ಅನಂತ ಪದ್ಮನಾಭ ದೇವಸ್ಥಾನ | “ಬಬಿಯಾ” ಅಂತ್ಯಸಂಸ್ಕಾರ ಧಾರ್ಮಿಕ ಕಾರ್ಯಕ್ರಮ | ದೇವಸ್ಥಾನಕ್ಕೆ ಹರಿದು ಬಂದ ಭಕ್ತ ಸಾಗರ |

October 10, 2022
12:28 PM

ಶ್ರದ್ಧೆ ಹಾಗೂ ನಂಬಿಕೆಯ ಪ್ರತಿರೂಪವಾಗಿದ್ದ ಕಾಸರಗೋಡು ಜಿಲ್ಲೆಯ ಕುಂಬಳೆ‌ ಬಳಿಯ ಅನಂತ ಪದ್ಮನಾಭ ಸ್ವಾಮಿ ಕ್ಷೇತ್ರದ ಮೊಸಳೆ ಬಬಿಯಾ ಭಾನುವಾರ ರಾತ್ರಿ ದೈವೈಕ್ಯವಾಗಿದೆ. ಇದೀಗ ವಿವಿಧ ಧಾರ್ಮಿಕ ಹಾಗೂ ವೈದಿಕ ಕಾರ್ಯಕ್ರಮಗಳ ಮೂಲಕ ಬಬಿಯಾ ಅಂತ್ಯಸಂಸ್ಕಾರ ಕಾರ್ಯಕ್ರಮ ಆರಂಭಗೊಂಡಿದೆ. ಬಬಿಯಾ ಅಂತಿಮ ನಮನಕ್ಕೆ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿದ್ದರು.

Advertisement
Advertisement
Advertisement
Advertisement
ಸರೋವರ ಕ್ಷೇತ್ರವಾದ ಕಾಸರಗೋಡು ಜಿಲ್ಲೆಯ ಅನಂತಪದ್ಮನಾಭ ಸ್ವಾಮಿ ಕ್ಷೇತ್ರದ ಕೆರೆಯಲ್ಲಿದ್ದ ಮೊಸಳೆ ಬಬಿಯಾಗೆ 70 ವರ್ಷಕ್ಕಿಂತಲೂ ಅಧಿಕ ವಯಸ್ಸಾಗಿತ್ತು. ಪೂಜೆಯ ಬಳಿಕ ನೈವೇದ್ಯ ಸೇವನೆಗೆ ಆಗಮಿಸುವ ಮೊಸಳೆ ಅನೇಕ ವರ್ಷಗಳಿಂದ‌ ದೈವೀಕ ಸ್ವರೂಪವಾಗಿ ಆರಾಧನೆಯಾಗುತ್ತಿತ್ತು. ಸಸ್ಯಾಹಾರಿ ಮೊಸಳೆಯಾಗಿ ಕಾಣಿಸಿಕೊಂಡಿದ್ದ ಬಬಿಯಾ ಕಳೆದ ಅನೇಕ ವರ್ಷಗಳಿಂದ ದೇವರ ಪೂಜೆಯ ಬಳಿಕ ಪ್ರಸಾದ ಸೇವನೆ ನಡೆಸುತ್ತಿತ್ತು.ಭಾನುವಾರ ರಾತ್ರಿ ಮೊಸಳೆ ಬಬಿಯಾ ಇಲ್ಲವಾಯಿತು. ಈ ಸುದ್ದಿ ತಿಳಿಯುತ್ತಲೇ ನೂರಾರು ಭಕ್ತರು ಆಗಮಿಸಿದರು.
ಬಬಿಯಾ ಇನ್ನಿಲ್ಲವಾದ ಸುದ್ದಿ ತಿಳಿಯುತ್ತಲೇ ಸೋಮವಾರ ಬೆಳಗ್ಗೆಯಿಂದಲೇ ಭಕ್ತರು ಆಗಮಿಸಲು ತೊಡಗಿಸಿದರು. ಬಬಿಯಾಗೆ ಅಂತಿಮ ನಮನ ಸಲ್ಲಿಸಿದರು.  ಅನಂತ ಪದ್ಮನಾಭ ದೇವಸ್ಥಾನದ ಮುಂಭಾಗದಲ್ಲಿ ದಫನ ಕಾರ್ಯ ನಡೆಯಲಿದೆ. ಇದಕ್ಕೂ ಮೊದಲು ವೈದಿಕರಿಂದ ವಿಷ್ಣು ಸಹಸ್ರನಾಮ ಪಾರಾಯಣ ನಡೆದಿದೆ.  ಕುಂಟಾರು ರವೀಶ ತಂತ್ರಿಗಳು ಆಗಮಿಸಿದ್ದರು. ಕ್ಷೇತ್ರದ ತಂತ್ರಿಗಳಾದ ಗಣೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದಿದೆ. ಕಾಸರಗೋಡು ಜಿಲ್ಲೆಯ ಸಂಸದರು, ಶಾಸಕರು ಸಹಿತ ವಿವಿಧ ಗಣ್ಯರು ಆಗಮಿಸಿದ್ದಾರೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ವಿಶ್ವೇಶ್ವರ ಭಟ್‌ ಬಂಗಾರಡ್ಕ ಅವರಿಂದ ಬಜೆಟ್‌ ವಿಶ್ಲೇಷಣೆ |
February 1, 2025
7:07 PM
by: The Rural Mirror ಸುದ್ದಿಜಾಲ
ಕೇಂದ್ರ ಬಜೆಟ್‌ | ಕೃಷಿ-ಗ್ರಾಮೀಣ-ಆರೋಗ್ಯದ ಕಡೆಗೂ ಗಮನ |
February 1, 2025
2:28 PM
by: The Rural Mirror ಸುದ್ದಿಜಾಲ
ಗ್ರಾಮೀಣ, ನಗರ ಪ್ರದೇಶದ ಕಟ್ಟೆಗಳ ಅಭಿವೃದ್ಧಿ – ಧಾರ್ಮಿಕ ಪರಂಪರೆ ಸಂರಕ್ಷಣೆ
January 31, 2025
10:23 PM
by: The Rural Mirror ಸುದ್ದಿಜಾಲ
ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸಲು ಸಕಲ ಕ್ರಮ | ಮುಖ್ಯಮಂತ್ರಿ  ಸಿದ್ದರಾಮಯ್ಯ
January 31, 2025
10:11 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror