ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಿಂದ ಗಣೇಶ ಚೌತಿ ಆಚರಣೆ | ಮುಂದಿನ ಎಲ್ಲಾ ಶತಮಾನಗಳೂ ಭಾರತದ್ದಾಗಿರಬೇಕು : ಸುಬ್ರಹ್ಮಣ್ಯ ನಟ್ಟೋಜ

September 21, 2023
9:50 AM
ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‍ಇ ಸಂಸ್ಥೆಯ ಆವರಣದಲ್ಲಿನ ಶ್ರೀ ಶಂಕರ ಸಭಾಭವನದಲ್ಲಿ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಲಾಯಿತು.

ನಮ್ಮ ಆಚರಣೆಗಳ ಹಿಂದೆ ಉದಾತ್ತವಾದ ಮೌಲ್ಯಗಳಿವೆ. ಹಬ್ಬ ಹರಿದಿನಗಳನ್ನು ಕೇವಲ ರಜಾದಿನಗಳನ್ನಾಗಿ ಮಾತ್ರ ಕಂಡರೆ ಆಧ್ಯಾತ್ಮಿಕವಾಗಿ ದೊರಕಬಹುದಾದ ಸಂತಸದಿಂದ ದೂರವಾಗುತ್ತೇವೆ. ನೈಜ ಆಚರಣೆಯಲ್ಲಿ ತೊಡಗಿದಾಗ ನಮ್ಮ ಬದುಕು ಉತ್ಕøಷ್ಟಗೊಳ್ಳುತ್ತಾ ಸಾಗುತ್ತದೆ. ವಿದ್ಯಾರ್ಥಿ ಜೀವನದಿಂದಲೇ ನಮ್ಮನ್ನು ನಾವು ಹಬ್ಬ ಹರಿದಿನಗಳಲ್ಲಿ ತೊಡಗಿಸಿಕೊಳ್ಳುವ ಅಗತ್ಯವಿದೆ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.

Advertisement

ಪುತ್ತೂರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‍ಇ ಸಂಸ್ಥೆಯ ಆವರಣದಲ್ಲಿನ ಶ್ರೀ ಶಂಕರ ಸಭಾಭವನದಲ್ಲಿ ಆಚರಿಸಲಾದ ಗಣೇಶ ಚತುರ್ಥಿ ಹಬ್ಬದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಂಗಳವಾರ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಧಾರ್ಮಿಕ ವ್ಯವಸ್ಥೆಯ ಅರಿವು ಮೂಡಬೇಕು. ಹಾಗಾಗಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿನ ಗಣೇಶ ಚೌತಿಯಲ್ಲಿ ವಿದ್ಯಾರ್ಥಿ ನಾಯಕರಿಂದಲೇ ಗಣಹೋಮ ನಡೆಸಲಾಗಿದೆ. ದೇವರಿಗೆ ಆರತಿ ಬೆಳಗಿಸಲಾಗಿದೆ. ವಿದ್ಯಾರ್ಥಿಗಳೇ ಮುಂದೆ ನಿಂತು ಆಚರಣೆಯನ್ನು ನೆರವೇರಿಸಿದಾಗ ಅದರ ಮಹತ್ವದ ಅರಿವು ಮೂಡುವುದಕ್ಕೆ ಸಾಧ್ಯ ಎಂದರಲ್ಲದೆ ಹಬ್ಬಗಳು ನಮ್ಮನ್ನು ಮತ್ತಷ್ಟು ಸಂಸ್ಕಾರವಂತರನ್ನಾಗಿಸಬೇಕು. ನಾಳಿನ ಭಾರತ ಬೆಳಗುವಲ್ಲಿ ಸಂಸ್ಕಾರಸಹಿತರಾದ ಯುವಜನತೆಯ ಅವಶ್ಯಕತೆ ಇದೆ. ಇಪ್ಪತ್ತೊಂದನೆಯ ಶತಮಾನದಿಂದ ಮೊದಲ್ಗೊಂಡು ಮುಂದಿನ ಎಲ್ಲಾ ಶತಮಾನಗಳು ಭಾರತದ್ದಾಗಿರಬೇಕು ಎಂದು ನುಡಿದರು.

ಧಾರ್ಮಿಕ ಉಪನ್ಯಾಸ ನೀಡಿದ ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಮಾತನಾಡಿ ಧರ್ಮ ಜಾಗೃತಿಯ ಮುಖಾಂತರ ರಾಷ್ಟ್ರಭಕ್ತಿಯನ್ನು ಉದ್ದೀಪನಗೊಳಿಸುವ ನೆಲೆಯಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರು ಗಣಪತಿ ಹಬ್ಬವನ್ನು ಸಾವ್ರತ್ರೀಕರಣಗೊಳಿಸಿದರು. ಹಾಗಾಗಿ ಭಾರತಕ್ಕೆ ಸ್ವಾತಂತ್ರ್ಯ ದೊರಕುವಲ್ಲಿ ಗಣೇಶ ಚೌತಿಯ ಕೊಡುಗೆಯೂ ಇದೆ. ಸನಾತನ ಧರ್ಮವು ತನ್ನ ಅನುಯಾಯಿಗಳಿಗೆ ನಿರಂತರ ಸತ್ಪ್ರೇರಣೆ ಒದಗಿಸುತ್ತದೆ ಎಂಬುದು ಗಮನಾರ್ಹ ಎಂದು ನುಡಿದರು.

ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಆಡಳಿತಾಧಿಕಾರಿ ಗಣೇಶ ಪ್ರಸಾದ್ ಎ, ಪುರೋಹಿತ ವೇ.ಮೂ.ಶ್ರೀಕೃಷ್ಣ ಉಪಾಧ್ಯಾಯ ಉಪಸ್ಥಿತರಿದ್ದರು. ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳು ಕಾರ್ಯಕ್ರಮ ನಡೆಸಿಕೊಟ್ಟರು. ಗಣೇಶ ಚೌತಿಯ ಪ್ರಯುಕ್ತ ವಿದ್ಯಾರ್ಥಿಗಳಿಂದ ಭಜನೆ, ಯಕ್ಷಗಾನ, ಚೆಂಡೆವಾದನ, ಚಿತ್ರಕಲೆ, ಭರತನಾಟ್ಯವೇ ಮೊದಲಾದ ಹಲವಾರು ಸಾಂಸ್ಕøತಿಕ ಕಾರ್ಯಕ್ರಮಗಳು ಆಯೋಜನೆಗೊಂಡವು.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಭಾರತದ ತೋಟಗಾರಿಕಾ ಹಣ್ಣಿನ ಬೆಳೆಗಳತ್ತ ಚಿತ್ತ | ಜಾಗತಿಕ ಮಾರುಕಟ್ಟೆಗೆ ಭಾರತೀಯ ತಾಜಾ ಹಣ್ಣುಗಳ ಪರಿಚಯ |
April 22, 2025
7:18 AM
by: ದ ರೂರಲ್ ಮಿರರ್.ಕಾಂ
ಮಕ್ಕಳಿಗೆ ಪರಿಸರದ ಬಗ್ಗೆ ಕಾಳಜಿ ಕುರಿತು ಹೆಚ್ಚು ತಿಳುವಳಿಕೆ ನೀಡಬೇಕಾದ ಅಗತ್ಯವಿದೆ
April 22, 2025
6:51 AM
by: The Rural Mirror ಸುದ್ದಿಜಾಲ
ಹಾವು, ಕಾಗೆ, ನಾಯಿಗಳು ಕನಸಿನಲ್ಲಿ ಬಂದ್ರೆ ನಿರ್ಲಕ್ಷ್ಯ ಮಾಡ್ಬೇಡಿ…!
April 22, 2025
6:41 AM
by: ದ ರೂರಲ್ ಮಿರರ್.ಕಾಂ
ಜಮ್ಮು-ಕಾಶ್ಮೀರದಲ್ಲಿ ಮೇಘಸ್ಫೋಟ | ಆಲಿಕಲ್ಲು, ಗುಡುಗು ಸಹಿತ ಭಾರಿ ಮಳೆ
April 22, 2025
6:30 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group