ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕು ಹೊಸಳ್ಳಿ ಗ್ರಾಮದ ಕಾವೇರಿ ಮಂಜುನಾಥ ಅವರು ನಡೆಸಿ ಕೋಳಿ ಸಾಕಾಣಿಕೆಯಲ್ಲಿ ಯಶಸ್ವಿಯಾಗಿ ಸ್ವಾವಲಂಬನೆ ಹಾಗೂ ಸ್ಥಿರ ಆದಾಯವು ಇತರ ಕೃಷಿಕರಿಗೂ ಮಾದರಿಯಾಗಿದೆ. ಈಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಕೃಷಿ ಇಲಾಖೆ ಮಂಗಳೂರು ತಾಲೂಕಿನ ಆತ್ಮ ಯೋಜನೆಯಡಿ ಆಯೋಜನೆ ಮಾಡಲಾದ ಯಶಸ್ವಿ ಕೃಷಿ ಉದ್ಯಮದ ಅಧ್ಯಯನ ಪ್ರವಾಸದ ವೇಳೆ ಈ ಮಾದರಿ ಕೃಷಿ ಕ್ಷೇತ್ರವನ್ನು ಭೇಟಿ ಮಾಡಿದರು.
ಮಂಜುನಾಥ ಅವರು ದುರ್ಗಾದೇವಿ ಸಂಜೀವಿನಿ ಮಹಿಳಾ ಸ್ವ ಸಹಾಯ ಸಂಘದ ಪ್ರೋತ್ಸಾಹ, MBK ಮೇಘನಾ, ಹಾಗೂ NRLM ತಂಡದ ಸತತ ಮಾರ್ಗದರ್ಶನ ಹಾಗೂ ತಾಲೂಕು ಪಶುವೈದ್ಯಾಧಿಕಾರಿ ಪ್ರಕಾಶ್ ಅವರ ತಾಂತ್ರಿಕ ಸಲಹೆಗಳೊಂದಿಗೆ BV-300 ಲೆಯರ್ ಕೋಳಿ ಸಾಕಾಣಿಕೆ ಯೋಜನೆ ಯಶಸ್ವಿಯಾಗಿ ಅಳವಡಿಸಿದ್ದರು.
ಕಾವೇರಿ ಮಂಜುನಾಥ ಅವರು 500 BV-300 ಜಾತಿಯ 21 ವಾರದ ಕೋಳಿ ಮರಿಗಳನ್ನು ಪ್ರತಿ ಕೋಳಿಗೂ ₹350 ದರದಲ್ಲಿ ತರಿಸಿಕೊಂಡರು. BV-300 ಜಾತಿ ಕಡಿಮೆ ವೆಚ್ಚದಲ್ಲಿ ಹೆಚ್ಚು ಮೊಟ್ಟೆ ಉತ್ಪಾದನೆಯ ಸಾಮರ್ಥ್ಯ ಹೊಂದಿದ್ದು, ಗ್ರಾಮೀಣ ಮಹಿಳೆಯರ ಆದಾಯ ವೃದ್ಧಿಗೆ ಉತ್ತಮ ಆಯ್ಕೆಯಾಗುವ ಮೂಲಕ ಹೆಸರು ಮಾಡಿದೆ.

ಯೋಜನೆ ಪ್ರಾರಂಭದ ಸಮಯದಲ್ಲಿ 8 ಕೋಳಿಗಳು ಸತ್ತುಹೋಗಿದ್ದರೂ, ಬಿಸಿಲಿನ ತಾಪಮಾನದಿಂದ 4 ಹಾಗೂ ನೆಟ್‌ಗೆ ಕುತ್ತಿಗೆ ಸಿಕ್ಕಿ 4 ಕೋಳಿ ಸತ್ತಿದ್ದವು. ಉಳಿದ ಕೋಳಿಗಳ ಆರೋಗ್ಯ ಉತ್ತಮವಾಗಿ ಸ್ಥಿರಗೊಂಡು ಉತ್ತಮ ಉತ್ಪಾದನೆ ನೀಡುವ ಮಟ್ಟಕ್ಕೇರಿದೆ. ದಿನಕ್ಕೆ 60 ಕೆಜಿ ಆಹಾರ ವಿವಿಧ ಸಂಯೋಜನೆಯೊಂದಿಗೆ ನೀಡಲಾಗುತ್ತದೆ. ಪ್ರತಿ ಕೋಳಿಗೆ ದಿನಕ್ಕೆ 120 ಗ್ರಾಂ ಆಹಾರ ನೀಡಲಾಗುತ್ತಿದ್ದು, ವಾರಕ್ಕೊಮ್ಮೆ 250 ml ಟಾನಿಕ್ ಮಿಶ್ರಣ ಮಾಡುವುದರಿಂದ ಕೋಳಿಗಳ ಆರೋಗ್ಯ ಉತ್ತಮವಾಗಿದೆ ಎಂದು ಮಂಜುನಾಥ ಹೇಳುತ್ತಾರೆ. ಮೊಟ್ಟೆ ಉತ್ಪಾದನೆ ಹೆಚ್ಚಿಸಲು ದಿನಕ್ಕೆ 8 ಗಂಟೆಗಳ ಡಾರ್ಕ್ನೆಸ್ ಒದಗಿಸಲಾಗಿದೆ. ಮೊಟ್ಟೆ ಉತ್ಪಾದನೆಯಲ್ಲಿ ಕೂಡಾ ಗಣನೀಯ ಸಾಧನೆ ಮಾಡಿದ್ದಾರೆ.
BV-300 ಜಾತಿಯ ಪ್ರಮುಖ ವಿಶೇಷತೆಗಳೆಂದರೆ, 5 ದಿನ ಮೊಟ್ಟೆ ನೀಡುತ್ತದೆ. ಒಂದು ಜೀವನಚಕ್ರದಲ್ಲಿ 300 ಮೊಟ್ಟೆಗಳವರೆಗೆ ಉತ್ಪಾದನೆ ಮಾಡುತ್ತದೆ. ಮುಂಜಾನೆ 9 ಗಂಟೆಯೊಳಗೆ ಮೊಟ್ಟೆ ಇಡುವ ಸಹಜ ಸ್ವಭಾವ ಇಲ್ಲಿದೆ. ಈ ಯೋಜನೆಯಡಿ ಉತ್ಪಾದನೆಯಾಗುವ ಮೊಟ್ಟೆಗಳನ್ನು 7 ಶಾಲೆಗಳಿಗೆ ಪ್ರತಿ ಮೊಟ್ಟೆ ₹5.25 ದರದಲ್ಲಿ ಪೂರೈಕೆ ಮಾಡಲಾಗುತ್ತಿದೆ. ಇದು ಸಂಘಕ್ಕೆ ನಿಯಮಿತ, ಖಚಿತ ಮತ್ತು ನಿರಂತರ ಆದಾಯದ ಹರಿವನ್ನು ನೀಡುತ್ತಿದೆ.
ವಯಸ್ಸಾದ ಕೋಳಿಗಳನ್ನು ₹150–₹200 ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಶಾಲೆಗಳಿಗೆ ಮೊಟ್ಟೆ ಪೂರೈಕೆ, ಜೀವಂತ ಕೋಳಿ ಮಾರಾಟ ಮಾಡುವ ಮೂಲಕ ಆದಾಯ ಹೆಚ್ಚಿಸಿಕೊಳ್ಳಲಾಗುತ್ತಿದ್ದು, ಎಲ್ಲವೂ ಸ್ಥಳೀಯ ಬೇಡಿಕೆಯೇ ಪೂರೈಕೆ ಮಾಡಲಾಗುತ್ತಿದೆ. ಈ ಎಲ್ಲ ಮೂಲಗಳಿಂದಾಗಿ ಕಾವೇರಿ ಮಂಜುನಾಥ ಅವರ ಕುಟುಂಬಕ್ಕೆ ಸ್ಥಿರ ಆದಾಯ ದೊರೆತಿದೆ.
ಮುಧೋಳ ತುಂಗಭದ್ರಾ ಸಂಜೀವಿನಿ ಸ್ವ ಸಹಾಯ ಸಂಘ, ಲಕ್ಷ್ಮೀದೇವಿ ಛಲವಾದಿ, ಯಲಬುರ್ಗಾ ತಾಲೂಕು ಕೊಪ್ಪಳ ಜಿಲ್ಲೆಯಲ್ಲೂ ಕೂಡಾ ಕೋಳಿ ಸಾಕಾಣಿಕೆ ನಡೆದಿದೆ. 500 ಕೋಳಿಗಳನ್ನು ಸಾಕಲಾಗುತ್ತಿದೆ. ಅಲ್ಲಿ ನಾಟಿ ಕೋಳಿ 30, Bv 300 ಕೋಳಿ ಸಾಕಾಣಿಕೆ ಮಾಡಲಾಗಿದೆ.
ಒಟ್ಟಾಗಿ ಕೋಳಿ ಸಾಕಾಣಿಕ ಉದ್ಯಮವು ಒಂದು ಲಾಭದಾಯಕ ಉದ್ಯಮವಾಗಿದೆ ಎನ್ನುವುದು ಅಧ್ಯಯನ ಪ್ರವಾಸದ ಭೇಟಿಯಿಂದ ತಿಳಿದು ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ತಂಡದಲ್ಲಿ ವಿವಿಧ ಮಂದಿ ಆಸಕ್ತರು ಇದ್ದರು. ಪ್ರವಾಸಕ್ಕೆ ಕೃಷಿ ಇಲಾಖೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, NRLM ತಾಲೂಕು ಹಾಗೂ ಜಿಲ್ಲಾ ಪಂಚಾಯತ್, ದ ಕ ಜಿಲ್ಲಾ ಪಂಚಾಯತ್, NRLM ಸಂಜೀವಿನಿ ತಾಲೂಕು ಪಂಚಾಯತ್ , ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟಗಳು ಸಹಕಾರ ನೀಡಿದೆ.



