ಅಡಿಕೆ ಪರ್ಯಾಯ ಬಳಕೆಯ ಬಗ್ಗೆ ಡಿ.20 ರಂದು ಪುತ್ತೂರಿನ ತೆಂಕಿಲದಲ್ಲಿ ಕಾರ್ಯಾಗಾರ ನಡೆಯಲಿದೆ. ಅಡಿಕೆಯ ಬಣ್ಣದಿಂದ ಬಟ್ಟೆ ತಯಾರಿ ಸೇರಿದಂತೆ ಅಡಿಕೆಯ ಔಷಧೀಯ ಉತ್ಪನ್ನಗಳು ಮತ್ತು ಇತರ ಬಳಕೆಯ ಬಗ್ಗೆ ವಿವಿಧ ಪರಿಣಿತರು ಮಾಹಿತಿ ನೀಡುವರು.
ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ಹಾಗೂ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಮತ್ತು ಅಡಿಕೆ ಪತ್ರಿಕೆ ಸಹಯೋಗದಲ್ಲಿ ನಡೆಯುವ ಕಾರ್ಯಕ್ರಮವನ್ನು ಕೃಷಿಕ, ಸಂಶೋಧಕ ಬದನಾಜೆ ಶಂಕರ ಭಟ್ ಉದ್ಘಾಟಿಸುವರು.
ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎಸ್ ಆರ್ ಸತೀಶ್ಚಂದ್ರ, ಕ್ಯಾಂಪ್ಕೋ ಉಪಾಧ್ಯಕ್ಷ ಶಂ ನಾ ಖಂಡಿಗೆ, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಅಶೋಕ್ ಕಿನಿಲ, ಫಾರ್ಮರ್ ಫಸ್ಟ್ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಶಾಸ್ತ್ರಿ ಪಡಾರು, ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ಭಾಗವಹಿಸುವರು. ಸಂಪನ್ಮೂಲ ವ್ಯಕ್ತಿಗಳಾಗಿ ದೇಸೀ ಸಂಸ್ಥೆಯ ರುದ್ರಪ್ಪ, ಜೆಡ್ಡು ಗಣಪತಿ ಭಟ್, ಶಿವಮೊಗ್ಗದ ಅರುಣ್ ದೀಕ್ಷಿತ್, ಉಡುಪಿ ಎಸ್ ಡಿಎಂ ಆಯುರ್ವೇದ ಕಾಲೇಜಿನ ಡಾ.ಮುರಳೀಧರ ಬಲ್ಲಾಳ್, ಕುಮಾರಿ ಗಗನ, ಡಾ.ಅಪ್ಪಯ್ಯ, ವಿವೇಕ್ ಆಳ್ವ, ರವಿರಾಜ್, ಮುರಳೀಧರ ಮೊದಲಾದವರು ಭಾಗವಹಿಸುವರು.