ಚುನಾವಣೆ ಎಂಬುದು ಯುದ್ಧವಲ್ಲ | ಬಾಹ್ಯ ಶಕ್ತಿಗಳ ನಡುವಿನ ಹೋರಾಟವಲ್ಲ | ಅದು ನಮ್ಮದೇ ಜನಗಳ ನಡುವಿನ ಒಂದು ಸಾಮಾನ್ಯ ಸ್ಪರ್ಧೆ |

March 26, 2024
11:06 AM
ಚುನಾವಣೆ ಎಂಬುದು ಯುದ್ಧವಲ್ಲ, ವಿರೋಧವೂ ಅಲ್ಲ. ಪ್ರಜಾತಂತ್ರ ವ್ಯವಸ್ಥೆಯ ಹಬ್ಬ ಅದು. ಅದನ್ನು ಹೇಗೆ ಆಚರಿಸಬೇಕು ಎಂಬುದರ ಬಗ್ಗೆ ವಿವೇಕಾನಂದ ಆಚಾರ್ಯ ಅವರು ಬರೆದಿದ್ದಾರೆ..

ನಮ್ಮ ಭಾರತ(India) ವಿಶ್ವದ ಅತ್ಯಂತ ದೊಡ್ಡ, ಹಾಗೂ ಬಲಿಷ್ಠವಾದ, ಪ್ರಜಾಪ್ರಭುತ್ವವುಳ್ಳ ರಾಷ್ಟ್ರ(Democratic county). ನಮ್ಮ ರಾಷ್ಟ್ರದ ಸಂವಿಧಾನ(Constitution), ಬದ್ಧವಾಗಿ ಚುನಾವಣೆ(Election) ಘೋಷಣೆಯಾಗಿದೆ. ಮುಂದಿನ ಕೆಲವು ದಿನಗಳ ಪರ್ಯಂತ ನಡೆಯುವ ಈ ಕಾರ್ಯಕ್ರಮ.  ಈ ಚುನಾವಣೆಯಲ್ಲಿ ಸರಿಸುಮಾರು 56 ರಾಜಕೀಯ ಪಕ್ಷಗಳು(Political parties) ಹಾಗೂ ಈ ಚುನಾವಣೆಯಲ್ಲಿ, ಸರಿಸುಮಾರು 98 ಕೋಟಿ ಜನ ಮತದಾರರು(Voters) ತಮ್ಮ ಮತದಾನದ, ಹಕ್ಕನ್ನು ಚಲಾಯಿಸುತ್ತಾರೆ.

Advertisement
Advertisement
Advertisement

ಚುನಾವಣೆ ಎಂಬುದು ಶತ್ರುವಿನ ಜೊತೆ ಮಾಡುವ ಯುದ್ಧವಲ್ಲ, ಬಾಹ್ಯ ಶಕ್ತಿಗಳ ನಡುವಿನ ಹೋರಾಟವಲ್ಲ. ಅದು ನಮ್ಮದೇ ಜನಗಳ ನಡುವಿನ ಒಂದು ಸಾಮಾನ್ಯ ಸ್ಪರ್ಧೆ. ಯಾರೋ ಒಬ್ಬರು ಗೆಲ್ಲುತ್ತಾರೆ ಮತ್ತೊಬ್ಬರು ಸೋಲುತ್ತಾರೆ. ಅದರಿಂದ ಅಂತಹ ದೊಡ್ಡ ವ್ಯತ್ಯಾಸವೇನು ಆಗುವುದಿಲ್ಲ, ಈ ಚುನಾವಣೆ ಎಂಬುದು ಒಂದು, ಸ್ಪರ್ಧೆ. ಅನಾವಶ್ಯಕವಾಗಿ ನಾವುಗಳು ಏಕೆ ಮನಸ್ತಾಪ ಮಾಡಿಕೊಳ್ಳಬೇಕು.  ನಾವುಗಳು ಏಕೆ ಶತ್ರುಗಳಾಗಬೇಕು. ನಾವುಗಳು ಏಕೆ ಒಬ್ಬರಿಗೊಬ್ಬರು ನಿಂದಿಸಿಕೊಳ್ಳಬೇಕು, ಸಮಯ ಚಿತ್ತವನ್ನು ಹಾಗೂ ಸೌಮ್ಯವನ್ನು, ಕಾಪಾಡಿಕೊಳ್ಳುವ ಮೂಲಕ ಆರೋಗ್ಯಕರ ಅಭಿಪ್ರಾಯಗಳನ್ನು, ಮುಕ್ತವಾಗಿ ಹಂಚಿಕೊಳ್ಳುತ್ತಾ ಸಂಬಂಧಗಳನ್ನು ಸಹಜವಾಗಿಯೇ, ಕಾಪಾಡಿಕೊಳ್ಳಬಹುದಲ್ಲವೇ, ನಮ್ಮ  ಗೆಳೆತನದ ಘನತೆಯನ್ನು ಕಾಪಾಡಿಕೊಳ್ಳೋಣ.

Advertisement

ಈ ಸಂದರ್ಭದಲ್ಲಿ ನಮ್ಮ ಜವಾಬ್ದಾರಿ ಮುಖ್ಯವಾಗಿ ಸೋಷಿಯಲ್ ಮೀಡಿಯಗಳಲ್ಲಿ ಬರುವ ಹಲವಾರು ವಿಷಯಗಳು ಅದನ್ನು ಸಹಜವಾಗಿ ಸ್ವೀಕರಿಸೋಣ.

  1. ಮೊದಲಿಗೆ ಈ ಟಿವಿ ಮಾಧ್ಯಮಗಳು ಸ್ವಂತ ಉದ್ದೇಶಕ್ಕಾಗಿ ಪ್ರೇರಿತ ವಿವೇಚನಾ ರಹಿತ ಪ್ರಚೋದಾತ್ಮಕ, ಹೇಳಿಕೆಗಳನ್ನು ನಿರ್ಲಕ್ಷಿಸೋಣ – ಕುರುಕ್ಷೇತ್ರ – ಅಖಾಡ – ಯುದ್ಧ- ಮಹಾಭಾರತ- ಅರ್ಜುನ- ಕರ್ಣ- ರಾಜಕೀಯ ಭೀಷ್ಮ – ಚುನಾವಣಾ ಚಾಣಕ್ಯ, ಮುಂತಾದ ಕೆರಳಿಸುವ ಕಾರ್ಯಕ್ರಮಗಳನ್ನು ಹಾಸ್ಯಾಸ್ಪದವಾಗಿ ನೋಡೋಣ.
  2. ಹೌದು, ಇದು ಪ್ರಜಾಪ್ರಭುತ್ವ ಮತ್ತು ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯವಿರುವ ದೇಶ ನಿಜ. ಹಾಗಂತ ಹುಚ್ಚುಚ್ಚಾಗಿ ಅವಶ್ಯಕತೆ, ಇಲ್ಲದಿದ್ದರೂ ಚರ್ಚೆಯ ನೆಪದಲ್ಲಿ, ಕೆಟ್ಟದಾಗಿ ಪ್ರತಿಕ್ರಿಯಿಸುವುದು ಬೇಡ.
  3. ನಾವೆಲ್ಲರೂ ಸ್ನೇಹಿತರು. ಯಾವುದೋ ಒಂದು ಪಕ್ಷದ ಬಗ್ಗೆ ಒಲವಿರಬಹುದು.ಅದರ ಅರ್ಥ ನಾವು ಅದನ್ನು ದೊಡ್ಡಗಂಟಲಿನಲ್ಲಿ ಕೂಗಾಡಿ ಈಗಿರುವ ನಮ್ಮ ಪ್ರೀತಿ, ವಿಶ್ವಾಸಕ್ಕೆ ಧಕ್ಕೆ ಮಾಡಿಕೊಳ್ಳುವುದು ಬೇಡ.
  4.  ಈ ಪಕ್ಷ ಬಂದರೆ ಹಾಗೆ, ಆ ಪಕ್ಷ ಬಂದರೆ ಹೀಗೆ ಎಂದು ನಮ್ಮೊಳಗೆ ಕಚ್ಚಾಡುವುದು ಬೇಡ. ಅಂತಹ ಕ್ರಾಂತಿಕಾರಿ ಬದಲಾವಣೆ ಈ ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಸಾಧ್ಯವಿಲ್ಲ.
  5. ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿ. ತುಂಬಾ ಸಂತೋಷ. ಆದರೆ ಸಭ್ಯತೆಯ ಗೆರೆ ದಾಟದೆ, ನಾವೇ ಸರಿ ಎಂದು ಹಠಮಾಡದೆ, ದುರಹಂಕಾರ ಪ್ರದರ್ಶಿಸದೆ ನಮ್ಮ ಅಭಿಪ್ರಾಯ ಒಪ್ಪಲೇ ಬೇಕು ಎಂದು ಒತ್ತಡ ಹೇರದೆ ನಗುನಗುತ್ತಾ ಪ್ರತಿಕ್ರಿಯಿಸಿ.
  6. ಸೋಷಿಯಲ್‌ ಮೀಡಿಯಾಗಳಲ್ಲಿ,ಎಷ್ಟೋ ಸಾಮಾಜಿಕ, ಕೌಟುಂಬಿಕ ಹಳೆಯ ಸ್ನೇಹಿತರು ನಮ್ಮ ದೂರದ ಸಂಬಂಧಿಕರು, ನಮ್ಮ ಧರ್ಮದವರು, ನಮ್ಮ ಊರಿನವರು ಹೀಗೆ ನಾನಾ ಗುಂಪುಗಳಿವೆ. ಈ ಚುನಾವಣಾ ಸಮಯದಲ್ಲಿ ಕೇವಲ ಯಾರೋ ಸ್ವಾರ್ಥಿಗಳ ರಾಜಕೀಯ ದಾಳಗಳಾಗುವುದು ಬೇಡ.
  7. ಟಿವಿಗಳಲ್ಲಿ ಅಜನ್ಮ ಶತ್ರುಗಳಂತೆ ಜಗಳವಾಡುವ ಈ ರಾಜಕೀಯ ನಾಯಕರು ಕಾರ್ಯಕ್ರಮ ಮುಗಿದ ನಂತರ ನಿರೂಪಕನನ್ನೂ ಕರೆದುಕೊಂಡು ರಾತ್ರಿ ಊಟಕ್ಕೆ ಹೋಟೆಲ್ಗೆ{ ತುಂಡು ಗುಂಡು } ಹೋಗುವುದು ಬಹಳಷ್ಟು ಇದೆ.
  8. ಸೀರೆ, ಪಂಚೆ, ಮಿಕ್ಸಿ, ಕುಕ್ಕರ್, ದುಡ್ಡು, ಬಾಡು ಬಾರುಗಳಿಗಿರುವ ಓಟಿನ ಶಕ್ತಿ, ಸುಳ್ಳು ಮತ್ತು ಆಕರ್ಷಕ ಮಾತುಗಳಿಗಿರುವ ಓಟು ಸೆಳೆಯುವ‌ ಆಕರ್ಷಣೆ ಖಂಡಿತ ನಮ್ಮಅಭಿಪ್ರಾಯಗಳಿಗೆ ಇಲ್ಲ. ಆದ್ದರಿಂದ ದಯವಿಟ್ಟು ನಾವು ಚುನಾವಣಾ ಕಾರಣದಿಂದ ನಾವುಗಳು ಮನಸ್ತಾಪ ಮಾಡಿಕೊಳ್ಳುವುದು ಬೇಡ. ನಾವೆಲ್ಲರೂ ಸಾಮಾನ್ಯರು. ದ್ವೇಷಕ್ಕಿಂತ ಪ್ರೀತಿವಿಶ್ವಾಸವೇ ಮುಖ್ಯ ನೆನಪಿರಲಿ.

ಚುನಾವಣೆ ಒಂದು ಗುಪ್ತ ಮತದಾನ. ಒಂದಷ್ಟುಯೋಚಿಸಿ ಅದರಲ್ಲಿ ಭಾಗವಹಿಸಿ. ಯಾರೋ ಅನಾಗರಿಕರಂತೆ , ಜೈಕಾರ ಹಾಕುವುದು ಪುಡಾರಿಗಳಂತೆ ವರ್ತಿಸುವುದು ಬೇಡ, ಹಾಗೂ ನಮ್ಮ ಓಟಿನ ಮಹತ್ವವನ್ನು ಅರಿತು ಸಾಧ್ಯವಾದಮಟ್ಟಿಗೆ ಒಳ್ಳೆಯ ಅಭ್ಯರ್ಥಿಗಳನ್ನೇ, ಆರಿಸಲು ಮತ ಚಲಾಯಿಸೋಣ. ನಮ್ಮ ಮುಂದಿನ ಪೀಳಿಗೆಗೆ ಸದೃಢ ರಾಷ್ಟ್ರದ ಕನಸು ಕಟ್ಟೋಣ. ಹಾಗೂ ಎಂದಿನಂತೆ ಗೆಳೆತನದ ಘನತೆಯನ್ನುಕಾಪಾಡೋಣ.

Advertisement
ಬರಹ :
ವಿವೇಕಾನಂದ ಆಚಾರ್ಯ
ArmyRtd 🇮🇳

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 19.01.2025 | ಇಂದು ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಕೃಷಿಕರೇ ಇರಲಿ ಎಚ್ಚರ |
January 19, 2025
11:01 AM
by: ಸಾಯಿಶೇಖರ್ ಕರಿಕಳ
ಸರ್ಕಾರದ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳುವಂತೆ ಸಚಿವ ಈಶ್ವರ್ ಖಂಡ್ರೆ ಕರೆ
January 19, 2025
7:22 AM
by: The Rural Mirror ಸುದ್ದಿಜಾಲ
ಅಡಿಕೆ ಬೆಳೆಗಾರರಿಗೆ ಆತಂಕ ಬೇಡ | ಅಡಿಕೆ ಬೆಳೆಗಾರರ ಸಮಸ್ಯೆ ಬಗಹೆರಿಸಲು ಸಿದ್ದ | ಕೇಂದ್ರ ಸಚಿವ ಶಿವರಾಜ್ ಸಿಂಗ್  ಚಾವ್ಙಾಣ್ ಭರವಸೆ |
January 19, 2025
7:03 AM
by: The Rural Mirror ಸುದ್ದಿಜಾಲ
ಕ್ಯಾಂಪ್ಕೋ ತಯಾರಿಕೆಯ ಕೊಬ್ಬರಿ ಎಣ್ಣೆ “ಕಲ್ಪ” 5 ಲೀಟರ್ ಕ್ಯಾನ್ ಬಿಡುಗಡೆ
January 16, 2025
3:11 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror