#Ayurveda | ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಣಾಮಕಾರಿ ನಸ್ಯಕರ್ಮ ಚಿಕಿತ್ಸೆ : ದೇಹದ ಶ್ವಾಸೆಂದ್ರೀಯ ಮಾರ್ಗವನ್ನು ಸ್ವಚ್ಛಗೊಳಿಸಲು ಇದು ಉತ್ತಮ

October 9, 2023
2:52 PM
ನಸ್ಯ ಎಂದರೆ ಮೂಗಿನ ದ್ವಾರದ ಮೂಲಕ ಔಷಧೀಯ ತೈಲ, ತುಪ್ಪ, ಪುಡಿ, ಕಚ್ಚಾ ಗಿಡ ಮೂಲಿಕೆಗಳ ರಸಗಳು, ಹಾಲು ಇತ್ಯಾದಿಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ವೈದ್ಯರ ಸಮ್ಮುಖದಲ್ಲಿ ಬಳಸಿ ಚಿಕಿತ್ಸೆ ನೀಡುವಂತದ್ದು. ಮೂಗಿನ ಮೂಲಕ ಮೆದುಳು ಹಾಗೂ ಶರೀರಕ್ಕೆ ತಲುಪಿ ಈ ಚಿಕಿತ್ಸೆ ಪರಿಣಾಮಕಾರಿ ಆಗುವುದು.

ಸ್ಯಕರ್ಮ ಚಿಕಿತ್ಸೆ.. ಅನೇಕ ಆರೋಗ್ಯ ಸಮಸ್ಯೆಗಳಿಗೆ ಆಯುರ್ವೇದ ಚಿಕಿತ್ಸೆ ಪರಿಣಾಮಕಾರಿಯಾಗಿರುತ್ತದೆ ಅಂತಹ ಚಿಕಿತ್ಸೆಯಲ್ಲಿ ನಸ್ಯ ಕರ್ಮ ಚಿಕಿತ್ಸೆ ಕೂಡ ಒಂದಾಗಿದೆ ನಸ್ಯಕರ್ಮ ಚಿಕಿತ್ಸೆ ಎನ್ನುವುದು ಪಂಚಕರ್ಮ ಚಿಕಿತ್ಸೆಯ ಒಂದು ಭಾಗವಾಗಿದೆ. ಇದು ದೇಹದಲ್ಲಿನ ಅತಿಯಾದ ಕಫವನ್ನು ಹೊರ ಹಾಕುವ ಮೂಲಕ ದೇಹದ ಶ್ವಾಸೆಂದ್ರೀಯ ಮಾರ್ಗವನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ.

Advertisement

ನಸ್ಯ ಎಂದರೆ ಮೂಗಿನ ದ್ವಾರದ ಮೂಲಕ ಔಷಧೀಯ ತೈಲ, ತುಪ್ಪ, ಪುಡಿ, ಕಚ್ಚಾ ಗಿಡ ಮೂಲಿಕೆಗಳ ರಸಗಳು, ಹಾಲು ಇತ್ಯಾದಿಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ವೈದ್ಯರ ಸಮ್ಮುಖದಲ್ಲಿ ಬಳಸಿ ಚಿಕಿತ್ಸೆ ನೀಡುವಂತದ್ದು. ಮೂಗಿನ ಮೂಲಕ ಮೆದುಳು ಹಾಗೂ ಶರೀರಕ್ಕೆ ತಲುಪಿ ಈ ಚಿಕಿತ್ಸೆ ಪರಿಣಾಮಕಾರಿ ಆಗುವುದು.  (ನಾಸೋ ಹಿ: ಶಿರಸೋದ್ವಾರಂ )
ಸಾಮಾನ್ಯವಾಗಿ ಸೈನಸೈಟಿಸ್ ಇರುವವರಿಗೆ ಈ ಉಸಿರಾಟದ ಸಮಸ್ಯೆ ಕಾಡುತ್ತದೆ. ಇದರಿಂದ ಮೂಗು ಕಟ್ಟಿಕೊಳ್ಳುವುದು, ತಲೆನೋವು,ವಾಸನೆ ಮತ್ತು ರುಚಿಯ ಅನುಭವ ಕಡಿಮೆ ಆಗುವುದು, ಗಂಟಲು ಕೆರೆತ, ಶೀತ ಮೊದಲಾದ ವಿವಿಧ ರೀತಿಯ ಸಮಸ್ಯೆಗಳು ಉಂಟಾಗುವುದು. ಮೂಗಿನ ಮೂಲಕ ಔಷದವನ್ನು ಹಾಕಿದಾಗ ಲೋಳೆಪೊರೆಯ ಒಳಪದರವನ್ನು ನಿವಾರಿಸಿ ಉಸಿರಾಟಕ್ಕೆ ನಿರಾಳತೆಯನ್ನು ಉಂಟು ಮಾಡುವುದು. ಹೀಗಾಗಿ ಸೈನಸ್ ಸಮಸ್ಯೆಗಳಿಗೆ ನಸ್ಯಕರ್ಮ ಉತ್ತಮ ಚಿಕಿತ್ಸೆ. ಇದರಿಂದ ನಿದ್ರಾಹೀನತೆ ಸಮಸ್ಯೆ ಕೂಡ ನಿವಾರಣೆಯಾಗಿ ಚೆನ್ನಾಗಿ ನಿದ್ದೆ ಬರುತ್ತದೆ.

ಕೂದಲು ಉದುರುವಿಕೆಯನ್ನು ತಡೆಗಟ್ಟಲು ಸಹ ಈ ನಸ್ಯ ಚಿಕಿತ್ಸೆಯನ್ನು ಬಳಸಲಾಗುತ್ತದೆ. ಇದು ಚರ್ಮದ ಬಣ್ಣವನ್ನು ಸುಧಾರಿಸುತ್ತದೆ ಹಾಗೂ ಕೂದಲಿನ ರಚನೆಯನ್ನು ಸರಿಪಡಿಸುವುದು ಮಾತ್ರವಲ್ಲದೇ ಬಿಳಿಕೂದಲಿನ ಸಮಸ್ಯೆಯನ್ನು ತಡೆಗಟ್ಟುತ್ತದೆ. ನಸ್ಯಕರ್ಮ ಒಟ್ಟಾರೆಯಾಗಿ ಕುತ್ತಿಗೆ ಮತ್ತು ಮೇಲ್ಭಾಗದ ಅಂಗಗಳನ್ನು ಆರೋಗ್ಯವಾಗಿಡಲು ಸಹಾಯಕಾರಿ ಆಗುತ್ತದೆ ಹೀಗಾಗಿ ಕುತ್ತಿಗೆ ನೋವು ನಿವಾರಣೆಗೆ ನಸ್ಯ ಕರ್ಮ ಚಿಕಿತ್ಸೆ ಉತ್ತಮವಾಗಿದೆ ಸಾಮಾನ್ಯವಾಗಿ ಕುತ್ತಿಗೆ ನೋವು ಬಿಗಿತಕ್ಕೆ ಕಾರಣ ಇಂಟರ್ ವರ್ಟಿಬ್ರಲ್ ಡಿಸ್ಕ್ ಗಳ ನಿರ್ಜಲೀಕರಣ. ನಸ್ಯ ಚಿಕಿತ್ಸೆಯ ಮೂಲಕ ಡ್ರೈ ಆಗಿರುವ ಕುತ್ತಿಗೆ ಭಾಗಕ್ಕೆ ಆರಾಮದಾಯಕ ಅನುಭವ ಸಿಗುತ್ತದೆ ಈ ಮೂಲಕ ಕುತ್ತಿಗೆ ನೋವು ನಿವಾರಿಸಬಹುದು.

ನಸ್ಯ ಚಿಕಿತ್ಸೆ ತೆಗೆದು ಕೊಳ್ಳುವಾಗ ಪಥ್ಯವನ್ನು ಅನುಸರಿಸ ಬೇಕು ಹಾಗೂ ಸಾಮಾನ್ಯವಾಗಿ 7 ದಿನ ಈ ಚಿಕಿತ್ಸೆಯನ್ನು ವೈದ್ಯರ ಸಮ್ಮುಖದಲ್ಲಿ ಮಾಡಲಾಗುತ್ತದೆ. ಇದನ್ನು ಸರಿಯಾದ ಕ್ರಮದಲ್ಲಿ ನೀಡದೆ ಹೋದಲ್ಲಿ ಅಡ್ಡಪರಿಣಾಮ ಉಂಟಾಗುವುದು. ಆದ ಕಾರಣ ರೋಗಕ್ಕನುಸರವಾಗಿ ಯಾವ ರೀತಿಯ ನಸ್ಯ ಕರ್ಮ ಚಿಕಿತ್ಸೆ ಉತ್ತಮ ಎಂದು ಆಯ್ದು ಸರಿಯಾದ ಕ್ರಮದಲ್ಲಿ ನುರಿತ ವೈದ್ಯರೊಂದಿಗೆ ಸಮಾಲೋಚನೆ ಮಾಡಿ ತೆಗೆದುಕೊಳ್ಳುವುದು ಉತ್ತಮ.

ಬರಹ :
Dr Jyothi k, Laxmi Clinic Mangalore 94481 68053

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ದರ್ಶಿತ್‌ ಕೆ ಎಸ್
July 7, 2025
11:04 PM
by: ದ ರೂರಲ್ ಮಿರರ್.ಕಾಂ
ಕೋವಿಡ್ ಲಸಿಕೆಯಿಂದ ಹೃದಯಾಘಾತ ಸಂಭವಿಸುತ್ತಿಲ್ಲ | ಸಚಿವ ದಿನೇಶ್ ಗುಂಡೂರಾವ್
July 7, 2025
9:25 PM
by: ದ ರೂರಲ್ ಮಿರರ್.ಕಾಂ
ಮೆಕ್ಕೆಜೋಳ ಸಮಾವೇಶ | ಕನಿಷ್ಠ ಬೆಂಬಲ ಬೆಲೆ ಮೂಲಕ ರೈತರ ಹಿತರಕ್ಷಣೆ
July 7, 2025
9:17 PM
by: The Rural Mirror ಸುದ್ದಿಜಾಲ
ಘಾಟಿ ಸುಬ್ರಹ್ಮಣ್ಯ ದೇವಸ್ಥಾನ ಪ್ರದೇಶ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟ ನಿಷೇಧ
July 7, 2025
8:58 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group