ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಸೋಂಕು | ರೋಗಕ್ಕೆ 18 ಜನರ ಬಲಿ, 67 ಜನರಿಗೆ ಸೋಂಕು

September 15, 2025
10:30 PM

ಕೇರಳದಲ್ಲಿ ಪ್ರಾಥಮಿಕ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ (PAM) ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ವರದಿಯಾಗಿದೆ. ಇದು ಅಪರೂಪದ ಆದರೆ ಅತ್ಯಂತ ಮಾರಕವಾದ ಮಿದುಳಿನ ಸೋಂಕಾಗಿದೆ. ಇದುವರೆಗೆ ಕೇರಳದಲ್ಲಿ 18 ಜನರನ್ನು ಬಲಿ ತೆಗೆದುಕೊಂಡಿದೆ ಮತ್ತು 67 ಜನರಿಗೆ ಸೋಂಕು ತಗುಲಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಕೇರಳದಲ್ಲಿ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ ಪ್ರಕರಣಗಳ ಕುರಿತು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳುವಂತೆ, ಕಳೆದ ವರ್ಷದಿಂದ, 86 ಪ್ರಕರಣಗಳು ವರದಿಯಾಗಿವೆ. ಮರಣ ಪ್ರಮಾಣ ಶೇ.23 ರಷ್ಟು ಕಂಡುಬಂದಿದೆ.  ಮೆದುಳಿನಲ್ಲಿ ಅಮೀಬಾ ಮತ್ತು ಶಿಲೀಂಧ್ರ ಎರಡರ ಕಾರಣದಿಂದ  17 ವರ್ಷದ ವಿದ್ಯಾರ್ಥಿಯ ಪ್ರಕರಣದ ಮೂಲಕ ಬೆಳಕಿಗೆ ಬಂದಿದೆ. ವೈದ್ಯಕೀಯ ಅಧ್ಯಯನದ ಪ್ರಕಾರ ಇದೊಂದು ಗಂಭೀರ ಪ್ರಕರಣವಾಗಿದ್ದು, ಈ ರೋಗ ಬಾಧಿಸಿದರೆ ಬದುಕುವುದು ಕಷ್ಟ ಎಂದು ಹೇಳುತ್ತದೆ. ಈ ರೋಗವನ್ನು  ಅಲಪುಳ ವೈದ್ಯಕೀಯ ಕಾಲೇಜು ಇದನ್ನು ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ ಪ್ರಕರಣ ಎಂದು ಗುರುತಿಸಿದೆ. ಬಾಲಕನನ್ನು ತಿರುವನಂತಪುರಂ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಿ,  ಎರಡು ನರ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಯಿತು. ಅದಾದ ಬಳಿಕ  ಬಾಲಕನ ಆರೋಗ್ಯ ಸುಧಾರಿಸಿದೆ. ಈಗ ಅಂತಹದ್ದೇ ಹಲವು ಪ್ರಕರಣಗಳು ಬೆಳಕಿಗೆ ಬಂದಿದೆ ಎಂದು ಹೇಳಿದ್ದಾರೆ.

ಈ ರೋಗವು ನೇಗ್ಲೇರಿಯಾ ಫೌಲೆರಿ ಎಂಬ  ಜೀವಿಯಿಂದ ಉಂಟಾಗುತ್ತದೆ, ಇದನ್ನು ಸಾಮಾನ್ಯವಾಗಿ “ಮೆದುಳನ್ನು ತಿನ್ನುವ ಅಮೀಬಾ” ಎಂದು ಕರೆಯಲಾಗುತ್ತದೆ. ಈ ರೋಗವು ವೇಗವಾಗಿ ಮುಂದುವರಿಯುತ್ತದೆ ಮತ್ತು ಹೆಚ್ಚಾಗಿ ಮಾರಕವಾಗಿರುತ್ತದೆ. ಈ ರೋಗವು,  ಸೋಂಕಿತ ನೀರು ಮೂಗಿನ ಹೊಳ್ಳೆಗಳಿಗೆ ಪ್ರವೇಶಿಸಿದಾಗ, ಅಮೀಬಾವು ವ್ಯಕ್ತಿಗೆ ಸೋಂಕು ತರುತ್ತದೆ, ಸಾಮಾನ್ಯವಾಗಿ ಈಜುವಾಗ, ಡೈವಿಂಗ್ ಮಾಡುವಾಗ ಅಥವಾ  ನೀರಿನಿಂದ ಮೂಗು ತೊಳೆಯುವಾಗ ಈ ಅಮೀಬಾ ಸೇರಿಕೊಳ್ಳುತ್ತದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ..

ನೇಗ್ಲೇರಿಯಾ ಫೌಲೇರಿ ಸಾಮಾನ್ಯವಾಗಿ ಸರೋವರಗಳು, ನದಿಗಳು, ಕೊಳಗಳು ಮತ್ತು ಅಸಮರ್ಪಕವಾಗಿ ಸಂಸ್ಕರಿಸಿದ ಈಜುಕೊಳಗಳಂತಹ ಬೆಚ್ಚಗಿನ ಸಿಹಿನೀರಿನ ಮೂಲಗಳಲ್ಲಿ ಕಂಡುಬರುತ್ತದೆ. ಇದು ಉಷ್ಣವಲಯದ ಮತ್ತು ಉಪೋಷ್ಣವಲಯದ ಪ್ರದೇಶಗಳಲ್ಲಿ ಪ್ರಚಲಿತವಾಗಿರುವ 25 ಡಿಗ್ರಿ ಸೆಲ್ಸಿಯಸ್ ಮತ್ತು 40 ಡಿಗ್ರಿ ಸೆಲ್ಸಿಯಸ್ ನಡುವಿನ ತಾಪಮಾನದಲ್ಲಿ ಉತ್ತಮವಾಗಿ ಬೆಳೆಯುತ್ತದೆ. ಈ ರೋಗದ ಸಾಮಾನ್ಯ ಲಕ್ಷಣಗಳೆಂದರೆ ತೀವ್ರ ತಲೆನೋವು, ಅಧಿಕ ಜ್ವರ, ವಾಕರಿಕೆ, ವಾಂತಿ ಮತ್ತು ಮೂಗಿನಿಂದ ದ್ರವ ಸ್ರಾವ.

ಇದೀಗ ಕೇರಳದಲ್ಲಿ ಜಾಗೃತಿ ಆರಂಭವಾಗಿದ್ದು, ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ ವಿರುದ್ಧ ಜಾಗೃತಿ ಅಭಿಯಾನ ಹಾಗೂ ರಕ್ಷಣಾ ಕೆಲಸಗಳು ನಡೆಯಬೇಕು  ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಜನರು ನಿಂತ ಅಥವಾ ಕಲುಷಿತ ಜಲಮೂಲಗಳಲ್ಲಿ, ವಿಶೇಷವಾಗಿ ದನಗಳಿಗೆ ಬಳಸುವ ಜಲಮೂಲಗಳಲ್ಲಿ ಮುಖ ತೊಳೆಯುವುದು ಅಥವಾ ಸ್ನಾನ ಮಾಡುವುದನ್ನು ತಪ್ಪಿಸಬೇಕು ಎಂದು ಹೇಳಿದ್ದಾರೆ. ರಾಜ್ಯ ಸರ್ಕಾರವು ಈ ಅಮೀಬಾ ಪೀಡಿತ ಜಿಲ್ಲೆಗಳಲ್ಲಿ ಜ್ವರ ಸಮೀಕ್ಷೆ, ಜಾಗೃತಿ ಅಭಿಯಾನಗಳನ್ನು ನಡೆಸುವುದು ಮತ್ತು ಬಾವಿಗಳು ಮತ್ತು ಸಾರ್ವಜನಿಕ ನೀರಿನ ಮೂಲಗಳನ್ನು ಸ್ವಚ್ಛಗೊಳಿಸಲು ಮತ್ತು ಕ್ಲೋರಿನೇಟ್ ಮಾಡಲು ಅಧಿಕಾರಿಗಳಿಗೆ ನಿರ್ದೇಶನ ನೀಡುವಂತಹ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ..

Advertisement
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 11-01-2026| ಇಂದು ಕೆಲವೆಡೆ ಮಳೆ ನಿರೀಕ್ಷೆ | ಎಲ್ಲೆಲ್ಲಿ ಮಳೆ ಇರಬಹುದು..?
January 11, 2026
2:11 PM
by: ಸಾಯಿಶೇಖರ್ ಕರಿಕಳ
ಬರ ಪ್ರದೇಶ ಕೃಷಿಗೆ ಕಡಿಮೆ ವೆಚ್ಚದ ಪರಿಹಾರ | ಬೀಜ ಸಂಸ್ಕರಣೆಯಲ್ಲಿ ಒಂಟೆ ಮೂತ್ರ ಬಳಕೆ ಪರಿಣಾಮಕಾರಿ – ICAR ಅಧ್ಯಯನ
January 11, 2026
9:58 AM
by: ದ ರೂರಲ್ ಮಿರರ್.ಕಾಂ
ಗ್ರಾಮೀಣ ಉದ್ಯಮಿಗಳಿಂದ ಆರ್ಗ್ಯಾನಿಕ್ ಮಾದರಿ | ‘ಗ್ರೀನ್ ವಿಷನ್’ ವರ್ಮಿ ಕಾಂಪೋಸ್ಟ್ ಯಶೋಗಾಥೆ
January 11, 2026
8:30 AM
by: ದ ರೂರಲ್ ಮಿರರ್.ಕಾಂ
ಬಾಯಿಯ ಕ್ಯಾನ್ಸರ್ ಭೀತಿ ಕಡಿಮೆ ಮಾಡಲಿದೆಯೇ ‘ಇ-ಬೀಮ್’ ತಂತ್ರಜ್ಞಾನ? ಅಡಿಕೆ ಸಂಸ್ಕರಣೆಯಲ್ಲಿ ಹೊಸ ಮನ್ವಂತರ!
January 11, 2026
7:36 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror