ಅಂಬಿಕಾ ಪದವಿ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ

January 18, 2021
8:48 PM

ಪುತ್ತೂರು: ವಿದ್ಯೆ ಎನ್ನುವುದು ಸಂಸ್ಕಾರ, ದೇಶಪ್ರೇಮವನ್ನು ತುಂಬುವ ಮಾಧ್ಯಮವಾಗಬೇಕು. ಇಂದು ವೈದ್ಯಕೀಯ ಶಾಸ್ತ್ರ, ಇಂಜಿನಿಯರಿಂಗ್ ನಂತಹ ಶಿಕ್ಷಣ ಪಡೆದವರೇ ಬಾಂಬ್ ಸಿಡಿಸುವಂತಹ ಘಟನೆಗಳನ್ನು ಕಾಣುತ್ತಿದ್ದೇವೆ. ಹಾಗಾದರೆ ನಮ್ಮ ಶಿಕ್ಷಣ ವ್ಯವಸ್ಥೆ ಏನನ್ನು ಕಲಿಸುತ್ತಿದೆ ಎಂಬ ಆತಂಕ ಮೂಡುತ್ತಿದೆ. ಆದ್ದರಿಂದ ಅತ್ಯುತ್ತಮ ಗುಣಮಟ್ಟದ ನಾಗರಿಕರನ್ನು ತಯಾರಿಸುವ ಕಾರ್ಯವನ್ನು ಶಿಕ್ಷಣ ಮಾಡಬೇಕು ಎಂದು ಸಂಗೀತ ಗುರು ವಿದ್ವಾನ್ ಕಾಂಚನ ಈಶ್ವರ ಭಟ್ ಹೇಳಿದರು.

ಅವರು ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನಗರದ ಬಪ್ಪಳಿಗೆಯಲ್ಲಿರುವ ಅಂಬಿಕಾ ಪದವಿ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿ ಸೋಮವಾರ ಮಾತನಾಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಚಾರ್ಯ ಡಾ.ವಿನಾಯಕ ಭಟ್ ಗಾಳಿಮನೆ ಮಾತನಾಡಿ ಶಿಕ್ಷಣ ವ್ಯಕ್ತಿತ್ವದ ರೂಪಿಸುವಿಕೆಯ ಭಾಗವಾಗಬೇಕು. ಸತ್ಪ್ರಜೆಗಳ ರೂಪಿಸುವಿಕೆಗೆ ನಾಂದಿಯಾಗಬೇಕು. ಭಾರತೀಯ ಪರಂಪರೆಯ ಶುದ್ಧ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರೆಯಬೇಕಾದದ್ದು ಇಂದಿನ ತುರ್ತು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ನಟ್ಟೋಜ ಫೌಂಡೇಶನ್ ಟ್ರಸ್ಟ್ ನ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ನಮಗಿಂದು ದೇಶಭಕ್ತರು ಬೇಕಾಗಿದ್ದಾರೆ. ವಿದೇಶೀ ಸಂಸ್ಕೃತಿಯೊಳಗೆ ಮುಳುಗುತ್ತಿರುವ ನಮ್ಮ ದೇಶವನ್ನು ಸ್ವದೇಶೀ ಸಂಸ್ಕೃತಿಯ ಬಲದಿಂದ ಮೇಲೆಬ್ಬಿಸಬೇಕಿದೆ. ಒಂದು ರೀತಿಯಲ್ಲಿ ವಿದೇಶೀ ಪ್ರವಾಹದ ವಿರುದ್ಧ ಈಜಿ ಗೆಲುವು ಸಾಧಿಸಬೇಕಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಟ್ಟೋಜ ಫೌಂಡೇಶನ್ ಟ್ರಸ್ಟ್ ನ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ಉಪಸ್ಥಿತರಿದ್ದು ಶುಭ ಹಾರೈಸಿದರು.

ಎಲ್ಲಾ ವಿದ್ಯಾರ್ಥಿಗಳಿಂದ ವಂದೇಮಾತರಂ ಪ್ರಾರ್ಥನೆ ನಡೆಯಿತು. ವಿದ್ಯಾರ್ಥಿ ಕಾರ್ತಿಕ್ ಕೆ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಸಾಯಿಶ್ವೇತ ವಂದಿಸಿ, ವೈಷ್ಣವಿ ಜೆ ರಾವ್ ಕಾರ್ಯಕ್ರಮ ನಿರ್ವಹಿಸಿದರು.

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ನಭೋಮಂಡಲಕ್ಕೆ ಇಣುಕುನೋಟ | ಗಗನಯಾತ್ರಿಗಳನ್ನು ಸ್ವಾಗತಿಸೋಣ…|
March 18, 2025
9:52 PM
by: ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ
ಚಿಕ್ಕಮಗಳೂರು ಜಿಲ್ಲೆ | ಮಂಗನ ಕಾಯಿಲೆ ಸೋಂಕಿಗೆ ವೃದ್ಧೆ ಬಲಿ | ಮಂಗನಕಾಯಿಲೆ ಬಗ್ಗೆ ಇರಲಿ ಎಚ್ಚರ |
March 18, 2025
8:31 PM
by: The Rural Mirror ಸುದ್ದಿಜಾಲ
ಸ್ಥಳೀಯ ಮಟ್ಟದಲ್ಲಿ ಸೌರ ವಿದ್ಯುತ್ ಉತ್ಪಾದಿಸಿ ರೈತರ ಪಂಪ್ ಸೆಟ್ ಗಳಿಗೆ ಪೂರೈಸಲು ಚಿಂತನೆ | ಸದ್ಯ ರೈತರ ಪಂಪ್‌ಸೆಟ್‌ಗಳಿಗೆ 7 ಗಂಟೆಗಳ ಕಾಲ ವಿದ್ಯುತ್ ಪೂರೈಕೆ |
March 18, 2025
8:13 PM
by: The Rural Mirror ಸುದ್ದಿಜಾಲ
ಅಮೆರಿಕದ ಹಲವು ರಾಜ್ಯಗಳಲ್ಲಿ ಚಂಡಮಾರುತ-ಸುಳಿಗಾಳಿ; ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿ
March 18, 2025
7:57 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

NEWS UPDATE ಪಡೆಯಲು ಇಲ್ಲಿ ಬನ್ನಿ...