ಪುತ್ತೂರಿನಲ್ಲಿ ಗೃಹ ಸಚಿವ ಅಮಿತ್‌ ಶಾ | ದೇಶದಲ್ಲಿ ಸಹಕಾರಿ ಕ್ಷೇತ್ರದ ಮೂಲಕ ರೈತರ ನೆರವಿಗೆ ಸರ್ಕಾರ ಬದ್ಧ |

February 11, 2023
5:16 PM

ದೇಶದಲ್ಲಿ ಸಹಕಾರಿ ಶಕ್ತಿಯನ್ನು ನಾವು ಗಮನಿಸಿದ್ದೇವೆ. ಮುಂದಿನ ದಿನಗಳಲ್ಲಿ  ಸಹಕಾರ ಕ್ಷೇತ್ರದ ಮೂಲಕ ರೈತರ ಸೇವೆ ಮಾಡಲು ಸರ್ಕಾರ ಬದ್ಧವಾಗಿದೆ. ಇದಕ್ಕಾಗಿಯೇ ಈ ಬಾರಿಯ ಬಜೆಟ್‌ ನಲ್ಲಿ ಸಹಕಾರಿ ಕ್ಷೇತ್ರಕ್ಕೂ ಅನುದಾನ ನೀಡಲಾಗಿದೆ ಎಂದು ಕೇಂದ್ರ ಗೃಹ ಸಚಿವ, ಸಹಕಾರಿ ಸಚಿವ ಅಮಿತ್‌ ಶಾ ಹೇಳಿದರು.

Advertisement
Advertisement
Advertisement
Advertisement

ಪುತ್ತೂರಿನಲ್ಲಿ ಕ್ಯಾಂಪ್ಕೋ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತ್‌ ಶಾ, ಸಹಕಾರಿ ಕ್ಷೇತ್ರದ ಶಕ್ತಿ ಅಪಾರವಾಗಿದೆ. ನೀವಿಲ್ಲಿ ಬೆಳೆದ ಅಡಿಕೆಯನ್ನ ಗುಜರಾತಿನ ನಾವು ತಿನ್ನುತ್ತೇವೆ. ಸಹಕಾರಿ ಕ್ಷೇತ್ರವು ಈ ಕೊಂಡಿಯನ್ನು ಸೃಷ್ಟಿಸಿದೆ. ಸಹಕಾರಿ ಕ್ಷೇತ್ರಕ್ಕೆ ಕ್ಯಾಂಪ್ಕೋ ಮಾದರಿಯಾಗಿದೆ. ಕ್ಯಾಂಪ್ಕೋ ಬೆಳವಣಿಗೆ ನೋಡಿ ಈ ದೇಶದಲ್ಲಿ ಸಹಕಾರಿ ಕ್ಷೇತ್ರದ ಶಕ್ತಿಯನ್ನು ನಾನು ಗಮನಿಸಿದ್ದೇನೆ, ಈ ಮೂಲಕ ಸಹಕಾರಿ ಶಕ್ತಿ ತಿಳಿಯುತ್ತದೆ ಎಂದು ಅಮಿತ್‌ ಶಾ  ಹೇಳಿದರು. ವಾರಣಾಸಿ ಸುಬ್ರಾಯ ಭಟ್‌ ನೇತೃತ್ವದಲ್ಲಿ ಈ ಸಂಸ್ಥೆಯು 3000  ಸದಸ್ಯರಿಂದ ಆರಂಭವಾಗಿದೆ, ಇಂದು ಒಂದು ಲಕ್ಷ ಸದಸ್ಯರನ್ನು ಹೊಂದಿದೆ,  ಮೂರು ಸಾವಿರ ಕೋಟಿ ವ್ಯವಹಾರ ಆಗುತ್ತದೆ ಎನ್ನುವುದು  ಸಹಕಾರಿ ಶಕ್ತಿಯನ್ನು ನೆನೆಪಿಸುತ್ತದೆ ಎಂದರು. ಸರ್ಕಾರವು ಸಹಕಾರಿ ಸಂಘದ ಮೂಲಕ ರೈತರ ಸೇವೆ ಮಾಡಲು ಸಿದ್ಧವಾಗಿದೆ. ಇದಕ್ಕಾಗಿಯೇ ಈ ಬಜೆಟ್‌ ನಲ್ಲಿ ಮೋದಿ ಅವರು ಪಂಚಾಯತ್‌ ಮಟ್ಟದಲ್ಲಿ ಸಹಕಾರಿ ಪ್ಯಾಕ್ಸ್ ಸ್ಥಾಪನೆಗೆ ಸಿದ್ದವಾಗಿದೆ ಎಂದರು. ಕ್ಯಾಂಪ್ಕೋ ಕೃಷಿ ಮಾಲ್‌ಗೆ ಶಂಕುಸ್ಥಾಪನೆಯಾಗಿದೆ, ಈ ಮೂಲಕ ಕೃಷಿ ವಸ್ತು, ಗೊಬ್ಬರ, ಯಂತ್ರಗಳು ಇಲ್ಲಿ ಲಭ್ಯವಾಗಲಿದೆ, ದೇಶದ ಎಲ್ಲಾ ಕಡೆಗಳಲ್ಲೂ ಇದೇ ಮಾದರಿಯಲ್ಲಿ ಸಂಸ್ಥೆ ತೆರೆಯುವ ಯೋಜನೆ ಇದೆ ಎಂದರು.  ಅಡಿಕೆ ಮತ್ತು ಕೋಕೋ ಸಂಸ್ಥೆಗೆ 50 ವರ್ಷ ತುಂಬಿದೆ ಎನ್ನುವುದೇ ಈ ಸಂಘದ   ಪ್ರಾಮಾಣಿಕತೆಗೆ ನೀಡಿದ ಸರ್ಟಿಫಿಕೇಟ್‌ ಎಂದು ಅಮಿತ್‌ ಶಾ ಹೇಳಿದರು.

Advertisement

ಬಿಜೆಪಿ ಸರ್ಕಾರವು ಬಡವರಿಗೆ ನೆರವಾಗುತ್ತಿದೆ, ಹಲವು ಯೋಜನೆ ತಂದಿದೆ. ಸಮಗ್ರ ದೇಶದ ಅಭಿವೃದ್ಧಿಗೆ ಬಿಜೆಪಿ ಕೆಲಸ ಮಾಡುತ್ತಿದೆ, ದೇಶದ ಸುರಕ್ಷತೆ ಕಡೆಗೂ ಗಮನಹರಿಸಿದೆ ಎಂದರು.  ಬಿಜೆಪಿಗೆ ಮತ ನೀಡಿದರೆ ದೇಶ ಭಕ್ತರಿಗೆ, ರಾಣಿ ಅಬ್ಬಕ್ಕ ಮತ ನೀಡಿದಂತೆ. ಕಾಂಗ್ರೆಸ್‌ ಗೆ  ಮತ ನೀಡಿದರೆ ಟಿಪ್ಪುವಿಗೆ ಮತ ನೀಡಿದಂತೆ. ಕಾಂಗ್ರೆಸ್‌ ಭ್ರಷ್ಟ ಸರ್ಕಾರವಾಗಿದೆ, ಜನತಾದಳ – ಕಾಂಗ್ರೆಸ್‌ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಬಾರದು ಎಂದು ಸಂಕಲ್ಪಿಸಬೇಕು ಎಂದು ಅಮಿತ್‌ ಶಾ ಹೇಳಿದರು.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |
February 21, 2025
10:43 AM
by: ಸಾಯಿಶೇಖರ್ ಕರಿಕಳ
ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!
February 20, 2025
8:07 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |
February 20, 2025
11:34 AM
by: ಸಾಯಿಶೇಖರ್ ಕರಿಕಳ
ಅಡಿಕೆಗೆ ಮೈಟ್ | ಆತಂಕ ಬೇಡ, ಇರಲಿ ಎಚ್ಚರ | ವಿಜ್ಞಾನಿಗಳಿಂದ ಮಾಹಿತಿ |
February 20, 2025
6:58 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror