ಅಂಬಿಕಾದಲ್ಲಿ ಅಗ್ನಿಪಥ್ ಹಾಗೂ ಎನ್.ಡಿ.ಎ. ಮಾಹಿತಿ ಕಾರ್ಯಕ್ರಮ

Advertisement

ಜಗತ್ತಿನಲ್ಲಿ ತಾಯಿ ಮತ್ತು ತಾಯ್ನಾಡಿಗೆ ಸೇವೆ ಸಲ್ಲಿಸುವ ಮಹಾನ್ ವ್ಯಕ್ತಿ ಯೋಧ. ‘ಆತ್ಮ ಹೋದ ಮೇಲೆ ಹುತಾತ್ಮನೆನಿಸಿಕೊಳ್ಳುವವನು ಒಬ್ಬ ಯೋಧ, ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದವನು ಮಾತ್ರ’ ಎಂದು  ಹವ್ಯಾಸ್ ಯುವ. ಹೇಳಿದರು.

Advertisement

ಅವರು ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ವಿದ್ಯಾ ಸಮೂಹ ಸಂಸ್ಥೆಗಳಲ್ಲಿ ಒಂದಾದ ಅಂಬಿಕಾ ಪದವಿ ಪೂರ್ವ ವಿದ್ಯಾಲಯ ನೆಲ್ಲಿಕಟ್ಟೆಯಲ್ಲಿ ಅಗ್ನಿಪಥ್ ಹಾಗೂ ಎನ್.ಡಿ.ಎ. ವಿಚಾರವಾಗಿ ವಿದ್ಯಾರ್ಥಿಗಳಿಗೆ ನೀಡಲಾದ ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು. ಅಗ್ನಿಪಥ್ ಪಡೆಗೆ ಪ್ರವೇಶ , ಪರೀಕ್ಷಾ ಸಿದ್ಧತೆ, ನಿಯಮಗಳು, ವೇತನ ಹಾಗೂ ಇತರ ಸೌಲಭ್ಯಗಳು, ಮಹತ್ವ, ತರಬೇತು ಎಲ್ಲ ವಿಚಾರವಾಗಿ ಸಂಪೂರ್ಣ ಮಾಹಿತಿ ಇತ್ತರು. ಒಬ್ಬ ವ್ಯಕ್ತಿ ಹೇಗೆ ಯೋಧನಾಗಬಹುದು? ಅರ್ಹತೆಗಳೇನು ಎಂಬೆಲ್ಲ ವಿಚಾರವಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು ಹಾಗೂ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.

Advertisement
Advertisement
Advertisement

ಕಾಲೇಜಿನ ಉಪನ್ಯಾಸಕ ವೃಂದ, ಇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕ ಸುಬಹ್ಮಣ್ಯ ಕಾರ್ಯಕ್ರಮ ನಿರೂಪಿಸಿದರು. ಪ್ರಯೋಗಾಲಯ ಸಹಾಯಕ ಮುರಳಿ ಮೋಹನ ಸಹಕರಿಸಿದರು.

Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಅಂಬಿಕಾದಲ್ಲಿ ಅಗ್ನಿಪಥ್ ಹಾಗೂ ಎನ್.ಡಿ.ಎ. ಮಾಹಿತಿ ಕಾರ್ಯಕ್ರಮ"

Leave a comment

Your email address will not be published.


*