Advertisement
ಸುದ್ದಿಗಳು

‘ಅನ್ನಂ ಬ್ರಹ್ಮ’ ಭಾವದಿಂದ ಆಹಾರ ಸೇವಿಸಿದರೆ ಮುಕ್ತಿಯ ಸಾಧನ – ರಾಘವೇಶ್ವರ ಶ್ರೀ

Share

ಭೋಜನವೆಂದರೆ ಅದು ಕೇವಲ ಹಸಿವು ನೀಗಿಸುವ ಕ್ರಿಯೆಯಲ್ಲ, ಅದೊಂದು ಅದ್ವೈತ ಸಾಧನೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಗೋಕರ್ಣದ ಅಶೋಕೆಯ ಮೂಲಮಠದ ಆವರಣದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ ಧರ್ಮಸಭೆಯಲ್ಲಿ ಗುರುವಾರ ‘ಅನ್ನಂ ಬ್ರಹ್ಮ’ ಪ್ರವಚನ ಮಾಲಿಕೆಯಲ್ಲಿ ಆಶೀರ್ವಚನ ನೀಡಿದ ಅವರು, ನಾವು ಸೇವಿಸುವ ಆಹಾರ ಕಾಲಕ್ರಮೇಣ ನಮ್ಮ ರಕ್ತ, ಮೇಧಸ್ಸು, ಚರ್ಮ ಸೇರಿದಂತೆ ದೇಹದ ಭಾಗವಾಗುತ್ತದೆ. ಆರಂಭದಲ್ಲಿ ಆಹಾರ ಮತ್ತು ನಾವು ಪ್ರತ್ಯೇಕವಾಗಿದ್ದರೂ, ಬಳಿಕ ಅದು ನಮ್ಮಲ್ಲೇ ಒಂದಾಗಿ ನಾವೇ ಆಗುತ್ತದೆ. ಇದೇ ರೀತಿ ಜೀವನದ ಅಂತಿಮ ಗುರಿಯೂ ಎಲ್ಲಾ ಕರ್ಮಗಳನ್ನು ತೊರೆದು ಪರಮಾತ್ಮನಲ್ಲಿ ಒಂದಾಗುವುದಾಗಿದೆ ಎಂದು ತಿಳಿಸಿದರು.

ಭೋಜನವು ಜೀವ-ಜೀವ ಅದ್ವೈತಕ್ಕೆ ದಾರಿ ಮಾಡಿಕೊಡುತ್ತದೆ. ಜೀವ-ದೇವ ಅದ್ವೈತದತ್ತ ಸಾಗುವ ಮೊದಲ ಹಂತವೇ ಭೋಜನವಾಗಿದ್ದು, ಆಹಾರ ದೇಹದಲ್ಲಿ ಸರಿಯಾಗಿ ಜೀರ್ಣವಾಗಿ ಒಂದಾಗದಿದ್ದರೆ ಅದೇ ಅನಾರೋಗ್ಯ ಮತ್ತು ಮರಣಕ್ಕೂ ಕಾರಣವಾಗಬಹುದು. “ಸೇವಿಸಿದ ಆಹಾರವನ್ನು ನಾವೇ ಜೀರ್ಣಿಸಿಕೊಳ್ಳಬೇಕು. ಇಲ್ಲದಿದ್ದರೆ ಆಹಾರವೇ ನಮ್ಮನ್ನು ಜೀರ್ಣಗೊಳಿಸುತ್ತದೆ” ಎಂಬ ಆಯುರ್ವೇದದ ತತ್ವವನ್ನು ಉಲ್ಲೇಖಿಸಿದ ಶ್ರೀಗಳು, ಜೀರ್ಣವಾಗದೆ ಉಳಿಯುವ ಆಹಾರವೇ ಅನೇಕ ರೋಗಗಳ ಮೂಲ ಎಂದು ಹೇಳಿದರು.

ಅನ್ನವನ್ನು ‘ಅನ್ನಂ ಬ್ರಹ್ಮ’ ಎಂಬ ಭಾವನೆಯೊಂದಿಗೆ ಸೇವಿಸಿದಾಗ ಅದು ಕೇವಲ ದೈಹಿಕ ಪೋಷಣೆಯಾಗದೆ, ಆತ್ಮೋನ್ನತಿಯ ಸಾಧನವಾಗಿ ಮುಕ್ತಿಯ ಮಾರ್ಗವನ್ನು ತೋರಿಸುತ್ತದೆ. ಜೀವವುಳ್ಳ ವಸ್ತುವೇ ಜೀವಿಗೆ ಆಹಾರವಾಗಬಲ್ಲದು. ಜಡ ವಸ್ತುಗಳು ಆಹಾರವಾಗಲು ಸಾಧ್ಯವಿಲ್ಲ. ಸೃಷ್ಟಿಯ ನಿಯಮದಂತೆ ಒಂದಾಗುವ ವಸ್ತುಗಳಲ್ಲಿ ಸಮಾನತೆ ಇರಬೇಕು ಎಂದು ಅವರು ಅಭಿಪ್ರಾಯಪಟ್ಟರು.

ದೇಹವೆಂಬ ಯಂತ್ರ ಬೆಳಗಿನ ವೇಳೆಯಲ್ಲಿ ಸಂಪೂರ್ಣ ಶಕ್ತಿಯಿಂದ ಕಾರ್ಯನಿರ್ವಹಿಸಿದರೂ, ಸಂಜೆ ಮತ್ತು ರಾತ್ರಿ ಹೊತ್ತಿಗೆ ವಿಶ್ರಾಂತಿ ಅಗತ್ಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ರಾತ್ರಿ ಕೆಲಸ ಮಾಡುವ ಪ್ರವೃತ್ತಿ ಹೆಚ್ಚುತ್ತಿರುವುದು ದೇಹದ ಸಹಜ ಚಕ್ರದ ವಿರುದ್ಧದ ಯುದ್ಧವೇ ಆಗಿದೆ ಎಂದು ಶ್ರೀಗಳು ಹೇಳಿದರು.

ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

Jagadguru Shankaracharya Sri Sri Raghaveshwara Bharathi Mahaswamiji said that eating is an act of Advaita, where food ultimately becomes one with the body. Speaking at the ‘Annabrahma Chaturmasya’ discourse in Gokarna, he stressed that food consumed with the feeling of “Annam Brahma” becomes a path to spiritual liberation, while unhealthy food leads to disease and affects future generations.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 06-10-2026 | ಕರ್ನಾಟಕದಲ್ಲಿ ಮಳೆ ಎಲ್ಲೆಲ್ಲಿ? ಅ.9 ರಿಂದ ಕರಾವಳಿಯಲ್ಲಿ ಮಳೆ ಹೆಚ್ಚಾಗುತ್ತಾ?

ಕರಾವಳಿ ಹಾಗೂ ಮಲೆನಾಡಿನ ಕೆಲವೆಡೆ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆಯಿದ್ದು, ಅ.9…

17 hours ago

ರಾಜ್ಯದಲ್ಲಿ ನೈಋತ್ಯ ಮುಂಗಾರು ಸಕ್ರಿಯ ; ಕರಾವಳಿ, ಮಲೆನಾಡು ಸೇರಿದಂತೆ ಹಲವೆಡೆ ಭಾರೀ ಮಳೆ

ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಸಕ್ರಿಯವಾಗಿದ್ದು, ಕರಾವಳಿ ಮತ್ತು ಮಲೆನಾಡು ಸೇರಿದಂತೆ ಹಲವೆಡೆ ಉತ್ತಮ…

23 hours ago

ರಾಜ್ಯದಲ್ಲಿ ವಿದ್ಯುತ್ ಲೋಡ್‌ಶೆಡ್ಡಿಂಗ್ ಇಲ್ಲ: ಇಂಧನ ಸಚಿವ ಕೆ.ಜೆ.ಜಾರ್ಜ್

ರಾಜ್ಯದಲ್ಲಿ ಸದ್ಯ ಯಾವುದೇ ರೀತಿಯ ವಿದ್ಯುತ್ ಲೋಡ್‌ಶೆಡ್ಡಿಂಗ್ ಇಲ್ಲ ಎಂದು ಇಂಧನ ಸಚಿವ…

23 hours ago

ನವೋದಯ ವಿದ್ಯಾಲಯದ 9, 11ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ – ಅ.15 ಕೊನೆಯ ದಿನ

2027-28ನೇ ಸಾಲಿನಲ್ಲಿ ನವೋದಯ ವಿದ್ಯಾಲಯಗಳ 9 ಮತ್ತು 11ನೇ ತರಗತಿಯ ಖಾಲಿ ಸ್ಥಾನಗಳಿಗೆ…

24 hours ago

1973 ರ ಅಡಿಕೆ ಬಿಕ್ಕಟ್ಟು 2026ಕ್ಕೆ ನೀಡುವ ಎಚ್ಚರಿಕೆ ಏನು..?

1973ರ ಅಡಿಕೆ ಮಾರುಕಟ್ಟೆ ಬಿಕ್ಕಟ್ಟು ಉತ್ಪಾದನೆ ಹೆಚ್ಚಳಕ್ಕೆ ತಕ್ಕಂತೆ ಮಾರುಕಟ್ಟೆ ಹೀರಿಕೊಳ್ಳುವ ಸಾಮರ್ಥ್ಯವೂ…

1 day ago

ಹವಾಮಾನ ವರದಿ | 05-10-2026 | ಅರಬ್ಬಿ ಸಮುದ್ರದ ಮೇಲ್ಮೈ ಸುಳಿಗಾಳಿಯಿಂದ ಮಳೆ – ಅ.6 ರ ಬಳಿಕ ಏನಾಗಲಿದೆ?

ಅರಬ್ಬಿ ಸಮುದ್ರದ ಉಡುಪಿ–ದಕ್ಷಿಣ ಕನ್ನಡ ಕರಾವಳಿ ಸಮೀಪ ರೂಪುಗೊಂಡಿರುವ ಮೇಲ್ಮೈ ಸುಳಿಗಾಳಿಯಿಂದ ಕರಾವಳಿ,…

2 days ago