ಕಾಲೇಜು ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದ ವಿದ್ಯಾರ್ಥಿಗಳಿಗೆ ಒಮ್ಮಿಂದೊಮ್ಮೆಗೆ ಆಶ್ಚರ್ಯ…! ಇದೇನು?. ಅಂತ ಅತ್ತಿತ್ತ ನೋಡುತ್ತಿರುವಾಗಲೇ ಸಾಲು ಸಾಲು ಹುಲಿಗಳು ವೇದಿಕೆಯನ್ನೇರಿ ಕುಣಿಯಲಾರಂಭಿಸಿದ್ದವು. ವೇದಿಕೆಯೊಂದರಲ್ಲೇ ಮೂವತ್ತಕ್ಕಿಂತಲೂ ಅಧಿಕ ಹುಲಿಗಳು ನರ್ತಿಸುವ ಅಪೂರ್ವ ಅವಕಾಶವನ್ನು ನೆರೆದ ಸಾವಿರಾರು ಮಂದಿ ತಮ್ಮದಾಗಿಸಿಕೊಂಡರು.
ಪುತ್ತೂರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತತಿರುವ ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಶನಿವಾರ ವಾರ್ಷಿಕೋತ್ಸವ – ಮಾನಸೋಲ್ಲಾಸ 2022-23 ನಡೆಯುತ್ತಿದ್ದ ಮಧ್ಯೆಯಲ್ಲಿ ಈ ಹುಲಿಗಳ ಆಗಮನವಾಯಿತು. ಪುತ್ತೂರಿನ ಕಲ್ಲೇಗ ಟೈಗರ್ಸ್ ತಂಡ ಪ್ರಸ್ತುತಿಯಲ್ಲಿ ಅನೇಕ ಮಂದಿ ಹುಲಿವೇಷಧಾರಿಗಳಾಗಿ ಪುತ್ತೂರಿಗರ ಮನರಂಜಿಸುತ್ತಿದ್ದಾರೆ. ಅದರ ಭಾಗವಾಗಿ ಆ ತಂಡದಿಂದ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಸುಮಾರು ಅರ್ಧ ಗಂಟೆಯ ಹುಲಿನರ್ತನ ನಡೆಯಿತು. ಈ ‘ಪಿಲಿ ನಲಿಕೆ’ ಯುವಮನಸ್ಸುಗಳಲ್ಲಿ ತುಳುನಾಡಿನ ಸಂಸ್ಕೃತಿಯ ಭಾಗವನ್ನು ಅನಾವರಣಗೊಳಿಸಿತು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel