ಬಾಳೆ, ತೆಂಗು, ಬಿದಿರು, ಅನಾನಸ್ ಗಿಡದ ನಾರಿನ ಸೀರೆ | ಬಳಸಿ ಬೆಂಬಲಿಸಿ..! |

June 2, 2023
1:40 PM

ಕಳೆದ 15 ವರ್ಷಗಳಿಂದ ನೈಸರ್ಗಿಕ ನಾರಿನ ನೇಯ್ಗೆ ಉದ್ಯಮದಲ್ಲಿ  ಅನಕಪುತ್ತರ್ ನೇಕಾರರು ಕ್ರಾಂತಿಯನ್ನೇ ಉಂಟು ಮಾಡುತ್ತಿದ್ದಾರೆ.ತಮಿಳುನಾಡಿನಲ್ಲಿ ಬೆಳೆದಿರುವ ಈ ಉದ್ಯಮ ಇದೀಗ ನಶಿಸುತ್ತಿರುವ ಕೈಮಗ್ಗ ಉದ್ಯಮವಾಗಿದೆ. ಇದೀಗ ಈ ಉದ್ಯಮ ಉಳಿಸಲು ಸರ್ಕಾರಗಳು ಸಹಾಯ ಹಸ್ತ ನೀಡಬೇಕು, ಅದರ ಜೊತೆಗೇ ಗ್ರಾಹಕರು ಹೆಚ್ಚಿನ ಆಸಕ್ತಿ ವಹಿಸಬೇಕಿದೆ. ಈ ಉದ್ಯಮ ಬೆಳೆಯುವುದರಿಂದ ದೇಶೀಯತೆ ಹಾಗೂ ಕೃಷಿ ಕ್ಷೇತ್ರಕ್ಕೂ, ಗ್ರಾಮೀಣ ಅಭಿವೃದ್ಧಿಗೂ ನೆರವಾಗಲಿದೆ.

Advertisement
Advertisement

ಕಳೆದ 15 ವರ್ಷಗಳಿಂದ ನೈಸರ್ಗಿಕ ನಾರಿನ ನೇಯ್ಗೆ ಉದ್ಯಮದಲ್ಲಿ ತಮಿಳುನಾಡಿನ  ಅನಕಪುತ್ತರ್ ನೇಕಾರರು ಕ್ರಾಂತಿಯನ್ನೇ ಉಂಟು ಮಾಡುತ್ತಿದ್ದಾರೆ. 25 ರೀತಿಯ ನೈಸರ್ಗಿಕ ನಾರುಗಳಲ್ಲಿ ಅನೇಕ ರೀತಿಯ ಉಡುಪುಗಳನ್ನು ಇವರು ತಯಾರಿಸಿದ್ದಾರೆ. ಇವರು ಕೇವಲ ತಮಿಳುನಾಡಿನಲ್ಲಿ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ವ್ಯಾಪಾರವನ್ನು ವಿಸ್ತರಿಸಿದ್ದಾರೆ.

ವೆಟಿವರ್‌ನಿಂದ ತಯಾರಿಸಿದ ಸೀರೆಯ ಜನಪ್ರಿಯತೆಯು ಥೈಲ್ಯಾಂಡ್‌ಗೆ ಹರಡುತ್ತಿದ್ದಂತೆ, ನೇಕಾರರು ತಮ್ಮ ವ್ಯಾಪಾರ ಮತ್ತು ಜೀವನೋಪಾಯವನ್ನು ಸುಧಾರಿಸಲು ತಮಿಳುನಾಡು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಕಾರದ ಕೊರತೆಯಿಂದ ಇದನ್ನು ದೊಡ್ಡ ಮಟ್ಟದ ಉದ್ಯಮವನ್ನಾಗಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ನೇಕಾರರು ಬೇಸರ ವ್ಯಕ್ತಪಡಿಸಿದ್ದಾರೆ. ಅನಕಪುತ್ತರ್  ಮುನ್ಸಿಪಲ್ ಕಾರ್ಪೊರೇಷನ್ ಪ್ರದೇಶವು ಸಾಂಪ್ರದಾಯಿಕ ಕೈಮಗ್ಗ ನೇಯ್ಗೆಗೆ ಹೆಸರುವಾಸಿಯಾದ ಪಟ್ಟಣವಾಗಿದ್ದು, ನೂರಕ್ಕೂ ಹೆಚ್ಚು ನೇಕಾರ ಕುಟುಂಬಗಳನ್ನು ಹೊಂದಿದೆ. ಆದರೆ ಇತ್ತೀಚೆಗೆ ಕೈಮಗ್ಗ ಉದ್ಯಮ ನಶಿಸುತ್ತಿದ್ದು, 5000 ಮಗ್ಗಗಳಿದ್ದ ಕಡೆ ಈಗ ಕೆಲವೇ ಕೆಲವು ಮಗ್ಗಗಳಿವೆ ಎಂದು ನೇಕಾರರು ಬೇಸರವನ್ನು ತೋರ್ಪಡಿಸಿದ್ದಾರೆ.

ಇಲ್ಲಿನ ಕೈಮಗ್ಗದ ಸಂಘದ ಶೇಖರ್ ಕೇವಲ ಹತ್ತಕ್ಕಿಂತ ಕಡಿಮೆ ಜನರಿರುವ ಪುಟ್ಟ ಮನೆಯಲ್ಲಿ ಇಟ್ಟುಕೊಂಡು ಬಾಳೆ ನಾರಿನಿಂದ ಸೀರೆ ತಯಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಾಳೆ ನಾರಿನಿಂದ ಆರಂಭಿಸಿದ ಈ ಉದ್ಯಮವನ್ನು ಇಂದು ಇವರು ತೆಂಗಿನ ನಾರಿನ ಸೀರೆ, ಬಿದಿರು ನಾರಿನ ಸೀರೆ, ಅಕ್ಕಿ ಕಳ್ಳಿ ಸೀರೆ, ಅನಾನಸ್ ಗಿಡದ ಸೀರೆ, ಕೊಂಗೂರ ಸೀರೆ ನೇಯಲು ಆರಂಭಿಸಿದ್ದಾರೆ.  ಕಾಟನ್ ನೂಲಿನಿಂದ ಮಾಡಿದ ಕಾಟನ್ ಸೀರೆಗಿಂತ ಬಾಳೆ ನಾರಿನ ಕಾಟನ್ ಸೀರೆ ಹೆಚ್ಚು ಬಳಕೆಯಾಗುತ್ತಿದೆಯಂತೆ. ಏಕೆಂದರೆ ಇದು ದೇಹಕ್ಕೆ ಹೆಚ್ಚು ತಂಪು ಸಹ ನೀಡುತ್ತದೆ.

ಈ ಬಗ್ಗೆ ಮಾಹಿತಿ ನೀಡುವ ಶೇಖರ್‌,  ನಮ್ಮ ಉದ್ಯಮಗಳಿಗೆ ಸಾಕಷ್ಟು ಜಾಗ ಮಂಜೂರು ಮಾಡುವಂತೆ ಎಂಟು ವರ್ಷಗಳಿಂದ ಕೇಂದ್ರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದರೂ ಇದುವರೆಗೂ ನೀಡಿಲ್ಲ. ಇದು ಬೆಳವಣಿಗೆಯಾದರೆ ನೇಕಾರರಿಗೆ ಸಾಕಷ್ಟು ಆದಾಯ ಸಿಗಲಿದ್ದು, ಯುವಕರಿಗೆ ಸಹ ಉದ್ಯೋಗ ಸಿಗಲಿದೆ ಎಂದು ಹೇಳುತ್ತಾರೆ.

Advertisement
Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮೀನುಗಾರಿಕೆ ವಲಯದ ಪ್ರಗತಿ ಕುರಿತು ಪರಿಶೀಲನಾ ಸಭೆ | ಸಾಗರ ಆಹಾರೋತ್ಪನ್ನಗಳ ರಫ್ತು ಪ್ರಮಾಣ  ಹೆಚ್ಚಳಕ್ಕೆ ಸೂಚನೆ
May 16, 2025
7:23 AM
by: The Rural Mirror ಸುದ್ದಿಜಾಲ
ಕೃಷಿಕ್ಷೇತ್ರದಲ್ಲಿ ತಾಂತ್ರಿಕ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವಲ್ಲಿ ಭಾರತ ಮುಂಚೂಣಿಯಲ್ಲಿದೆ | ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ |
May 16, 2025
7:16 AM
by: The Rural Mirror ಸುದ್ದಿಜಾಲ
ಮೇ 18 ರ ನಂತರ ರಾಹು ಕಾಟದಿಂದ ಈ 5 ರಾಶಿಯವರಿಗೆ ಕಷ್ಟಗಳು
May 16, 2025
7:12 AM
by: ದ ರೂರಲ್ ಮಿರರ್.ಕಾಂ
ಅಡಿಕೆ ಹಾಳೆಯ ಸಂಬಂಧಿತ ಉತ್ಪನ್ನಗಳ ರಫ್ತು ನಿಷೇಧ | ಅಡಿಕೆ ಉದ್ಯಮದ ಮೇಲೆ ಆಗಬಹುದಾದ ಪರಿಣಾಮಗಳೇನು..?
May 15, 2025
10:06 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror

Join Our Group