ಅಮರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ವತಿಯಿಂದ ಸಂಜೀವಿನಿ ಸದಸ್ಯೆಯರಿಗೆ ಸ್ವ ಉದ್ಯಮ ಹಾಗೂ ಉದ್ಯಮ ನಡೆಸಲು ಬ್ಯಾಂಕ್ ನಿಂದ ಸಿಗುವ ಸಾಲ ಸೌಲಭ್ಯ ಸಹಾಯಧನ ಹಾಗು ಕೃಷಿ ಪೌಷ್ಟಿಕ ತೋಟ- FSSAI ನೋಂದಣಿ ಈ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಗಳಾಗಿ ನವೀನ್ ಕೊಯ್ಲ, ಮಾಲಕರು ಕೊಯ್ಲಸ್ ಗ್ರೂಪ್ ಪುತ್ತೂರು ಹಾಗೂ ದೇವಸ್ಥಾನಗಳ ಧಾರ್ಮಿಕ ಉತ್ಪನ್ನಗಳ ತಯಾರಕರು ಮತ್ತು ವ್ಯಾಪಾರಸ್ಥರು, ಸುಜಾತ, ಆಪ್ತ ಸಮಾಲೋಚಕರು ಕೆನರಾಬ್ಯಾಂಕ್ ಸಾಕ್ಷರತಾ ಕೇಂದ್ರ ಸುಳ್ಯ ಹಾಗು ಎನ್ ಆರ್ ಎಲ್ ಎಮ್ ಸುಳ್ಯ ತಾಲೂಕು ಇದರ ಕ್ಲಸ್ಟರ್ ಮಟ್ಟದ ಮೇಲ್ವಿಚಾರಕ ಅವಿನಾಶ್ ಕೃಷಿ ಪೌಷ್ಟಿಕ ತೋಟದ ಬಗ್ಗೆ ಮತ್ತು FSSAI ಬಗ್ಗೆ ಹಾಗೂ ಕೌಶಲ್ಯಾಭಿವೃದ್ಧಿ ಮೇಲ್ವಿಚಾರಕಿ ಮೇರಿ ಇವರು ಸದಸ್ಯರಿಗೆ ಮಾಹಿತಿ ನೀಡಿದರು. ಯಶಸ್ವಿ ಸಂಜೀವಿನಿ ಸಂಘದ ಯಶ್ವಿನಿ ಸಭಾದ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಅಮರ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ದಿವ್ಯ ಸುಜನ್ ಗುಡ್ಡೆಮನೆ, ಪಂಚಾಯತ್ ಸದಸ್ಯೆ ಲತಾ ಆಜಡ್ಕ, MBK ಮಿತ್ರಕುಮಾರಿ ಚಿಕ್ಮುಳಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ಯಶಸ್ವಿ ಸಂಘದ ಸದಸ್ಯೆಯರಾದ ಯಶ್ವಿನಿ, ಜಯಂತಿ, ಲತಾ, ಲೀಲಾವತಿ, ರೇವತಿ, ಪುಷ್ಪಾವತಿ, ನವ್ಯ, ಭಾಗ್ಯಶ್ರೀ, ಕಲಾವತಿ , ಶಾರದ, ದುರ್ಗಾವತಿ ಇವರುಗಳು ಅಚ್ಚುಕಟ್ಟಾಗಿ ನೆರವೇರಿಸಿಕೊಟ್ಟರು. ಸಬೆಯಲ್ಲ ಒಕ್ಕೂಟದ ಕಾರ್ಯದರ್ಶಿ ಯಮಿತ ಪೂರ್ಣಚಂದ್ರ ಪೈಕ, ಉಪಾಧ್ಯಕ್ಷೆ ಸವಿತ ಕುಳ್ಳಂಪಾಡಿ ಕೋಶಾಧಿಕಾರಿ ಸೆಲಿನ ಸೆಬಾಸ್ಟಿನ್, LCRP ದಿವ್ಯ ಚತ್ರಪ್ಪಾಡಿ, ಗ್ರಂಥಪಾಲಕಿ ಅಭಿಲಾಷ ಹಾಗೂ ಒಕ್ಕೂಟದ ಎಲ್ಲ ಪದಾಧಿಕಾರಿಗಳು ಸಂಜೀವಿನಿ ಸದಸ್ಯರು ಪಾಲ್ಗೊಂಡಿದ್ದರು.