ಜಮ್ಮು ಮತ್ತು ಕಾಶ್ಮೀರದದಲ್ಲಿ ಅಮರನಾಥ ಯಾತ್ರೆ ಮುಂದುವರಿದಿದ್ದು, ಪವಿತ್ರ ಗುಹಾ ದೇವಾಲಯದಲ್ಲಿ ಸುಮಾರು 9482 ಯಾತ್ರಿಕರು ಪೂಜೆ ಸಲ್ಲಿಸಿದ್ದಾರೆ. ಜುಲೈ 3 ರಂದು ಪ್ರಾರಂಭವಾದಾಗಿನಿಂದ ಯಾತ್ರೆ ಕೈಗೊಂಡಿರುವ ಒಟ್ಟು ಭಕ್ತರ ಸಂಖ್ಯೆ 3.52 ಲಕ್ಷ ತಲುಪಿದೆ.
ದೇವಾಲಯಕ್ಕೆ ಭೇಟಿ ನೀಡುವವರ ಸಂಖ್ಯೆ ಉತ್ತಮವಾಗಿದ್ದರೂ, ಜಮ್ಮುವಿನಿಂದ ಯಾತ್ರಿಕರ ಸಂಖ್ಯೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ. ಆದರೂ ಯಾತ್ರೆ ಯಾವುದೇ ಅಡೆತಡೆಗಳಿಲ್ಲದೆ ಮುಂದುವರಿಯುತ್ತಿದೆ. ಆಶ್ರಯ, ಆಹಾರ, ವೈದ್ಯಕೀಯ ನೆರವು ಮತ್ತು ಮಾರ್ಗ ಭದ್ರತೆ ಸೇರಿದಂತೆ ಎಲ್ಲಾ ಅಗತ್ಯ ಸೌಲಭ್ಯಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿವೆ. ಈ ಮಧ್ಯೆ, ಅಮರನಾಥ ಯಾತ್ರೆಯ ಭಾಗವಾಗಿ ಶಿವನ ಪವಿತ್ರ ಆಯುಧ ‘ಛರಿ ಮುಬಾರಕ್’ ಅನ್ನು ಶ್ರೀನಗರದ ಐತಿಹಾಸಿಕ ಶಂಕರಾಚಾರ್ಯ ದೇವಸ್ಥಾನಕ್ಕೆ ಕೊಂಡೊಯ್ಯಲಾಯಿತು. ದೇವಿಯ ಆಶೀರ್ವಾದ ಪಡೆಯಲು ಇಂದು ಪವಿತ್ರ ಆಯುಧವನ್ನು ಹರಿ ಪರ್ಬತ್‌ನಲ್ಲಿರುವ ‘ಶರಿಕಾ ಭವಾನಿ ದೇವಸ್ಥಾನ’ಕ್ಕೆ ಕೊಂಡೊಯ್ಯಲಾಗುವುದು. ಅಮರನಾಥ ಗುಹಾ ದೇಗುಲಕ್ಕೆ ಛಾರಿ ಮುಬಾರಕ್‌ನ ಅಂತಿಮ ಪ್ರಯಾಣವು ಚಂದನ್ವಾರಿ, ಶೇಷನಾಗ್ ಮತ್ತು ಪಂಚತರಣಿಯಲ್ಲಿ ರಾತ್ರಿ ತಂಗುವಿಕೆಯೊಂದಿಗೆ ಪ್ರಾರಂಭವಾಗುತ್ತದೆ. ಪಹಲ್ಗಾಮ್‌ನಲ್ಲಿರುವ ಲಿಡ್ಡರ್ ನದಿಯಲ್ಲಿ ಆಯುಧ “ವಿಸರ್ಜನೆ”ಯೊಂದಿಗೆ ತೀರ್ಥಯಾತ್ರೆ ಕೊನೆಗೊಳ್ಳುತ್ತದೆ.