ರಕ್ತ ಹೀನತೆ ಎಂಬುದು ರಕ್ತದಲ್ಲಿ ಹಿಮೋಗ್ಲೋಬಿನ ಅಂಶ ಕಡಿಮೆಯಾದ ಸ್ಥಿತಿ ಅಂದರೆ ರಕ್ತದ ಆಮ್ಲಜನಕ#Oxygenವನ್ನು ಸಾಗಿಸುವ ಸಾಮರ್ಥ್ಯ ಕಡಿಮೆಯಾಗಿದೆ ಎಂದರ್ಥ.
ಸಾಮಾನ್ಯವಾಗಿ ನಾರ್ಮಲ್ ಹಿಮೋಗ್ಲೋಬಿನ್ ಅಂಶ (Hb)
ಪುರುಷರು –14-18gm/dl
ಮಹಿಳೆಯರಲ್ಲಿ -12-16gm/dl
ಮಕ್ಕಳಲ್ಲಿ —11-16gm/dl
ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಇದನ್ನು ಪಾಂಡು ಎಂಬ ರೋಗದೊಂದಿಗೆ ವಿವರಿಸಲಾಗಿದೆ ಪಾಂಡು ಪದದ ಅರ್ಥ ಅಂದರೆ ತೆಳು ಹಳದಿ ಅಥವಾ ಬಣ್ಣಕ್ಕೆ ದೇಹವು ಬದಲಾಗುವುದರಿಂದ ಈ ಸ್ಥಿತಿಯನ್ನು ಪಾಂಡು ಎಂದು ಕರೆಯಲಾಗುತ್ತದೆ.
ರಕ್ತಹೀನತೆಗೆ ಕಾರಣಗಳು:
ರಕ್ತಹೀನತೆಗೆ ಪ್ರಮುಖ ಕಾರಣ ದೇಹದಲ್ಲಿ ಕಬ್ಬಿಣಾಂಶದ ಕೊರತೆ . ರಕ್ತ ಹೀನತೆಯು ಮಕ್ಕಳು, ವಯಸ್ಸಾದವರಲ್ಲಿ, ಮತ್ತು ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಗ್ರಾಮಾಂತರ ಪ್ರದೇಶಗಳಲ್ಲಿ ಮಕ್ಕಳಿಗೆ ಸರಿಯಾದ ಪೌಷ್ಟಿಕ ಆಹಾರದ ಕೊರತೆಯಿಂದ ಹಾಗೂ ಮಹಿಳೆಯರಲ್ಲಿ ಪದೇಪದೇ ಗರ್ಭಪಾತ ಹಾಗೂ ಹೆಚ್ಚು ಅಂತರವಿಲ್ಲದೆ ಗರ್ಭದರಿಸುವುದರಿಂದಲೂ ರಕ್ತಹೀನತೆ ಕಾಣಿಸುವುದು.ಅತಿಯಾದ ವ್ಯಾಯಾಮ,ಕಡಿಮೆ ನಿದ್ರೆ, ಅತಿಯಾದ ಹುಳಿ ಉಪ್ಪು ಮಸಾಲ ಪದಾರ್ಥಗಳ ಸೇವನೆ, ಇವುಗಳಿಂದ ಅಜೀರ್ಣ ಉಂಟಾಗಿ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಸರಿಯಾಗಿ ಹೀರಲ್ಪಡುವುದಿಲ್ಲ. ಇದರಿಂದ ರಕ್ತಪರಿಚಲನೆಯ ಮೇಲೆ ಪರಿಣಾಮಬೀರಿ ರಕ್ತಹೀನತೆಯನ್ನು ಉಂಟು ಮಾಡುವುದು. ಹಗಲು ನಿದ್ರೆ, ಜಡತ್ವ,ಆಲಸ್ಯ ಇವುಗಳಿಂದ ಅಸಮರ್ಪಕ ಜೀರ್ಣಕ್ರಿಯೆ ಹಾಗೂ ಚಯಾಪಚಯ ಸರಿಯಾಗದೆ ಪೌಷ್ಟಿಕಾಂಶದ ಕೊರತೆಗೆ ಕಾರಣವಾಗಿ ರಕ್ತಹೀನತೆ ಉಂಟಾಗುತ್ತದೆ.
ಮಣ್ಣಿನ ಸೇವನೆ (ಮೃತ್ಭಕ್ಷಣ ) ನೇರವಾಗಿ ಮಣ್ಣಿನ ಸೇವನೆ ಇತ್ತೀಚಿನ ದಿನಗಳಲ್ಲಿ ಇಲ್ಲದಿದ್ದರೂ ಸಹ ಇನ್ನೂ ಅಭಿವೃದ್ಧಿ ಆಗದ ಅನೇಕ ಪ್ರದೇಶಗಳಲ್ಲಿ ಸರಿಯಾದ ಶೌಚಾಲಯಗಳಿಲ್ಲದೆ ಬಯಲು ಪ್ರದೇಶಗಳಲ್ಲಿ ಮಲವಿಸರ್ಜನೆ, ಬರಿಕಾಲಿನಲ್ಲಿ ನಡಿಗೆ ಇವುಗಳಿಂದ ದೇಹದಲ್ಲಿ ಸೋಂಕಿನ ಮಣ್ಣಿನ ಅಂಶ ಸೇರಿಕೊಂಡು ಅಂಗಾಂಗಗಳಿಗೆ ಸೋಂಕು ಮತ್ತು ಹಾನಿ ಉಂಟುಮಾಡುವುದು ಹಾಗೂ ರಕ್ತ ಹೀನತೆಗೆ ಕಾರಣವಾಗುವುದು, ಇದನ್ನು ಆಯುರ್ವೇದದಲ್ಲಿ ಮೃಧ್ಭಕ್ಶಣ ಜನ್ಯ ಪಾಂಡು ಎಂದು ಹೇಳಲಾಗುತ್ತದೆ.
ಮೇಲಿನ ಕಾರಣಗಳಿಂದಾಗಿ ಜೀರ್ಣ ಕಾರ್ಯ ಶಕ್ತಿಯು ನೇರವಾಗಿ ಅಥವಾ ಪರೋಕ್ಷವಾಗಿ ಅಡ್ಡಿಯಾಗುತ್ತದೆ ಆದ್ದರಿಂದ ಸರಿಯಾದ ಪೋಷಕಾಂಶಗಳು ಅಗತ್ಯ ಪ್ರಮಾಣದಲ್ಲಿ ಹೀರಲ್ಪಡುವುದಿಲ್ಲ. ಇದು ಕಳಪೆ ಪೋಷಣೆಗೆ ಕಾರಣವಾಗಿ ರಕ್ತದ ಗುಣಮಟ್ಟ ಮತ್ತು ಪ್ರಮಾಣದಲ್ಲಿ ಕ್ಷೀಣಿಸುವುದು ಇದರಿಂದ ರಕ್ತದಲ್ಲಿ ಹೀನತೆ ಉಂಟಾಗುವುದು.
ರಕ್ತ ಹೀನತೆಯ ಲಕ್ಷಣಗಳು: ರಕ್ತ ಹೀನತೆ ಇದ್ದವರಿಗೆ ಕಣ್ಣಿನ ರೆಪ್ಪೆಯ ಒಳಭಾಗ, ನಾಲಿಗೆ, ತುಟಿ, ಉಗುರು ಮತ್ತು ಅಂಗೈಗಳು ಬಿಳಿಚಿಕೊಳ್ಳುತ್ತದೆ. ದೌರ್ಬಲ್ಯ,ಆಯಾಸ, ಆಲಸ್ಯ, ಕೆಲಸದಲ್ಲಿ ನಿರಾಸಕ್ತಿ,ನಡೆಯುವಾಗ ಉಸಿರುಗಟ್ಟುವಿಕೆ#Exertional dyspnea, ಹೃದಯ ಬಡಿತದಲ್ಲಿ ಹೆಚ್ಚಳ #Palpitation ಹೊಟ್ಟೆಯಲ್ಲಿ ಹುಳುಗಳ ಬಾಧೆ#worms ತಲೆ ತಿರುಗುವಿಕೆ, ಅತಿಯಾದ ನಿದ್ರೆ, ತೂಕಡಿಕೆ, ಕೈ ಕಾಲುಗಳಲ್ಲಿ ಊತ,ನೋವು,ಮರಕಟ್ಟುವಿಕೆ, ಮೊದಲಾದ ಲಕ್ಷಣಗಳು ರಕ್ತಹೀನತೆಯಿಂದ ಕಾಣಿಸಿಕೊಳ್ಳುವುದು. ಇವುಗಳಲ್ಲಿ ಯಾವುದಾದರೂ ಲಕ್ಷಣಗಳು ಕಂಡುಬಂದ ಕೂಡಲೇ ರಕ್ತ ಪರೀಕ್ಷೆ#haemoglobin test/ pheriperal Smear ಮಾಡಿಸಿ ರಕ್ತ ಹೀನತೆಯನ್ನು ಪತ್ತೆ ಹಚ್ಚುವುದು ಅತ್ಯಗತ್ಯ.
ಆಯುರ್ವೇದ ಪರಿಹಾರ ಮತ್ತು ಚಿಕಿತ್ಸೆ: ರಕ್ತಹೀನತೆಗಾಗಿ ಔಷಧಿಗಳನ್ನು ಪ್ರಾರಂಭಿಸುವ ಮೊದಲು ಸೂಕ್ತವಾದ ಹುಳು ನಾಶಕ ಔಷಧಿಗಳನ್ನು ತೆಗೆದುಕೊಳ್ಳುವುದು ಅವಶ್ಯ. ಕೆಲವು ಆಯುರ್ವೇದ ಗಿಡಮೂಲಿಕೆಗಳಿಂದ ತಯಾರಿಸಿದ ಔಷಧಿಗಳ ಸೇವನೆಯಿಂದನೂ ರಕ್ತ ಹೀನತೆಯನ್ನು ತಡೆಗಟ್ಟಬಹುದು. ಬೃಂಗರಾಜ ಪುನರ್ನವ ಹರಿತಕಿ ವಿಡಂಗ ಶತಾವರಿ ಶಿಲಾಜಿತುಮೊದಲಾವುಗಳ ಬಳಕೆ ಹಾಗೂ ಕೆಲವು ಸಾಮಾನ್ಯ ಸಂದರ್ಭಗಳಲ್ಲಿ ಉತ್ತಮ ಪೌಷ್ಟಿಕಾಂಶವಿರುವ ಆಹಾರ ಸೇವನೆ ಹಾಗೂ ಅಗತ್ಯ ಕಬ್ಬಿಣಾoಶ ಹೆಚ್ಚಾಗಿರುವ ಆಹಾರ ಪದಾರ್ಥಗಳನ್ನು ಅತಿ ಹೆಚ್ಚು ಸೇವಿಸುವುದರಿಂದ ರಕ್ತಹೀನತೆ ತಡೆಗಟ್ಟಬಹುದು ನೆಲ್ಲಿಕಾಯಿ ಟೊಮೇಟೊ ಬೀಟ್ರೂಟ್ ಸೋಯಾಬೀನ್ ಒಣದ್ರಾಕ್ಷಿ ಪಾಲಕ್ ಸೊಪ್ಪು ಜೇನುತುಪ್ಪ ಬೆಲ್ಲ ಕಿತ್ತಳೆ ಸೇಬು ಚಿಕ್ಕು ಇತ್ಯಾದಿ ಕಬ್ಬಿಣ ಅಂಶ ಜಾಸ್ತಿ ಇರುವ ಆಹಾರ ಸೇವನೆಯಿಂದ ರಕ್ತ ಹೀನತೆಯನ್ನು ಕಡಿಮೆ ಮಾಡಬಹುದು.
ತೀವ್ರತರವಾದ ಪರಿಸ್ಥಿತಿಯಲ್ಲಿ ಶುದ್ಧೀಕರಣದ (ವಮನ -ವಿರೇಚನ) ನಂತರ ವಿವಿಧ ಔಷಧಿಗಳನ್ನು ಜೇನುತುಪ್ಪ, ತುಪ್ಪ ಮತ್ತು ಲೋಹದ ಭಸ್ಮ ಇತ್ಯಾದಿ ಕಬ್ಬಿಣದ ಸಂಪನ್ಮೂಲಗಳ ಬಳಕೆ ಮಾಡುವುದರಿಂದ ರಕ್ತ ಹೀನತೆ ಸಮಸ್ಯೆ ನಿವಾರಿಸಬಹುದು. ಕೆಲವೊಂದು ಸಂಧರ್ಭ ಗಳಲ್ಲಿ Iron tablets/ Iron syrup ಹಾಗೂ blood transfusion ಅವಶ್ಯಕತೆ ಇದ್ದಾಗ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ತೆಗೆದುಕೊಳ್ಳಬೇಕು ಅನಾರೋಗ್ಯದ ತೀವ್ರತೆ,ರೋಗದ ಹಂತ,ಮತ್ತು ಒಬ್ಬರ ದೇಹದ ಸಂವಿಧಾನದ ಆಧಾರದ ಮೇಲೆ ಸೂಕ್ತವಾದ ಚಿಕಿತ್ಸಾ ಸೂತ್ರವನ್ನು ಆಯ್ಕೆ ಮಾಡಲಾಗುವುದು.
ಆರೋಗ್ಯಕರ ಆಹಾರ ಮತ್ತು ಅಭ್ಯಾಸಗಳ ಜೊತೆಗೆ ರಕ್ತಹೀನತೆಯ ಕಾರಣಗಳನ್ನು ಅರಿತು ವೈದ್ಯರೊಂದಿಗೆ ಸಮಾಲೋಚನೆ ಮಾಡಿ ಸೂಕ್ತವಾದ ಚಿಕಿತ್ಸೆ ತೆಗೆದುಕೊಳ್ಳುವುದರಿಂದ ರಕ್ತಹೀನತೆಯನ್ನು ತಡೆಗಟ್ಟುವುದರ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳ ಬಹುದು.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…