ಅನೇಕ ಜನರು ತೂಕ(Weight) ಇಳಿಸಿಕೊಳ್ಳಲು ಆಹಾರಕ್ರಮವನ್ನು ಪ್ರಾರಂಭಿಸಿದ ನಂತರ ತುಪ್ಪವನ್ನು(Ghee)ತಿನ್ನುವುದನ್ನು ನಿಲ್ಲಿಸುತ್ತಾರೆ. ಇದರ ಹಿಂದಿನ ಕಾರಣ ತುಪ್ಪ ತಿನ್ನುವುದರಿಂದ ತೂಕ ಹೆಚ್ಚಾಗುವುದು. ಆದರೆ, ಅದು ಹಾಗಲ್ಲ. ದೇಸಿ ತುಪ್ಪ ನಮ್ಮ ಮೆದುಳು ಮತ್ತು ದೇಹವನ್ನು(Brain-Body)ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಕೆಲವು ಕಾಯಿಲೆಗಳಲ್ಲಿ, ವೈದ್ಯರು(Doctor) ತುಪ್ಪವನ್ನು ತಿನ್ನಲು ಸಲಹೆ ನೀಡುತ್ತಾರೆ. ಆದರೆ ಈ ಸಲಹೆಯನ್ನು ಎಲ್ಲಾ ರೋಗಿಗಳಿಗೆ ನೀಡಲಾಗುವುದಿಲ್ಲ. ಇಂದು ನಾನು ನಿಮಗೆ ದೇಸಿ ತುಪ್ಪ ತಿನ್ನುವುದರಿಂದ ಆಗುವ ಪ್ರಯೋಜನಗಳನ್ನು ಹೇಳುತ್ತೇನೆ.
Advertisement
ದೇಸಿ ತುಪ್ಪದ ಆರೋಗ್ಯಕರ ಪ್ರಯೋಜನಗಳು…
Advertisement
- ದೇಸಿ ತುಪ್ಪದಲ್ಲಿ ಶಾರ್ಟ್ ಚೈನ್ ಫ್ಯಾಟಿ ಆಸಿಡ್ ಇರುವುದರಿಂದ ಜೀರ್ಣವಾಗುವುದು ತುಂಬಾ ಸುಲಭ.
- ಇದು ವಿಟಮಿನ್ ಎ, ಡಿ ಮತ್ತು ಕ್ಯಾಲ್ಸಿಯಂ, ರಂಜಕ, ಖನಿಜಗಳು, ಪೊಟ್ಯಾಸಿಯಮ್‌ನಂತಹ ಅನೇಕ ಪೋಷಕಾಂಶಗಳನ್ನು ಸಹ ಒಳಗೊಂಡಿದೆ.
- ದೇಸಿ ತುಪ್ಪ ತಿನ್ನುವುದರಿಂದ ಕೀಲು ನೋವು ಕಡಿಮೆಯಾಗುತ್ತದೆ.
- ದೇಸಿ ತುಪ್ಪದಿಂದ ತಲೆಗೆ ಮಸಾಜ್ ಮಾಡುವುದರಿಂದ ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ತಡೆಯುತ್ತದೆ ಮತ್ತು ತ್ವಚೆ ಹೊಳೆಯುವಂತೆ ಮಾಡುತ್ತದೆ.
- ಪ್ರತಿದಿನ ಶುದ್ಧ ತುಪ್ಪವನ್ನು ತಿನ್ನುವುದು ವಾತ ಮತ್ತು ಪಿತ್ತವನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ.
- ಶುದ್ಧ ತುಪ್ಪವನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ.
- ಮಕ್ಕಳ ಜನನದ ನಂತರ ದೇಹದಲ್ಲಿ ವಾತ ಹೆಚ್ಚಾಗುತ್ತದೆ. ಅದಕ್ಕಾಗಿ ಶುದ್ಧ ತುಪ್ಪವನ್ನು ತಿನ್ನಬೇಕು.
- ಹೃದಯ ನಾಳಗಳಲ್ಲಿ ಅಡಚಣೆಯಾದರೆ ತುಪ್ಪ ಲೂಬ್ರಿಕಂಟ್ ಆಗಿ ಕಾರ್ಯನಿರ್ವಹಿಸುತ್ತದೆ.
- ಅನಿಲದ ಸಮಸ್ಯೆಯನ್ನು ಕಡಿಮೆ ಮಾಡಲು ತುಪ್ಪ ತುಂಬಾ ಪ್ರಯೋಜನಕಾರಿ.
- ಬೇಸಿಗೆಯ ದಿನಗಳಲ್ಲಿ ದೇಹದಲ್ಲಿ ಪಿತ್ತ ಹೆಚ್ಚಾಗುವುದನ್ನು ಕಡಿಮೆ ಮಾಡಲು ತುಪ್ಪವನ್ನು ಸೇವಿಸಬೇಕು.
- ಬೇಳೆಕಾಳುಗಳನ್ನು ಬೇಯಿಸುವಾಗ ತುಪ್ಪವನ್ನು ಸೇರಿಸುವುದರಿಂದ ಗ್ಯಾಸ್ ಸಮಸ್ಯೆ ಕಡಿಮೆಯಾಗುತ್ತದೆ.
- ತುಪ್ಪ ಕಣ್ಣಿನ ಆಯಾಸವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
- ಚರ್ಮ ಮತ್ತು ಕೂದಲಿಗೆ ಒಳ್ಳೆಯದು…
- ಶುದ್ಧ ತುಪ್ಪದಿಂದ ಚರ್ಮ ಮೃದುವಾಗುತ್ತದೆ ಮತ್ತು ಚರ್ಮವು ತೇವವಾಗಿರುತ್ತದೆ.
- ತ್ವಚೆಯ ಪೋಷಣೆಯ ಜೊತೆಗೆ ತ್ವಚೆಯ ಶುಷ್ಕತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಶುದ್ಧ ತುಪ್ಪದಿಂದ ಮುಖಕ್ಕೆ ಮಸಾಜ್ ಮಾಡುವುದು ಉತ್ತಮ.
- ಕೂದಲು ಹೊಳೆಯುವ ಮತ್ತು ಮೃದುವಾಗಲು ಶುದ್ಧ ತುಪ್ಪದಿಂದ ತಲೆಗೆ ಮಸಾಜ್ ಮಾಡಿ. ಇದು ಕೂದಲನ್ನು ಕಪ್ಪು, ದಪ್ಪ ಮತ್ತು ಬಲವಾಗಿಸಲು ಸಹಾಯ ಮಾಡುತ್ತದೆ.
- ದೇಹದ ಮೇಲಿನ ಸುಟ್ಟಗಾಯಗಳು ಅಥವಾ ಗಾಯಗಳ ಗುರುತುಗಳನ್ನು ಕಡಿಮೆ ಮಾಡುತ್ತದೆ.
ಹೃದಯಕ್ಕಾಗಿ…
- ಶುದ್ಧ ತುಪ್ಪದ ಸೇವನೆಯು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಇದು ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ.
- ಶುದ್ಧ ತುಪ್ಪದಲ್ಲಿ ವಿಟಮಿನ್ ಕೆ2 ಇದೆ. ಈ ಕಾರಣದಿಂದಾಗಿ, ರಕ್ತ ಕಣಗಳ ನಡುವೆ ಇದು ಸಂಗ್ರಹವಾದ ಕ್ಯಾಲ್ಸಿಯಂ ಅನ್ನು ನಾಶಮಾಡಲು ಕೆಲಸ ಮಾಡುತ್ತದೆ. ಇದು ರಕ್ತ ಪರಿಚಲನೆಯನ್ನು ಉತ್ತಮವಾಗಿಡುತ್ತದೆ.
- ಶುದ್ಧ ತುಪ್ಪದ ಸೇವನೆಯು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದು ಸೋಂಕಿನಿಂದ ಉಂಟಾಗುವ ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ನೀಡುತ್ತದೆ.
- ಶುದ್ಧ ತುಪ್ಪದಲ್ಲಿ ಆಂಟಿಮೈಕ್ರೊಬಿಯಲ್, ಕ್ಯಾನ್ಸರ್ ವಿರೋಧಿ ಮತ್ತು ಆಂಟಿವೈರಲ್ ಏಜೆಂಟ್‌ಗಳಿವೆ. ಇದು ಅನೇಕ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
- ಉತ್ತಮ ಜೀರ್ಣಾಂಗ ವ್ಯವಸ್ಥೆಗೆ ಸಹಾಯ ಮಾಡುತ್ತದೆ.
- ಶುದ್ಧ ತುಪ್ಪದ ಸೇವನೆಯಿಂದ ದೇಹದಲ್ಲಿ ಸಂಗ್ರಹವಾದ ಕೊಬ್ಬು ಕರಗಿ ವಿಟಮಿನ್ ಗಳಾಗಿ ಪರಿವರ್ತನೆಯಾಗುತ್ತದೆ.
- ದೇಸಿ ತುಪ್ಪ ತಿನ್ನುವುದರಿಂದ ಆಹಾರವು ತ್ವರಿತವಾಗಿ ಜೀರ್ಣವಾಗುತ್ತದೆ ಮತ್ತು ಚಯಾಪಚಯವು ಉತ್ತಮವಾಗಲು ಸಹಾಯ ಮಾಡುತ್ತದೆ.
- ಅಲ್ಸರ್, ಗ್ಯಾಸ್ ಮತ್ತು ಅಜೀರ್ಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
- ತೂಕ ಕಡಿಮೆ ಮಾಡಲು: ಶುದ್ಧ ತುಪ್ಪದಲ್ಲಿ CLA ಲಭ್ಯವಿದೆ. ಇದು ಚಯಾಪಚಯವನ್ನು ಉತ್ತಮಗೊಳಿಸುತ್ತದೆ ಮತ್ತು ತೂಕ ನಿಯಂತ್ರಣದಲ್ಲಿ ಸಹಾಯ ಮಾಡುತ್ತದೆ.
- CLA ಇನ್ಸುಲಿನ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ತೂಕ ಹೆಚ್ಚಾಗುವ ಮತ್ತು ಸಕ್ಕರೆಯ ಹೆಚ್ಚಳದ ಅಪಾಯವನ್ನು ಕಡಿಮೆ ಮಾಡುತ್ತದೆ.
- ಶುದ್ಧ ತುಪ್ಪದ ಸೇವನೆಯಿಂದ ದೇಹದಲ್ಲಿ ಹೆಚ್ಚುವರಿ ಕೊಬ್ಬು ರಚನೆಯ ಸಮಸ್ಯೆ ಇಲ್ಲ.
- ಮೂಳೆಗಳಿಗೆ ಲೂಬ್ರಿಕಂಟ್ ಆಗಿ ಕಾರ್ಯನಿರ್ವಹಿಸುತ್ತದೆ, ಮೊಣಕಾಲು ನೋವಿಗೆ ಉಪಯುಕ್ತವಾಗಿದೆ.
- ದಿನಕ್ಕೆ ಎರಡು ಚಮಚ ತುಪ್ಪ ತಿನ್ನಬೇಕು. ಅನ್ನ, ಪಲ್ಯ, ಸಾರು, ಇವುಗಳೊಂದಿಗೆ ಸೇವಿಸಿದರೂ ಕೆಲಸ ಮಾಡುತ್ತದೆ.
ಕನ್ನಡಕ್ಕೆ: ಡಾ. ಪ್ರ. ಅ. ಕುಲಕರ್ಣಿ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement