ಮಹಾರಾಷ್ಟ್ರದಲ್ಲಿ ಈಗಾಗಲೇ ಪ್ರಸಿದ್ಧಿಯಾಗಿರುವ ಅಗ್ರಿ ಟೂರಿಸಂ (Agri Tourism) ಅನ್ನು ಕರ್ನಾಟಕದಲ್ಲಿಯೂ ಬೆಳೆಸುವ ಇಚ್ಛೆ ಇದೆ. ಕೃಷಿ ಪ್ರವಾಸೋದ್ಯಮ, (ಹಳ್ಳಿ ಪ್ರವಾಸ, ಆಶ್ರಮ) ಕೃಷಿ ಆಶ್ರಮದ ಮೊಗದೊಂದು ಕಾರ್ಯಕ್ರಮ, ಅಕ್ಟೋಬರ್ 1 (ಭಾನುವಾರ) ಹಾಗೂ 2 (ಸೋಮವಾರ) ರಂದು ಸಾಗರದ ಬಳಿ ಆಯೋಜಿಸಲಾಗಿದೆ.
ಸಾವಯವ ಕೃಷಿಕರಿಗಾಗಿ ಮತ್ತು ಸಾವಯವ ಕೃಷಿಯ ಆಸಕ್ತರಿಗಾಗಿ ಕಾರ್ಯಕ್ರಮ ನಡೆಯುವ ಸ್ಥಳಗಳು: 01.10.2023: ಸಾರ ಸಂಸ್ಥೆ. ಬಟ್ಟೆಮಲ್ಲಪ್ಪ. ಹೊಸನಗರ ತಾ. ಶಿವಮೊಗ್ಗ ಜಿಲ್ಲೆ.
02.10.2023 ರಂದು ಸಾಗರ ಬಳಿಯ ಪ್ರಕಾಶ ಮಂಚಾಲೆ ಅವರ ಔಷಧೀಯ ಸಸ್ಯಗಳ ತೋಟದಲ್ಲಿ ಗೆಳೆಯರೇ “ಕೃಷಿ ಆಶ್ರಮ” ಎಂದರೆ ಅಗ್ರಿ ಟೂರಿಸಂ. ಈ ಯೋಜನೆಯ ಉದ್ದೇಶ ಜನರು ಮತ್ತೆ ಪಟ್ಟಣಗಳಿಂದ ಹಳ್ಳಿಗಳತ್ತ ಮುಖ ಮಾಡಬೇಕು ಹಳ್ಳಿಗಳು ಉಳಿಯಬೇಕು, ಹಳ್ಳಿಗಳ ಆರ್ಥಿಕತೆ ಸದೃಢವಾಗಬೇಕು. ಕೃಷಿಕ ಮತ್ತು ಕೃಷಿ ಮತ್ತೆ ಚಿಗುರಬೇಕು. ಭಾರತ ಮತ್ತೆ ಕೃಷಿ ಪ್ರಧಾನ ದೇಶವಾಗಬೇಕು. ಇಲ್ಲಿನ ಜನರು ಹೆಚ್ಚು ಆರೋಗ್ಯವಂತರು, ಸಂಸ್ಕೃತಿವಂತರಾಗಬೇಕು. ಈ ಉದ್ದೇಶದಿಂದ ಈ ಎರಡು ದಿನಗಳ “ಕೃಷಿ ಆಶ್ರಮ ತರಬೇತಿ ಶಿಬಿರ” ಆಯೋಜಿಸಲಾಗಿದೆ.
ಕಾರ್ಯಕ್ರಮದ ವಿವರ:
ಕೃಷಿ ಆಶ್ರಮಕ್ಕೆ ಭವಿಷ್ಯವಿದೆಯೇ? ಅಲ್ಲಿ ಇರಬೇಕಾದ ವಸ್ತುಗಳೇನು? ಇರಬಾರದ ವಸ್ತುಗಳಾವುವು? ಕೃಷಿ ಆಶ್ರಮ ಎಂದರೇನು? ಕೃಷಿ ಆಶ್ರಮ ಪರಿಕಲ್ಪನೆ, ಉದ್ದೇಶ ಮತ್ತು ಅಗತ್ಯಗಳೇನು? ಅದರ ಸ್ಥಾಪನೆಗೆ ಸಿದ್ಧತೆ ಹೇಗೆ? ಆಶ್ರಮ ತೆರೆಯಲು ಎಷ್ಟು ವೆಚ್ಚ ಬಂದೀತು ? ಅಲ್ಲಿ ಯಾವ ಯಾವ ಚಟುವಟಿಕೆಗಳು ನಡೆಯಬೇಕು? ನಿಬಂಧನೆಗಳು ಯಾವುವು? ಕೃಷಿ ಆಶ್ರಮದ ಲಾಭಗಳೇನು?
“ಹಳ್ಳಿಯ ಸಂಪನ್ಮೂಲಗಳಿಂದ ಮೌಲ್ಯವರ್ಧನೆಯ ಸಾಧ್ಯತೆಗಳು”, ” ಕೃಷಿ ಆಶ್ರಮದಲ್ಲಿ ಆರೋಗ್ಯಕರ ದಿನಚರಿ ಹೇಗೆ ಇರಬೇಕು ಮತ್ತು ಯಾಕೆ?” , ಸಣ್ಣ ರೈತರು ಕೃಷಿಯಲ್ಲಿ ಹೇಗೆ ಬದುಕನ್ನು ಕಟ್ಟಿಕೊಳ್ಳಬಹುದು? , ಸಣ್ಣ ಜಾಗದಲ್ಲಿ ವಾರ್ಷಿಕ ದ್ವಿವಾರ್ಷಿಕ, ತ್ರಿವಾರ್ಷಿಕ & ಬಹುವಾರ್ಷಿಕ ಬೆಳೆಗಳನ್ನು ಜೋಡಿಸುವ ಕ್ರಮವನ್ನು ವೀಕ್ಷಿಸುವುದು , ಶತಮೂಲಿಕ ವನ ನಿರ್ಮಾಣದ ಬಗ್ಗೆ ತಿಳಿಯುವುದು , ಕಾಡು ಮಾದರಿಯ ತೋಟದ ನಿರ್ಮಾಣದ ಬಗ್ಗೆ ವಿವರವಾದ ನೋಟ , ನೀರಿಲ್ಲದೆ, ಸ್ವಲ್ಪ ನೀರಿದ್ದಾಗ ಮತ್ತು ನೀರು ಅವಲಂಬಿತ ಕೃಷಿ ಹೇಗೆ ಮಾಡುವುದು ಎಂದು ತಿಳಿಯಲು , ದೀರ್ಘಾವಧಿ ಬೆಳೆಗಳ ಮಧ್ಯದಲ್ಲಿ ಆಯುರ್ವೇದ ಅಥವಾ ಔಷಧೀಯ ಸಸ್ಯಗಳ ಸಂಯೋಜನೆ , ಔಷಧೀಯ ಸಸ್ಯಗಳ ಬಳಕೆ ಮತ್ತು ಉತ್ಪನ್ನಗಳ ತಯಾರಿಕೆ , ಮಣ್ಣು ಹವಾಮಾನ ತಾಪಮಾನದ ಅನುಗುಣವಾಗಿ ಕೃಷಿ ವಿಧಾನಗಳು ಇತ್ಯಾದಿ ಸಂಗತಿಗಳ ಬಗ್ಗೆ ಮಾತುಕತೆ ನಡೆಯಲಿದೆ.
ಆಸಕ್ತರು ಮತ್ತು ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ಫೋನ್ ನಂಬರ್ ಗೆ ಸಂಪರ್ಕಿಸಿ ನೊಂದಣಿ ಮಾಡಿಸಿಕೊಳ್ಳಿ . ಕೇವಲ 50 ಮಂದಿಗೆ ಮಾತ್ರ ಅವಕಾಶ (ಇಷ್ಟು ಮಂದಿಗೆ ರಾತ್ರಿ ತಂಗಲು ವ್ಯವಸ್ಥೆ ಇದೆ). ಮೊದಲು ಪ್ರತಿಕ್ರಿಯೆ ನೀಡಿದವರಿಗೆ ಆದ್ಯತೆ. ನೊಂದಾಯಿತರಿಗೆ ಮಾತ್ರ ಅವಕಾಶ ಶುಲ್ಕ: 900/- 2 ದಿನಗಳಿಗೆ ವಸತಿ ಸಹಿತ 7259588743 ಫೋನ್ ಪೇ / ಗೂಗಲ್ ಪೇ ಸಂಪರ್ಕಿಸಿ: 7259588743 9916030272 .
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…
ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಗೆ ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ…
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಸಂಕ್ರಾಂತಿ ಸಂಭ್ರಮ ವಿಶೇಷ ಕಾರ್ಯಕ್ರಮ…
ನಾಗರಿಕತೆ ಬೆಳವಣಿಗೆ, ಅಭಿವೃದ್ಧಿ ಅಂದರೆ ವ್ಯಕ್ತಿತ್ವಗಳೂ ಬೆಳೆಯಬೇಕು. ಅಭಿವೃದ್ಧಿಯ ಸೂಚ್ಯಂಕವೇ ವ್ಯಕ್ತಿತ್ವದ ಬೆಳವಣಿಗೆ…