MIRROR FOCUS

ಅಮರಕವಿ ಮಹರ್ಷಿ ವಾಲ್ಮೀಕಿ ಜಯಂತಿ : ಸೂರ್ಯಚಂದ್ರರಿರುವರೆಗೂ ರಾಮಾಯಣ ಮಹಾಕಾವ್ಯವು ಜಗತ್ತಿನಲ್ಲಿ ಅಮರಕಾವ್ಯವಾಗಿರುವ ಮಹಾಕಾವ್ಯ ಕೊಟ್ಟ ಮಹಾಕವಿ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಭಾರತದ ಮೊಟ್ಟಮೊದಲ ಮಹಾಕಾವ್ಯ. ರಾಮಾಯಣವನ್ನು ರಚಿಸಿದ ‘ಆದಿಕವಿ’. ರಾಮಾಯಣವು ಭಾರತೀಯರ ಜೀವನಚರಿತ್ರೆಯನ್ನು ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಮಹಾಕಾವ್ಯವಾಗಿದೆ. ಮಹರ್ಷಿ ವಾಲ್ಮೀಕಿಯು ರಾಮಾಯಣದಲ್ಲಿ ಭರತಖಂಡದಲ್ಲಿನ ಅರಣ್ಯಗಳು, ಪರ್ವತಗಳು, ನದಿಗಳು, ಸರೋವರಗಳು, ಸಮುದ್ರಗಳು ಮತ್ತು ಜಲಪಾತಗಳ ಪ್ರಕೃತಿ ಸೌಂದರ್ಯವನ್ನು ವರ್ಣಿಸಿದ್ದಾರೆ. ವಿವಿಧ ಪಾತ್ರಗಳ ಮುಖಾಂತರ ಕೌಟುಂಬಿಕ ಮೌಲ್ಯಗಳು ಮತ್ತು ಆದರ್ಶ ವ್ಯಕ್ತಿಯ ಗುಣಲಕ್ಷಣಗಳನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ. ರಾಮಾಯಣ ಮಹಾಕಾವ್ಯದಲ್ಲಿ ಮಾತೃದೇವೋಭವ, ಪಿತೃದೇವೋಭವ, ಆಚಾರ್ಯದೇವೋಭವ, ಅತಿಥಿದೇವೋಭವದಂತಹ ಮೌಲ್ಯಗಳನ್ನು ಎತ್ತಿ ಹಿಡಿಯಲಾಗಿದೆ. ಮಮತೆ, ಸಮತೆ, ಭ್ರಾತೃತ್ವ, ತ್ಯಾಗ, ದೇಶಪ್ರೇಮ, ಅಳಿಲು ಸೇವೆ, ಪಿತೃವಾಕ್ಯ ಪರಿಪಾಲನೆ ಮುಂತಾದ ಹಲವಾರು ಮಾನವೀಯ ಮತ್ತು ಸಾಮಾಜಿಕ ಮೌಲ್ಯಗಳನ್ನು ಪ್ರತಿಪಾದಿಸಲಾಗಿದೆ. ಇಂತಹ ಅನನ್ಯವಾದ ರಾಮಾಯಣ ಮಹಾಕಾವ್ಯವನ್ನು ರಚಿಸಿದ ಮಹರ್ಷಿ ವಾಲ್ಮೀಕಿಯನ್ನು ‘ಕವಿಗಳ ಕವಿ’ ಎಂದು ಮಹಾಕವಿ ಕಾಳಿದಾಸ ಗೌರವಿಸಿದ್ದಾನೆ.

Advertisement

ಸಂಸ್ಕೃತದಲ್ಲಿ ರಚಿಸಲಾಗಿರುವ ರಾಮಾಯಣ ಮಹಾಕಾವ್ಯವು 24,000 ಶ್ಲೋಕಗಳನ್ನು ಹೊಂದಿದೆ. ವಾಲ್ಮೀಕಿಯು ಕವಿಕುಲದ ಗುರುವಾಗಿ ಹಲವಾರು ಕವಿಗಳಿಗೆ ಮತ್ತು ಸಾಹಿತಿಗಳಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ. ವಾಲ್ಮೀಕಿ ರಾಮಾಯಣದ ಆಧಾರದ ಮೇಲೆ ವಿವಿಧ ಭಾಷೆಗಳಲ್ಲಿ ಕಾವ್ಯ, ನಾಟಕ, ಕಾದಂಬರಿ ಮತ್ತು ಕತೆಗಳನ್ನು ಅನೇಕರು ರಚಿಸಿದ್ದಾರೆ. ಇಂದಿಗೂ ಸಹ ರಾಮಾಯಣ ಮಹಾಕಾವ್ಯವು ಜಗತ್ತಿನಲ್ಲಿ ಸತ್ವಯುತವಾದ ಮತ್ತು ಮೌಲ್ಯಯುತವಾದ ಸಾಹಿತ್ಯ ಸೃಷ್ಟಿಗೆ ಪ್ರೇರಣೆಯಾಗಿದೆ.
ಜಗತ್ತಿನ ಪ್ರಸಿದ್ಧ ಲೇಖಕ ಮತ್ತು ವಿಮರ್ಶಕನಾದ ಟಿ.ಎಸ್‌. ಎಲಿಯೆಟ್‌, ”ನೂರು ವರ್ಷಗಳಿಗೊಮ್ಮೆ ಸಾಹಿತ್ಯ ಮತ್ತು ಸಾಹಿತಿಗಳನ್ನು ವಿಮರ್ಶೆ ಮಾಡುವ ಮತ್ತು ತುಲನೆ ಮಾಡುವ ಕಾಲ ಬರುತ್ತದೆ. ಆಗ ಸಾಹಿತ್ಯ ಮತ್ತು ಸಾಹಿತಿಗಳ ಜನಪ್ರಿಯತೆಯ ಸ್ಥಾನಮಾನ ಏರುಪೇರಾಗುತ್ತದೆ,” ಎಂದು ಅಭಿಪ್ರಾಯ ಪಡುತ್ತಾನೆ. ಆದರೆ ರಾಮಾಯಣ ಮಹಾಕಾವ್ಯ ಮತ್ತು ಅದರ ಕರ್ತೃ ಮಹರ್ಷಿ ವಾಲ್ಮೀಕಿಯು ಅನಾದಿಕಾಲದಿಂದ ವರ್ತಮಾನದವರೆಗೂ ನಿರಂತರವಾಗಿ ಅಪಾರ ಜನಪ್ರಿಯತೆಯನ್ನು ಹೊಂದಿದ್ದು ಜನಮಾನಸದಲ್ಲಿ ಶಾಶ್ವತ ಸ್ಥಾನವನ್ನು ಪಡೆದಿದ್ದಾರೆ. ಇದಕ್ಕೆ ಪೂರಕವಾಗಿ ವಾಲ್ಮೀಕಿ ರಾಮಾಯಣದ ಪ್ರಾರಂಭದಲ್ಲಿ ಈ ರೀತಿ ಉಲ್ಲೇಖಿಸಲಾಗಿದೆ.
“ಎಲ್ಲಿಯವರೆಗೆ ಭೂಮಿಯಲ್ಲಿ ಪರ್ವತ ಸಮುದ್ರ ನದಿಗಳಿರುತ್ತವೆಯೋ ಅಲ್ಲಿಯವರೆಗೂ ರಾಮಾಯಣ ಕಾವ್ಯ ಲೋಕದಲ್ಲಿ ಪ್ರಚಲಿತದಲ್ಲಿರುತ್ತದೆ”. ಆದ್ದರಿಂದ ಸೂರ್ಯಚಂದ್ರರಿರುವರೆಗೂ ರಾಮಾಯಣ ಮಹಾಕಾವ್ಯವು ಜಗತ್ತಿನಲ್ಲಿ ಅಮರಕಾವ್ಯವಾಗಿರುತ್ತದೆ ಮತ್ತು ಇದನ್ನು ರಚಿಸಿರುವ ಮಹರ್ಷಿ ವಾಲ್ಮೀಕಿಯು ಅಮರಕವಿಯಾಗಿರುತ್ತಾರೆ.

ವಾಲ್ಮೀಕಿಯ ಪ್ರಮುಖ ವಿಚಾರಗಳು
# ಜೀವನದಲ್ಲಿ ಯಾವಾಗಲೂ ಸಂತೋಷವನ್ನು ಪಡೆಯುವುದು ಬಹಳ ಅಪರೂಪ.
#ಅತಿಯಾದ ಸಂಘರ್ಷದಿಂದಾಗಿ ಶ್ರೀಗಂಧದಲ್ಲಿಯೂ ಕೂಡ ಅಗ್ನಿ ಕಾಣಿಸಿಕೊಳ್ಳುತ್ತದೆ. ಅದೇ ರೀತಿ ಬುದ್ಧಿವಂತ ಮನುಷ್ಯನ ಹೃದಯದಲ್ಲಿ ಕೋಪವು ಹುಟ್ಟಿಕೊಳ್ಳುತ್ತದೆ.
#ಸಂತರು ಇತರರನ್ನು ದುಃಖದಿಂದ ರಕ್ಷಿಸಲು ಸಂಕಟ ಪಡುತ್ತಲೇ ಇರುತ್ತಾರೆ, ಆದರೆ ದುಷ್ಟ ಜನರು ಇತರರನ್ನು ದುಃಖದಲ್ಲಿ ಸಿಲುಕಿಸುತ್ತಾರೆ.
#ಪೂಜಾ ವಿಧಿಗಳುಹವನದ ಬೂದಿಯೇ ಅತಿ ಶ್ರೇಷ್ಠ.. ಬಲು ಪ್ರಯೋಜನಕಾರಿ..! ಹವನದ ಬೂದಿಯ ಲಾಭಗಳಿವು..
#ವಿನಮ್ರತೆಯಿಂದಿದ್ದರೂ ಕೂಡ ಅವರು ಕೆಲವೊಮ್ಮೆ ದಾಳಿಯ ಮನೋಭಾವವನ್ನು ಹೊಂದಿರುತ್ತಾರೆ.
#ಇನ್ನೂ ಕೆಲವರನ್ನು ಅರ್ಥ ಮಾಡಿಕೊಳ್ಳುವುದು ಕಠಿಣ ಆದರೆ ಅವರ ಮಾತುಗಳು ಮೃದುವಾಗಿರುತ್ತದೆ.
#ಈ ಜಗತ್ತಿನಲ್ಲಿ ಉತ್ಸಾಹವನ್ನು ಉಳಿಸದಿದ್ದರೆ ಯಾವುದೂ ಅಪರೂಪವಲ್ಲ.
#ಮಾಯೆಯಲ್ಲಿ ಎರಡು ವಿಧಗಳಿವೆ – ಅವಿದ್ಯಾ ಮತ್ತು ವಿದ್ಯಾ.
#ಅಹಂ ಮನುಷ್ಯನ ದೊಡ್ಡ ಶತ್ರು.
# ಪ್ರೀತಿಪಾತ್ರರೊಂದಿಗಿನ ಅತಿಯಾದ ಪ್ರೀತಿಯಿಂದಾಗಿ ಯಶಸ್ಸು ಕಳೆದುಹೋಗುತ್ತದೆ.
#ತಾಯಿ ಮತ್ತು ಜನ್ಮಸ್ಥಳವು ಸ್ವರ್ಗಕ್ಕಿಂತ ಹೆಚ್ಚು.
#ಪ್ರತಿಜ್ಞೆಯನ್ನು ಮುರಿಯುವುದರಿಂದ, ಸದ್ಗುಣಗಳು ನಾಶವಾಗುತ್ತವೆ.
# ಸತ್ಯವು ಎಲ್ಲಾ ನಿಜವಾದ ಕ್ರಿಯೆಗಳ ಆಧಾರವಾಗಿದೆ.
#ಪೋಷಕರ ಸೇವೆ ಮತ್ತು ವಿಧೇಯತೆಗಿಂತ ಬೇರೆ ಯಾವುದೇ ಧರ್ಮವಿಲ್ಲ.
#- ಯಾವುದೇ ಮನುಷ್ಯನ ಇಚ್ಛೆ ಅವನ ಬಳಿ ಇದ್ದರೆ, ಆಗ ಅವನು ಯಾವುದೇ ಕೆಲಸವನ್ನು ಬಹಳ ಸುಲಭವಾಗಿ ಮಾಡಬಹುದು. ಇಚ್ಛಾಶಕ್ತಿ ಮತ್ತು ನಿರ್ಣಯವು ಮನುಷ್ಯನನ್ನು ಬಡವನಿಂದ ರಾಜನನ್ನಾಗಿ ಮಾಡುತ್ತದೆ.
*ವಾಲ್ಮೀಕಿ ಜಯಂತಿಯ ಶುಭಾಶಯಗಳು*

ಲೇಖನ – ಮಲ್ಲಿಕಾರ್ಜುನ ಚಿಕ್ಕಮಠ
ಧಾರವಾಡ.

World famous author and critic T.S. Eliot, “Once in a hundred years there comes a time when literature and literature are reviewed and compared. Then the status of literature and literature's popularity will fluctuate,'' he opines. But the epic Ramayana and its author Maharishi Valmiki have been immensely popular from time immemorial to the present day and have secured a permanent place in the public mind.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಶಿರಾಡಿ ಘಾಟಿ | ರಾಷ್ಟ್ರೀಯ ಹೆದ್ದಾರಿ -ರೈಲು ಸಂಪರ್ಕ ಅಭಿವೃದ್ದಿಗೆ ಸಂಯೋಜಿತ ಡಿಪಿಆರ್ ತಯಾರಿಸಲು ಮನವಿ

ಶಿರಾಡಿಯು ಪಶ್ಚಿಮ ಘಟ್ಟ ತಪ್ಪಲಿನಲ್ಲಿರುವುದರಿಂದ ಸೂಕ್ಷ್ಮ ಪರಿಸರ ವಲಯವಾಗಿ ಗುರುತಿಸಿಕೊಂಡಿದೆ.  ಹೀಗಿರುವಾಗ ರಸ್ತೆ ಮತ್ತು…

15 minutes ago

ಮಳೆಗಾಲ ಸಿದ್ಧತೆ | ಚರಂಡಿ ಹೂಳೆತ್ತಲು ಜಿಲ್ಲಾಧಿಕಾರಿ ಸೂಚನೆ

ಮಂಗಳೂರು ಮಹಾನಗರಪಾಲಿಕೆಯ ಎಲ್ಲಾ 60 ವಾರ್ಡುಗಳಲ್ಲಿ  ತೆರೆದ ಚರಂಡಿಗಳಲ್ಲಿರುವ ಹೂಳೆತ್ತಲು ತಕ್ಷಣವೇ ಕ್ರಮ…

20 minutes ago

ಹವಾಮಾನ ವರದಿ | 17-04-2025 | ಎ.20 ರಿಂದ ರಾಜ್ಯದ ವಿವಿದೆಡೆ ಮತ್ತೆ ಮಳೆ

ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮೋಡ ಹಾಗೂ ಕೆಲವು ಕಡೆ ತುಂತುರು ಮಳೆ…

2 hours ago

ಪುತ್ತೂರು ಜಾತ್ರೆ ಎಂದರೆ “ನಮ್ಮ ಮನೆ ಉತ್ಸವ”

ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲಿ ಪುತ್ತೂರು ಶ್ರೀ ಮಹತೋಭಾರ ಶ್ರೀ…

8 hours ago

ಕೆಲವು ವಿಶೇಷ ಯೋಗಗಳು ಮತ್ತು ಗ್ರಹಗಳ ಸಂಯೋಜನೆ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಾಭಕ್ತರದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490

13 hours ago

ಮೀಸಲಾತಿಗಾಗಿ ಜಾತಿಯಾಗುವ ಮತಧರ್ಮ

ಜಾತಿಗಣತಿ ಮಾಡಿ ಏನನ್ನು ಸಾಧಿಸಲು ಸಾಧ್ಯ? ಸದ್ಯ ಬಹಿರಂಗ ಆಗಿರುವ ವರದಿಯು ಇನ್ನಷ್ಟು…

21 hours ago