವಾರ ತಿಳಿಸಿದ್ದಾರೆ.

ಮ್ಯಾನ್ಮಾರ್‌ನ ಚಂಪೈ ಗಡಿಯ ಮೂಲಕ ಮಿಜೋರಾಂಗೆ  ಅಡಿಕೆಗಳು ಬಂದ ನಂತರ ಅವುಗಳನ್ನು  ಅಲ್ಲಿನ ಗ್ರಾಮೀಣ ಪ್ರದೇಶದ ವಿವಿಧ ಗೋದಾಮುಗಳಲ್ಲಿ ರೈತರ ಮನೆಯಲ್ಲಿ ಸಂಗ್ರಹಿಸಲಾಗುತ್ತದೆ. ಈ ಹಿಂದೆ ಲಾರಿಗಳಲ್ಲಿ ಅಸ್ಸಾಂಗೆ ಅಡಿಕೆ ಸಾಗಿಸಲಾಗುತ್ತಿತ್ತು. ಆದರೆ ಈಗ ಸಣ್ಣ ವಾಹನಗಳ ಮೂಲಕ ಹಳ್ಳಿಯ ದಾರಿಯಲ್ಲಿ ಸಾಗಾಟ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರತೀ ಗ್ರಾಮಗಳಲ್ಲಿ ಪೊಲೀಸ್‌ ಕಣ್ಗಾವಲು ಸಾಧ್ಯತೆ ಕಡಿಮೆ ಇದೆ.  ಒಂದು ವೇಳೆ ಪೊಲೀಸ್‌ ದಾಳಿ ನಡೆದರೂ ಸಣ್ಣ ವಾಹನಗಳಲ್ಲಿ ಅಡಿಕೆ ವಶವಾದರೆ ನಷ್ಟದ ಪ್ರಮಾಣವೂ ಕಡಿಮೆ ಇರುತ್ತದೆ ಎನ್ನುವುದು ಕಳ್ಳ ಸಾಗಾಣಿಕೆ ಮಾಡುವವರ ಉದ್ದೇಶವೂ ಆಗಿದೆ.

ಅಸ್ಸಾಂ ಗಡಿ ದಾಟಿದ ನಂತರ ಮೇಘಾಲಯದ ಉಮ್ಕಿಯಾಂಗ್ ಪ್ರದೇಶದಲ್ಲಿ ಮತ್ತೆ ಅಡಿಕೆ ದಾಸ್ತಾನು ನಡೆಯುತ್ತದೆ. ಅಲ್ಲಿಂದ ದೊಡ್ಡ ವಾಹನಗಳ ಮೂಲಕ ದೇಶದ ವಿವಿಧ ಕಡೆಗಳಿಗೆ ರವಾನೆಯಾಗುತ್ತದೆ. ಈ ಪ್ರದೇಶದಲ್ಲಿ ಅಡಿಕೆಯೂ ಬೆಳೆಯುವುದರಿಂದ ಸಮಸ್ಯೆಗಳೂ ದೂರವಾಗುತ್ತದೆ.

ಹೀಗಾಗಿ ಅಸ್ಸಾಂ ಭಾಗದ ವಿವಿಧ ಕಡೆಗಳಲ್ಲಿ ಪೊಲೀಸರು ಆಗಾಗ ದಾಳಿ ಮಾಡುತ್ತಿದ್ದಾರೆ. ಅಕ್ರಮ ಆಮದು ಹಾಗೂ ದಾಸ್ತಾನು ವಿರುದ್ದ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವ ವೇಳೆ ಅಡಿಕೆ ವ್ಯಾಪಾರಿಗಳು ಹಾಗೂ ಕೆಲವು ರೈತರೂ ವಿರೊಧ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಅಸ್ಸಾಂ ಸೇರಿದಂತೆ ವಿವಿದೆಡೆ ಅಡಿಕೆ ಸಾಗಾಟಕ್ಕೆ ಸೂಕ್ತವಾದ ದಾಖಲೆಗಳಿಗೆ ಪೊಲೀಸರು ತಪಾಸಣೆ ನಡೆಸಲು ಆರಂಭಿಸಿದ್ದಾರೆ. ಕೃಷಿಕರುಗಳಿಗೆ ಕೃಷಿ ಇಲಾಖೆ ವತಿಯಿಂದ  ಗುರುತಿನ ಚೀಟಿ ನೀಡುವ ಯೋಜನೆ ಸಿದ್ಧವಾಗುತ್ತಿದೆ.

Advertisement

ಉತ್ತರ ತ್ರಿಪುರಾದ  ಅನೇಕ ಹಳ್ಳಿಗಳಲ್ಲಿ ಅಡಿಕೆ ಮುಖ್ಯ ಬೆಳೆಯಾಗಿದೆ. ವ್ಯಾಪಾರಿಗಳು ಈ ರೈತರಿಂದ ಅಡಿಕೆಗಳನ್ನು ಖರೀದಿಸುತ್ತಾರೆ ಮತ್ತು ಅಸ್ಸಾಂ ಮತ್ತು ಇತರ ರಾಜ್ಯಗಳ ವಿವಿಧ ಭಾಗಗಳಲ್ಲಿ ಅವುಗಳನ್ನು ಮಾರಾಟ ಮಾಡುತ್ತಾರೆ. ಇತ್ತೀಚೆಗೆ ಅಸ್ಸಾಂ ಪೊಲೀಸರ ದಾಳಿಯ ಕಾರಣದಿಂದ ವ್ಯಾಪಾರಿಗಳು  ಖರೀದಿಸುವುದನ್ನು ನಿಲ್ಲಿಸಿದ್ದರು. ಹೀಗಾಗಿ ಕೃಷಿಕರೂ ಸಂಕಷ್ಟಕ್ಕೆ ಒಳಗಾಗಿದ್ದರು. ಹೀಗಾಗಿ ಕೃಷಿಕರು ಪ್ರತಿಭಟನೆಯನ್ನೂ ನಡೆಸಿದ್ದರು.

 

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

ಇದನ್ನೂ ಓದಿ

ಜು.10 ರಿಂದ ರಾಘವೇಶ್ವರ ಶ್ರೀಗಳ ಸ್ವಭಾಷಾ ಚಾತುರ್ಮಾಸ್ಯ ಆರಂಭ
July 5, 2025
10:24 PM
by: The Rural Mirror ಸುದ್ದಿಜಾಲ
ಅಂತರ ರಾಷ್ಟ್ರೀಯ ಹಲಸು ದಿನ | ಗ್ರಾಮೀಣ ಉದ್ಯಮಿಗಳ ಸಬಲೀಕರಣಕ್ಕೆ ಹಲಸು ಬೆಳೆ ಪೂರಕ |
July 5, 2025
8:12 AM
by: ದ ರೂರಲ್ ಮಿರರ್.ಕಾಂ
ಇಲ್ಲಿ ಅಡಿಕೆ ಧಾರಣೆಯಲ್ಲಿ ಏರಿಳಿವಾದಾಗಲೇ ಅಲ್ಲಿ ಬರ್ಮಾ ಅಡಿಕೆ ವಶಕ್ಕೆ…! | ಕಾರಣ ಏನು..?
July 5, 2025
7:41 AM
by: ದ ರೂರಲ್ ಮಿರರ್.ಕಾಂ
ಶುಕ್ರ- ಶನಿ ಸೇರಿ ಲಾಭ ದೃಷ್ಟಿ ಯೋಗ: ಈ 5 ರಾಶಿಯವರಿಗೆ ಶ್ರೀಮಂತಿಕೆಯ ಸುಯೋಗ..!
July 5, 2025
7:17 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group