ಮೂರು ವರ್ಷ, ಎಂಟು ತಿಂಗಳ ಕೋಲ್ಕತ್ತಾದ ಅನೀಶ್ ಸರ್ಕಾರ್ ಇತಿಹಾಸದಲ್ಲಿ ಅತ್ಯಂತ ಕಿರಿಯ ಪಿಡೇ ರೇಟೆಡ್ ಚೆಸ್ ಆಟಗಾರ ಎಂದು ದಾಖಲಿಸಿಕೊಂಡಿದ್ದಾರೆ. ಇದೀಗ ಅನೀಶ್, 1555ನೇ ಫಿಡೆ ರೇಟಿಂಗ್ ಪಡೆದಿದ್ದಾರೆ. 5ನೇ ವಯಸ್ಸಿನ ತೇಜಸ್ ತಿವಾರಿ ಈ ಹಿಂದಿನ ಅತಿ ಕಿರಿಯ ರೇಟೆಡ್ ಆಟಗಾರ ಎನಿಸಿಕೊಂಡಿದ್ದರು.…..ಮುಂದೆ ಓದಿ….
ಜನವರಿ 26, 2021 ರಂದು ಜನಿಸಿದ ಅನೀಶ್ ಸರ್ಕಾರ್ ಅವರು ಕಳೆದ ತಿಂಗಳು ಪಶ್ಚಿಮ ಬಂಗಾಳದ 9 ವಯೋಮಿತಿ ಮುಕ್ತ ಚೆಸ್ ಟೂರ್ನಿಯಲ್ಲಿ ಆಡುವ ಮೂಲಕ ಸ್ಪರ್ಧಾತ್ಮಕ ಚೆಸ್ ಆಟಕ್ಕೆ ಪ್ರವೇಶ ಪಡೆದಿದ್ದರು. ಇಬ್ಬರು ರೇಟೆಡ್ ಆಟಗಾರರನ್ನು ಸೋಲಿಸುವ ಮೂಲಕ, ಅವರು 8 ರಲ್ಲಿ 5.5 ಅಂಕಗಳನ್ನು ಗಳಿಸಿ 24 ನೇ ಸ್ಥಾನ ಪಡೆದರು. ಪ್ರದರ್ಶನ ಪಂದ್ಯದಲ್ಲಿ, ಅವರು ಭಾರತದ ನಂ. 1 ಮತ್ತು ವಿಶ್ವದ ನಂ. 4 ಗ್ರ್ಯಾಂಡ್ ಮಾಸ್ಟರ್ ಅರ್ಜುನ್ ಎರಿಗೈಸ್ ವಿರುದ್ಧ ಆಡುವ ಅವಕಾಶವನ್ನು ಕೂಡಾ ಪಡೆದರು. ಒಂದು ವಾರದ ನಂತರ, ಅನೀಶ್ ಸರ್ಕಾರ್ ಅವರು ವೆಸ್ಟ್ ಬೆಂಗಾಲ್ ಸ್ಟೇಟ್ ಅಂಡರ್-13 ಓಪನ್‌ನಲ್ಲಿ ಸ್ಪರ್ಧಿಸಿದರು, ಈ ಪಂದ್ಯಾವಳಿಯಲ್ಲಿ ಅವರು ಐದು ರೇಟಿಂಗ್ ಆಟಗಾರರನ್ನು ಎದುರಿಸಿದರು. ಅಂತಿಮವಾಗಿ ಅವರಿಗೆ ಆರಂಭಿಕ ಫಿಡೇ ರೇಟಿಂಗ್ 1555 ಗಳಿಸಿತು. ಗುರುವಾರ ಈ ರೇಟಿಂಗ್‌ಗಳು ಅಪ್ಡೇಟ್ ಆಗಿದೆ.
ಅನೀಶ್ ಸರ್ಕಾರ ಅವರ ತಾಯಿ ರೇಷ್ಮಾ ಪಿಟಿಐ ಜೊತೆ ಮಾತನಾಡುತ್ತಾ, ನಮಗೆ ಚದುರಂಗದಲ್ಲಿ ಅಷ್ಟೊಂದು ಜ್ಞಾನ ಇಲ್ಲ. ನಾವು ಪೆಪ್ಪಾ ಪಿಗ್ ಕಾರ್ಟೂನ್ ಹಾಗೂ ಯೂಟ್ಯೂಬ್ ಚಾನೆಲ್‌ಗಳನ್ನು ಪರಿಚಯಿಸಿದ್ದೆವು. ಆದರೆ ಅನೀಶ್ ಚೆಸ್ ವಿಡಿಯೋಗಳನ್ನು ನೋಡುವುದು ಗಮನಿಸಿ ತರಬೇತಿಗೆ ಕಳುಹಿಸಿದೆವು ಎನ್ನುತ್ತಾರೆ.