ಒಬ್ಬರೇ ಊಟ ಮಾಡಬಾರದು. ತಾಯಿ, ಪತ್ನಿ ಅಥವಾ ಮಕ್ಕಳು ಊಟವನ್ನು ಬಡಿಸಬೇಕು. ತಡರಾತ್ರಿ ಊಟ ಮಾಡಬಾರದು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಮಧ್ಯರಾತ್ರಿಯ ಊಟವನ್ನು ರಾಕ್ಷಸ ಭೋಜನ ಎಂದು ಹೇಳಲಾಗುತ್ತದೆ. ಊಟ ಮಾಡುವಾಗ ಬೇಕಿರುವಷ್ಟನ್ನೇ ಹಾಕಿಸಿಕೊಳ್ಳಬೇಕು. ಗಬಗಬನೆ ತಿನ್ನುವುದು, ಅತಿ ನಿಧಾನವಾಗಿ ಊಟ ಮಾಡುವುದು; ಇವರೆಡೂ ಸರಿಯಲ್ಲ. ಊಟಕ್ಕೆ ಕುಳಿತವರು ಬಡಿಸಿದ ಎಲ್ಲವನ್ನೂ ತಿನ್ನಬೇಕು. ಏಕೆಂದರೆ ಅನ್ನ ಎಂದರೆ ಪರಬ್ರಹ್ಮ ಸ್ವರೂಪ,
ಬೇಕಿರುವಷ್ಟನ್ನೇ ಹಾಕಿಸಿಕೊಳ್ಳಬೇಕು. ನಾವು ಅನ್ನಕ್ಕಾಗಿ ಕಾಯಬೇಕೇ ಹೊರತು ಅನ್ನ ನಮಗಾಗಿ ಕಾಯಬಾರದು. ಬಡಿಸಿದ ಎಲೆಯನ್ನು ಎಂದಿಗೂ ಖಾಲಿಬಿಡಬೇಡಿ. ನೀವು ಹಾಗೆ ಮಾಡಿದರೆ ಭವಿಷ್ಯದಲ್ಲಿ ಬಡತನವನ್ನು ಎದುರಿಸುವ ಅವಕಾಶ ಇರುತ್ತದೆ.
ನಮ್ಮ ಊಟ ಹೀಗಿರಲಿ:
*ತಟ್ಟೆಯಲ್ಲಿ ಅನ್ನ ಬಡಿಸಿದ ತಕ್ಷಣ ಊಟ ಪ್ರಾರಂಭಿಸಿ.
*ಯಾವುದೇ ಕಾರಣಕ್ಕೂ ಊಟವನ್ನು ಕಾಯಿಸಬೇಡಿ
*ಊಟಕ್ಕಾಗಿ ನೀವು ಕಾಯ್ದರೆ ಪರವಾಗಿಲ್ಲ.
*ಊಟಕ್ಕೆ ಕುಳಿತಾಗ ಎಂದಿಗೂ ಎಡಗೈಯನ್ನು ನೆಲಕ್ಕೆ ಊರ ಬೇಡಿರಿ.
*ನಿಮಗೆ ಎಷ್ಟು ಅವಶ್ಯಕವೋ ಅಷ್ಟನ್ನೇ ಹಾಕಿಸಿಕೊಳ್ಳಿ.
*ತಟ್ಟೆಯಲ್ಲಿ ಎಂದಿಗೂ ಅನ್ನವನ್ನು ಚೆಲ್ಲಬೇಡಿ.
*ಊಟ ಮಾಡುವಾಗ ಊಟದ ಕೈಯನ್ನು ಜಾಡಿಸಬೇಡಿರಿ.
*ಊಟ ಮಾಡುವಾಗ ಮಾತನಾಡಬೇಡಿ. ಮಾತನಾಡುವ ಅವಶ್ಯಕತೆಯಿದ್ದರೆ ಅವಶ್ಯಕತೆ ಇದ್ದಷ್ಟೇ ಮಾತನಾಡಿ.
*ನಡುನಡುವೆ ನೀರು ಕುಡಿಯಿರಿ. ಇದು ಆಹಾರದ ಪಚನ ಕ್ರಿಯೆಗೆ ಸಹಕಾರಿ.
*ಅಡುಗೆಯನ್ನು ಮನೆಯವರು – ಅಮ್ಮ-ಅಕ್ಕ-ಹೆಂಡತಿ ಬಹಳಷ್ಟು ಇಷ್ಟಪಟ್ಟು ಶ್ರಮ ವಹಿಸಿ ತಯಾರಿಸಿರುತ್ತಾರೆ ಎಂಬುದನ್ನು ಎಂದಿಗೂ ಮರೆಯಬೇಡಿ. ಅವರಿಗೆ ಅವಮಾನವಾಗುವಂತೆ ಅಡುಗೆಯ ಬಗ್ಗೆ ವಿಮರ್ಶೆ ಮಾಡಬೇಡಿ.
*ಉಣ್ಣುವಾಗ ತಟ್ಟೆಯ ಕೆಳಗೆ ಅನ್ನವನ್ನು ಚೆಲ್ಲಿಕೊಂಡು ಉಣ್ಣಬೇಡಿ.
*ಆಕಸ್ಮಾತಾಗಿ ತುತ್ತು ಕೆಳಕ್ಕೆ ಬಿದ್ದರೆ ಯಾವುದೇ ಸಂಕೋಚವಿಲ್ಲದೆ ಎತ್ತಿಕೊಂಡು, ಕಣ್ಣಿಗೆ ಒತ್ತಿಕೊಂಡು ಬಾಯಿಗೆ ಹಾಕಿಕೊಳ್ಳಿ.
*ತುತ್ತಿನ ಬಗ್ಗೆ ಅಲಕ್ಷ್ಯ, ತಾತ್ಸಾರ ಮಾಡಿದರೆ ಮುಂದೊಂದು ದಿನ ಒಂದೊಂದು ತುತ್ತಿಗೂ ಪರದಾಡಬೇಕಾದೀತು.
*ಉಣ್ಣುವಾಗ ನಿಮ್ಮ ಎಂಜಿಲನ್ನು ಪಕ್ಕದ ತಟ್ಟೆಗೆ ಹಾಕುವುದು ಅಥವಾ ಅವರಿಂದ ನೀವು ತೆಗೆದುಕೊಳ್ಳುವುದನ್ನು ಮಾಡಬೇಡಿ.
*ಅನ್ನ ಬ್ರಹ್ಮ ಸ್ವರೂಪಿ. ಯಾವ ಕಾರಣಕ್ಕೂ ಭಗವಂತನಿಗೆ ಅವಮಾನಿಸಬೇಡಿ.
(Social Media)