ಅಂಬಿಕಾ ಪ.ಪೂ. ವಿದ್ಯಾಲಯದಲ್ಲಿ ಮೇ.2 ರಿಂದ ಸೇತುಬಂಧ ತರಗತಿ ಆರಂಭ | ಕೊರೋನಾದಿಂದ ಪ್ರೌಢಶಾಲೆಯಲ್ಲಿ ಕಳೆದುಕೊಂಡ ಪಾಠಗಳೂ ಸೇರಿದಂತೆ ಪಿಯು ತರಬೇತಿ

May 1, 2022
10:02 PM

ಪುತ್ತೂರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಮೇ.2ರಿಂದ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಸೇತುಬಂಧ ತರಗತಿಗಳು ಆರಂಭಗೊಳ್ಳಲಿವೆ. ಸೇತು ಬಂಧ ತರಗತಿಗಳು ಹತ್ತನೆಯ ತರಗತಿಯಿಂದ ಪ್ರಥಮ ಪಿಯು ತರಗತಿಗೆ ಸೇರಿಕೊಂಡಿರುವ ಅಥವ ಸೇರಿಕೊಳ್ಳಬಯಸುವ ಯಾವುದೇ ವಿದ್ಯಾರ್ಥಿಗೆ ಉಚಿತವಾಗಿ ದೊರಕಲಿವೆ.

Advertisement
Advertisement
ಪಿಯುಸಿ ತರುವಾಯ ಜೆಇಇ, ನೀಟ್, ಸಿಇಟಿಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಬಯಸುವ ವಿದ್ಯಾರ್ಥಿಗಳು ಪ್ರೌಢಶಾಲಾ ಮಟ್ಟದಿಂದಲೇ ಪಠ್ಯ ವಿಷಯಗಳನ್ನು ಸಮರ್ಪಕವಾಗಿ ಅಧ್ಯಯನ ಮಾಡಿಕೊಂಡೇ ಪಿಯು ಶಿಕ್ಷಣ ಪಡೆಯಬೇಕಾದ ಅಗತ್ಯವಿದೆ. ಆದರೆ ಕಳೆದ ಎರಡು – ಮೂರು ವರ್ಷಗಳಿಂದ ಕೊರೋನಾ ಕಾರಣಕ್ಕಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಅನೇಕ ಪಾಠ ಪ್ರವಚನಗಳು ಕೈತಪ್ಪಿವೆ. ಜತೆಗೆ ಪಠ್ಯ ವಿಷಯಗಳೂ ಕಡಿತಗೊಂಡಿವೆ. ಇದು ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಸಂದರ್ಭದಲ್ಲಿ ಸಮಸ್ಯೆಯಾಗಿ ಪರಿಣಮಿಸಲಿದೆ. ಹಾಗಾಗಿಯೇ ಈ ಸೇತುಬಂಧ ತರಗತಿಗಳನ್ನು ಉಚಿತವಾಗಿ ಹಮ್ಮಿಕೊಳ್ಳಲಾಗಿದೆ.

ಸೇತುಬಂಧ ತರಗತಿಗಳಲ್ಲಿ ನುರಿತ ಹಾಗೂ ವಿಷಯ ತಜ್ಞ, ಅನುಭವಿ ಉಪನ್ಯಾಸಕರು ತರಗತಿ ನಡೆಸಿಕೊಡಲಿದ್ದಾರೆ. ಪ್ರಥಮ ಪಿಯುಸಿ ಪಠ್ಯದ ಬಗೆಗಿನ ಉಪನ್ಯಾಸ, ಮಾಹಿತಿ, ತರಬೇತಿಗಳಲ್ಲದೆ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ಕೊರೋನಾ ಕಾರಣಕ್ಕಾಗಿ ಕಳೆದುಕೊಂಡ ಗಣಿತ, ವಿಜ್ಞಾನ ಪಠ್ಯಗಳನ್ನೂ ಬೋಧಿಸಿ, ಮುಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅವರನ್ನು ತಯಾರು ಮಾಡಲಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯನ್ನೂ ವೈಯಕ್ತಿಕವಾಗಿ ಗಮನಿಸಿ, ವಿಷಯಗಳನ್ನು ಮನದಟ್ಟು ಮಾಡಿಕೊಡುವುದಲ್ಲದೆ, ಆತನನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಮರ್ಪಕವಾಗಿ ತಯಾರು ಮಾಡುವ ಗುರಿಯನ್ನು ಈ ಸೇತುಬಂಧ ತರಗತಿಗಳು ಒಳಗೊಂಡಿವೆ.

ಈಗಾಗಲೇ ಅನೇಕ ಮಂದಿ ವಿದ್ಯಾರ್ಥಿಗಳು ಈ ತರಗತಿಗಳಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಇನ್ನು ಕೂಡ ಆಸಕ್ತರಿಗೆ ಅವಕಾಶವನ್ನು ಮುಕ್ತವಾಗಿಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ : 9448835488

Advertisement
Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಪಾರ ಏಕಾದಶಿಯ ನಾಲ್ಕು ಶುಭಯೋಗ | ಐದು ರಾಶಿಯವರಿಗೆ ವಿಷ್ಣುವಿನ ಅನುಗ್ರಹ ಪ್ರಾಪ್ತಿ
May 23, 2025
7:30 AM
by: ದ ರೂರಲ್ ಮಿರರ್.ಕಾಂ
ಸಂಪಾಜೆಯಲ್ಲಿ ಮಹಿಳಾ ಗ್ರಾಮಸಭೆ | ವಿವಿಧ ಮಾಹಿತಿ -ತರಬೇತಿ
May 22, 2025
10:48 PM
by: The Rural Mirror ಸುದ್ದಿಜಾಲ
ಚಿಕ್ಕಮಗಳೂರು ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಲಭ್ಯ
May 22, 2025
10:27 PM
by: ದ ರೂರಲ್ ಮಿರರ್.ಕಾಂ
ಬೆಂಗಳೂರಿನಲ್ಲಿ ಕಸ ವಿಲೇವಾರಿಗೆ 4,790 ಕೋಟಿ ಮೊತ್ತದಲ್ಲಿ 33 ಪ್ಯಾಕೇಜ್
May 22, 2025
9:50 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group