Advertisement
ಸುದ್ದಿಗಳು

ಅಂಬಿಕಾದಲ್ಲಿ ರಕ್ಷಾಬಂಧನ ಕಾರ್ಯಕ್ರಮ | ಕ್ಷಾತ್ರಧರ್ಮವನ್ನು ಪರಿಪಾಲಿಸದಿದ್ದರೆ ಸಂಸ್ಕೃತಿ ನಷ್ಟವಾಗುವ ಆತಂಕ – ಬಂಗಾರಡ್ಕ ವಿಶ್ವೇಶ್ವರ ಭಟ್‌ |

Share

ಸಾಮಾಜಿಕ ಚಿಂತನೆಯ ಮೂಲಕ ಸಾಂಸ್ಕೃತಿಕ ಏಕತೆಯನ್ನು ಸಾಧಿಸಿ ಸದೃಢ ಭಾರತವನ್ನು ನಿರ್ಮಿಸುವುದು ವಿದ್ಯಾರ್ಥಿಗಳ ಜೀವನದ ಗುರಿಯಾಗಬೇಕು. ಧಾರ್ಮಿಕತೆಯ ಲೇಪದೊಂದಿಗೆ ಕ್ಷಾತ್ರಧರ್ಮವನ್ನು ಪರಿಪಾಲಿಸದಿದ್ದರೆ ಸಂಸ್ಕೃತಿ ನಷ್ಟವಾಗುವ ಆತಂಕವಿದೆ. ಬಾಹ್ಯಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಶಕ್ತಿಶಾಲಿ ದೇಶವನ್ನು ಕಟ್ಟುವ ಮೂಲಕ ವಿದ್ಯಾರ್ಥಿಗಳ ಬದುಕು ರಾಷ್ಟ್ರಕ್ಕೆ ಪ್ರೇರಣೆಯಾಗಬೇಕು ಎಂದು ಹಿರಿಯ ಲೇಖಕ, ಸಾಮಾಜಿಕ ಮುಂದಾಳು ವಿಶ್ವೇಶ್ವರ ಭಟ್ ಬಂಗಾರಡ್ಕ ಹೇಳಿದರು.

ಅವರು ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ಕಾಲೇಜಿನಲ್ಲಿ ನಡೆದ ರಕ್ಷಾಬಂಧನ ಹಾಗೂ ಸಂಸ್ಕೃತೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಗುರುವಾರ ಮಾತನಾಡಿದರು.
ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಮುಖ್ಯ ಅತಿಥಿಯಾಗಿದ್ದ ಯುವವಾಗ್ಮಿ ಗಣಿತ ಹಾಗೂ ಸಂಸ್ಕೃತ ಉಪನ್ಯಾಸಕ ಆದರ್ಶ ಗೋಖಲೆ ಮಾತನಾಡಿ ಪ್ರತಿಯೊಂದು ಹಬ್ಬವೂ ಪ್ರೇರಣೆ, ಆತ್ಮವಿಶ್ವಾಸವನ್ನು ತುಂಬುತ್ತದೆ. ಸೋದರ ಭಾವ ಜಾಗೃತಗೊಳಿಸಿ ಹೊಸ ಚೈತನ್ಯ ಮೂಡಿಸುವ ಶಕ್ತಿ ರಕ್ಷಾ ಬಂಧನಕ್ಕೆ ಇದೆ. ಜಗತ್ತನ್ನು ಗೆಲ್ಲುವುದಾದರೆ ಅದು ಪ್ರೀತಿಯಿಂದ ಸಾಧ್ಯ. ಪ್ರಪಂಚದಾದ್ಯಂತ ಅಣ್ಣ ತಂಗಿ ಎಂಬ ಸಂಬಂಧವನ್ನು ಬೆಸೆಯುವ ಭಾವನೆ, ಹಾಗೂ ಅವಿನಾಭಾವ ಸಂಬಂಧವನ್ನು ರಕ್ಷೆ ಎಲ್ಲರಲ್ಲೂ ತುಂಬುತ್ತದೆ. ದೇಶದ ರಕ್ಷೆ, ಸಸ್ಯ ಸಂರಕ್ಷಣೆಯನ್ನು ಸಾರುವ ಈ ರಕ್ಷಾಬಂಧನ ಸ್ವಾಭಿಮಾನ, ಪರಂಪರೆಯನ್ನು ಅಂಬಿಕಾದಲ್ಲಿ ಜಾಗೃತಗೊಳಿಸುವಲ್ಲಿ ಸಹಕಾರಿಯಾಗಲಿ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ಮಹಾಭಾರತ ಕಾಲದಿಂದಲೂ ಪ್ರಚಲಿತದಲ್ಲಿರುವ ರಕ್ಷಾಬಂಧನದ ಪಾವಿತ್ರ್ಯತೆಯನ್ನು ಅರ್ಥೈಸಿ, ನುಡಿದುದನ್ನು ನಡೆಯಲ್ಲಿ ತೋರುವ ಆದರ್ಶವನ್ನು ಮೈಗೂಡಿಸಿಕೊಳ್ಳಬೇಕು. ರಕ್ಷಾಬಂಧನದ ಮಹತ್ವವನ್ನು ಅರಿತು ಅದರಂತೆ ಜೀವನದಲ್ಲಿ ಮುನ್ನಡೆಯಬೇಕು ಎಂದರು.
ಶ್ರಾವಣ ಸಂಸ್ಕೃತೋತ್ಸವದ ಮಹತ್ವದ ಕುರಿತು ವಿದ್ಯಾರ್ಥಿನಿ ಹಿತಾ ಕಜೆ ಮಾತನಾಡಿದರೆ, ಶ್ರೀರಾಮಸ್ತುತಿ ಕಾರ್ಯಕ್ರಮವನ್ನು ವಿದ್ಯಾರ್ಥಿನಿ ವರಲಕ್ಷ್ಮಿ ನಡೆಸಿಕೊಟ್ಟರು. ಖಜಾಂಚಿ ರಾಜಶ್ರೀ ನಟ್ಟೋಜ, ಪ್ರಾಂಶುಪಾಲ ಸತ್ಯಜಿತ್ ಉಪಾಧ್ಯಾಯ, ಬಪ್ಪಳಿಗೆ ಸಂಸ್ಥೆಯ ಪ್ರಾಚಾರ್ಯೆ  ಸುಚಿತ್ರಾ ಪ್ರಭು, ಉಪಪ್ರಾಚಾರ್ಯ ಗಣೇಶ್ ಪ್ರಸಾದ್ ಡಿ ಎಸ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಆಶಿತಾ, ಅರ್ಪಿತಾ, ಅಪೇಕ್ಷಾ, ಪಾವನಾ, ಶ್ರಾವ್ಯಾ, ಶಾನ್ವಿ ಪ್ರಾರ್ಥಿಸಿ, ವಿದ್ಯಾರ್ಥಿ ಅಭಿರಾಮ ಭಟ್ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಉತ್ಸವಿ ರೈ ನಿರೂಪಿಸಿ, ಉಪನ್ಯಾಸಕಿ ಗೀತಾ ಸಿ ಕೆ ಹಾಗೂ ಸುಮನಾ ವಂದಿಸಿದರು. ಉಪನ್ಯಾಸಕ ಸತೀಶ್ ಕೆ ಕಾರ್ಯಕ್ರಮ ನಿರೂಪಿಸಿದರು
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

25 ಸಾವಿರ ವರ್ಷಗಳ ಹಿಂದೆಯೇ ಅಡಿಕೆ ಬಳಕೆ ? ಪುರಾತನ ಹಲ್ಲುಗಳಲ್ಲಿ ಸಿಕ್ಕಿದ ಸುಳಿವು

ಇಂಡೋನೇಷ್ಯಾದ ಸುಲವೆಸಿಯಲ್ಲಿ ಪತ್ತೆಯಾದ ಸುಮಾರು 25,000 ವರ್ಷಗಳ ಹಿಂದಿನ ಮಾನವ ಹಲ್ಲುಗಳಲ್ಲಿ ಅಡಿಕೆ…

34 minutes ago

“ಹನುಮಾನ್ ಅಂಶ್‌” ಬಾಕ್ಸ್ ಆಫೀಸ್ ದಾಖಲೆ – 40ನೇ ದಿನವೂ ₹8.25 ಕೋಟಿ – ಪಠಾಣ್‌, ಛಾವಾ, ಉರಿ ದಾಖಲೆ ಮೀರಿಸಿದ ಸಿನಿಮಾ

‘ಹನುಮಾನ್ ಅಂಶ್’ ಸಿನಿಮಾ 40ನೇ ದಿನವೂ ₹8.25 ಕೋಟಿ ಗಳಿಸಿ ಬಾಕ್ಸ್ ಆಫೀಸ್‌ನಲ್ಲಿ…

2 hours ago

ಮುಂಗಾರು ಹಿಂದೆ ಸರಿಯಲು ಸಜ್ಜು – ಸೆ.17ರಿಂದ ಪಶ್ಚಿಮ ರಾಜಸ್ಥಾನದಲ್ಲಿ ಆರಂಭವಾಗುವ ಸಾಧ್ಯತೆ

ನೈಋತ್ಯ ಮುಂಗಾರು ಹಿಂದೆ ಸರಿಯಲು ಪೂರಕ ಪರಿಸ್ಥಿತಿಗಳು ನಿರ್ಮಾಣವಾಗುತ್ತಿದ್ದು, ಸೆ.17ರ ವೇಳೆಗೆ ಪಶ್ಚಿಮ…

8 hours ago

ಹವಾಮಾನ ವರದಿ | 16-09-2026 | ಕರಾವಳಿಯಲ್ಲಿ ಸೆಖೆ, ಸಂಜೆ ಅಲ್ಲಲ್ಲಿ ಮಳೆ ನಿರೀಕ್ಷೆ

ಕರ್ನಾಟಕದ ಹಲವು ಭಾಗಗಳಲ್ಲಿ ಸೆ.17ರಂದು ಸಂಜೆ ಹಾಗೂ ರಾತ್ರಿ ಅಲ್ಲಲ್ಲಿ ಸಾಮಾನ್ಯ ಮಳೆಯ…

9 hours ago

ಕೋಲಾರ ಸಮೀಪ 10 ಟನ್ ಸಿಂಥೆಟಿಕ್‌ ಅಡಿಕೆ ವಶ…!?

ಕೋಲಾರದಿಂದ ಬೆಂಗಳೂರಿಗೆ ಸಾಗಿಸಲಾಗುತ್ತಿದ್ದ ಸುಮಾರು 10 ಟನ್ ಸಿಂಥೆಟಿಕ್‌ ಅಡಿಕೆಯನ್ನು ಅಧಿಕಾರಿಗಳು ವಶಪಡಿಸಿಕೊಂಡಿರುವುದಾಗಿ…

16 hours ago

ಮಂಗಳೂರಿನ ಸಚಿವ ಸಂಪುಟ ಸಭೆ | ‘ಅಡಿಕೆ ಜೈವಿಕ ಆರ್ಥಿಕತೆ ಮಿಷನ್’ ಘೋಷಣೆಗೆ ಆಗ್ರಹ

ಮಂಗಳೂರಿನಲ್ಲಿ ಸೆ.18ರಂದು ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ…

1 day ago