ಆಳ್ವಾಸ್ ಜಾಂಬೂರಿಗೆ ಸಕಲ ಸಿದ್ಧತೆ | ಹರಿದು ಬರುತ್ತಿರುವ ಹೊರೆ ಕಾಣಿಕೆ

December 20, 2022
4:01 PM

ಮೂಡಬಿದಿರೆ ಆಳ್ವಾಸ್ ವಿದ್ಯಾಗಿರಿಯಲ್ಲಿ ಬುಧವಾರದಿಂದ ನಡೆಯಲಿರುವ 25ನೇ ಅಂತಾರಾಷ್ಟ್ರೀಯ ಸ್ಕೌಟ್ಸ್‌ ಗೈಡ್ಸ್‌ ಸಾಂಸ್ಕೃತಿಕ ಜಾಂಬೂರಿಯಲ್ಲಿ ಪಾಲ್ಗೊಳ್ಳಲಿರುವ ಲಕ್ಷ ಲಕ್ಷ ಮಂದಿಯ ಆತಿಥ್ಯಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ.

50,000 ಸ್ಕೌಟ್ಸ್‌ ಗೈಡ್ಸ್‌ ವಿದ್ಯಾರ್ಥಿಗಳೂ, 10,000 ಶಿಕ್ಷಕರು, 3,000 ಸಿಬ್ಬಂದಿಗಳಿಗೆ ಇಲ್ಲಿರುವ ಹಾಸ್ಟೆಲ್‌ಗ‌ಳಲ್ಲಿ ಅನ್ನದಾಸೋಹಕ್ಕೆ ವ್ಯವಸ್ಥೆ ನಡೆದಿದ್ದು, ಕೃಷಿ ಮೇಳದ ಪರಿಸರದಲ್ಲಿ ಸುಮಾರು 50,000 ಚದರಡಿಯ ಎರಡು ಪೆಂಡಾಲ್‌ಗ‌ಳಲ್ಲಿ 60 ಕೌಂಟರ್‌ಗಳಲ್ಲಿ ಹೊತ್ತು ಹೊತ್ತಿಗೆ ಲಕ್ಷ ಮಂದಿಯ ಊಟೋಪಚಾರಕ್ಕೆ ಎಲ್ಲ ವ್ಯವಸ್ಥೆ ಆಗುತ್ತಿವೆ.

ಹಾಸ್ಟೆಲ್‌ಗ‌ಳ ಹೊರತು ಪಡಿಸಿ ಇತರೆಡೆ ಸಾರ್ವಜನಿಕರಿಗಾಗಿ ಅಡುಗೆ ಸಿದ್ಧಪಡಿಸಲು 300 ಮಂದಿ ಬಾಣಸಿಗರು, 1,200 ಮಂದಿ ಸ್ವಯಂ ಸೇವಕರು ಆಗಮಿಸಿದ್ದಾರೆ.

ಭಾರೀ ಹೊರೆ ಕಾಣಿಕೆ ಹರಿದು ಬರುತ್ತಿದ್ದು, ಉಗ್ರಾಣವೇ ಸುಮಾರು 40,000 ಚದರಡಿ ಪ್ರದೇಶದಲ್ಲಿ ಹರಡಿ ಕೊಂಡಿದೆ. ವಿಜಯಾನಂದ ಜೋಗಿ ಕಾನಡ್ಕ ಇವರ ಮೇಲುಸ್ತುವಾರಿಯಲ್ಲಿ, ಆಳ್ವಾಸ್‌ ಎಫ್‌ಓ ರಾಜೇಶ್‌ ನಾಯಕ್‌, ರಾಜಗೋಪಾಲ ಶೆಟ್ಟಿ, ಭರತೇಶ್‌, ಮೋಹನ್‌ ಕುಮಾರ್‌, ಸುಂದರ ಶೆಟ್ಟಿ ಸಹಿತ 75 ಮಂದಿಯ ತಂಡ, 200 ಕಾರ್ಮಿಕರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 13- 08-2026 | ಕರ್ನಾಟಕದಲ್ಲಿ ಮಳೆ ಮುಂದುವರಿಕೆ| ಸುಳ್ಯ, ಘಟ್ಟದ ಕೆಳಭಾಗದಲ್ಲಿ ಮಧ್ಯಾಹ್ನದ ಬಳಿಕ ಹೆಚ್ಚು ಮಳೆ ಸಾಧ್ಯತೆ
August 13, 2026
2:01 PM
by: ಸಾಯಿಶೇಖರ್ ಕರಿಕಳ
ಎಲ್ ನಿನೊ ಪರಿಣಾಮ 15 ರಾಜ್ಯಗಳ 342 ಜಿಲ್ಲೆಗಳಲ್ಲಿ ಮಳೆ ಕೊರತೆ
August 13, 2026
6:59 AM
by: ದ ರೂರಲ್ ಮಿರರ್.ಕಾಂ
ಇನ್ನೊಂದು ಮನೆಯ ಸಮಸ್ಯೆ ನಮಗೆ ಸುದ್ದಿ ; ನಮ್ಮ ಮನೆಯ ನೋವು ಮಾತ್ರ ನಮಗೆ ಸಂಕಟ..! ಯಾಕೆ ?
August 13, 2026
6:50 AM
by: ಮಹೇಶ್ ಪುಚ್ಚಪ್ಪಾಡಿ
ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುತ್ತಿದೆಯೇ? – ಹೊಸ ಅಧ್ಯಯನದ ಎಚ್ಚರಿಕೆ
August 13, 2026
6:35 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror