ಮಲೇಷ್ಯಾದಿಂದ ಬೆಂಗಳೂರಿಗೆ ಕಳ್ಳಸಾಗಣೆಯಾಗುತ್ತಿದ್ದ ಅಳಿವಿನಂಚಿನಲ್ಲಿರುವ 379 ವನ್ಯಜೀವಿಗಳನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ. ಡಿಸೆಂಬರ್ 29 ರಂದು ಕೌಲಾಲಂಪುರದಿಂದ ಹೊರಟಿದ್ದ ಬಾಟಿಕ್ ಏರ್ ಮಲೇಷ್ಯಾ ವಿಮಾನದಲ್ಲಿ 379 ಪ್ರಾಣಿಗಳನ್ನು ಸೂಟ್‌ಕೇಸ್ ಮೂಲಕ ಬೆಂಗಳೂರಿಗೆ ಸಾಗಿಸಲಾಗಿತ್ತು. 275 ಗ್ರೀನ್ ಇಗುವಾನಾ. 91 ಫ್ರಾಗ್ ಪ್ಯಾಕ್ ಮ್ಯಾನ್ಸ್, 20 ಆಫ್ರಿಕನ್ ಸ್ಪರ್ಡ್ ಆಮೆ, 1 ಗೆಕ್ಕೋ ಪತ್ತೆಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವಿಮಾನವು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ತಲುಪಿದ ನಂತರ, ಗುಪ್ತಚರ ಸುಳಿವು ಆಧರಿಸಿ ಲಗೇಜ್ ಪರಿಶೀಲನೆ ನಡೆಸಿದಾಗ ಪ್ರಯಾಣಿಕರೋರ್ವರ ಸೂಟ್ ಕೇಸ್ ನಲ್ಲಿ 379 ಪ್ರಾಣಿಗಳು ಪತ್ತೆಯಾಗಿವೆ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement