ಪುತ್ತೂರಿನಲ್ಲಿ ಮತ್ತೆ ತಲವಾರು ಸುದ್ದಿ ಮಾಡಿದೆ. ಎರಡು ದಿನಗಳಿಂದ ಪುತ್ತೂರಿನಲ್ಲಿ ತಲವಾರು ದಾಳಿಯ ಸುದ್ದಿ ಇರುವಾಗಲೇ ಈಗ ಇನ್ನೊಂದು ತಲವಾರು ದಾಳಿಯ ಸುದ್ದಿ ಸದ್ದಾಗುತ್ತಿದೆ.
ಪುತ್ತೂರಿನ ಪುತ್ತಿಲ ಪರಿವಾರದ ಕಚೇರಿಗೆ ಬಳಿ ಯುವಕನ ಮೇಲೆ ತಲವಾರು ಜಳಪಿಸಿ ದಾಳಿಗೆ ಯತ್ನಿಸಿದ ಘಟನೆ ವರದಿಯಾಗಿದೆ. ಇದರ ಬೆನ್ನಲ್ಲೇ ಹಿಂದೂ ಸಂಘಟನೆಯ ಯುವಕನೊಬ್ಬನನ್ನು ವಶಕ್ಕೆ ಪಡೆದಿರುವ ಬಗ್ಗೆ ಮಾಹಿತಿ ಇದೆ.ಹಿಂದೂ ಜಾಗರಣ ವೇದಿಕೆಯ ಪುತ್ತೂರಿನ ಯುವಕನೊಬ್ಬ ತಲವಾರು ಬೀಸಿದವನೆಂದು ಹೇಳಲಾಗಿದೆ. ಪುತ್ತಿಲ ಪರಿವಾರದ ಮುಖಂಡ ಮನೀಶ್ ಕುಲಾಲ್ ಮೇಲೆ ದಾಳಿ ಯತ್ನ ನಡೆದಿತ್ತು.ಸಾಮಾಜಿಕ ಜಾಲತಾಣದಲ್ಲಿ ಆಗಿರುವ ಚರ್ಚೆಯ ವಿಚಾರವಾಗಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel