ಹಲಸು ವಿಶ್ವವ್ಯಾಪಿಯಾಗಿ ಬೆಳೆಯುತ್ತಿದೆ. ಹಲಸು ಕೂಡಾ ಇಂದು ಕೃಷಿಕರಿಗೆ ಆದಾಯ ತರಬಲ್ಲ ಹಣ್ಣಾಗಿ ಪರಿವರ್ತನೆಯಾಗುತ್ತಿದೆ. ಆದರೆ ಪರಿಶ್ರಮ ಹಾಗೂ ಹೊಸ ಪ್ರಯತ್ನಗಳು ಬೇಕಾಗಿದೆ. ಇಂತಹ ಹೊಸ ಪ್ರಯತ್ನಗಳ ಹಾಗೂ ಹಲಸಿನ ಪಾಸಿಟಿವ್ ಬೆಳವಣಿಗೆಗಳ ಪುಸ್ತಕವೊಂದು ತಯಾರಾಗಿದೆ. ಅದು “ಅನ್ನದ ಮರ”
ಕೃಷಿ ಪತ್ರಕರ್ತ, ನಾಡಿನ ಹೆಸರಾಂತ ಕೃಷಿಪರ ಮಾಧ್ಯಮ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕ ನಾ.ಕಾರಂತ ಪೆರಾಜೆ ಅವರು ಬರೆದಿರುವ “ಅನ್ನದ ಮರ” ಹಲಸು ಈಗ ಜಗದಗಲ ಎಂಬ ಟ್ಯಾಗ್ ಲೈನ್ ಮೂಲಕ ಬಂದಿರುವ ಈ ಪುಸ್ತಕ ಕೃಷಿಕರಿಗೆ ಉಪಯುಕ್ತವಾಗಿದೆ. ಕೃಷಿಯಲ್ಲಿ ಹೊಸ ಸಾಧ್ಯತೆಗಳ ಬಗ್ಗೆ ಅರಿಯುವ ಮಂದಿಗೆ ಹಲಸಿನ ಸಾಧ್ಯತೆ ಹಾಗೂ ಆವಿಷ್ಕಾರಗಳ ಬಗ್ಗೆ ತಿಳಿಯಬಹುದಾಗಿದೆ.
ಪುಸ್ತಕದ ಒಳಪುಟಗಳಲ್ಲಿ…… ಹಲಸಿಗೊಬ್ಬರೇ ರಾಯಭಾರಿ…. ದೇವರ ನಾಡಲ್ಲಿ ಹಲಸಿಗೆ ರಾಜಕಿರೀಟ…. ದೇಶದಲ್ಲೆ ಪ್ರಥಮ ಚಕ್ಕವಂಡಿ… ಅಸೀಸ್ ಯುವಕನನ್ನು ಸೆಳೆದ ಹಲಸು… ಹಲಸಿನ ಸಸ್ಯಮಾಂಸ…. ಆರಾಧನೆಗೆ ಹಲಸಿನ ಥಳಕು… ಚೇಳೂರು ಹಲಸು ಸಂತೆ…ಹಲಸು-ಹುಮ್ಮಸ್ಸು… ಉಪ್ಪುಸೊಳೆ ಉದ್ಯಮ… ಹಲಸಿನ ಬೀಜದ ಜಾಫಿ.. ಹಲಸು ಕೃಷಿಕರಾದ ವರ್ಮುಡಿ ಮತ್ತು ಗ್ಯಾಬ್ರಿಯಲ್ ಅವರ ಅನುಭವ.. ಹಲಸಿಗೆ ಕಣ್ಣ ಕಸಿ.. ದೇಶದಲ್ಲೇ ಮೊದಲು ಮಲ್ಯರ ಹಲಸಿನಂಗಡಿ… ಜಾಬ್ ವರ್ಕ್ ಹಲ್ವ ತಯಾರಿ… ಹಹ ಐಸ್ ಕ್ರೀಮ್.. ಹ ಹ ಸಾಟ್.. ಹಲಸಿನ ಬೀಜದ ಹುಡೀ….. ಹೀಗೆ ಅನ್ಯಾನ್ಯ ವೈವಿಧ್ಯಗಳು ಕಂಡಿವೆ.
ಪುಸ್ತಕ ಅಗತ್ಯವಾಗಿ ಖರೀದಿ ಮಾಡಬಹುದಾಗಿದೆ. ಆಸಕ್ತರು ನಾ ಕಾರಂತ ಪೆರಾಜೆ ಅವರನ್ನು 9448625794 ಸಂಖ್ಯೆಯನ್ನು ಸಂಪರ್ಕ ಮಾಡಬಹುದಾಗಿದೆ.
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…