ಅನಂತಪುರ ಕ್ಷೇತ್ರ ಸರೋವರದಲ್ಲಿ ದಿಢೀರ್ ಪ್ರತ್ಯಕ್ಷಗೊಂಡಿದೆ ಮತ್ತೊಂದು ಮರಿ ಮೊಸಳೆ..!

November 13, 2023
10:56 AM
ಕಾಸರಗೋಡು ಕುಂಬಳೆ ಬಳಿಯ ಅನಂತಪುರ ಕ್ಷೇತ್ರದಲ್ಲಿ ಮೊಸಳೆ ಕಂಡುಬಂದಿದೆ.

ಯಾರೇನೇ ಅನ್ನಲಿ..? ಇದು ಕಲಿಗಾಲದಲ್ಲೂ ಆವರ್ತಿಸಿದ ಪವಾಡವಲ್ಲದೇ ಮತ್ತೇನು…??? ನಮ್ಮೂರಿನ ಸರೋವರ ಕ್ಷೇತ್ರ ಅನಂತಪುರದಲ್ಲಿ ಭಕ್ತರ ಕರೆಗೆ ಓಗೊಡುತ್ತಿದ್ದ, ಕಣ್ಕಂಡ ದೈವಸದೃಶವಾಗಿದ್ದ ಸಸ್ಯಾಹಾರಿ ಮೊಸಳೆ ಬಬಿಯ ಬ್ರಹ್ಮೈಕ್ಯವಾಗಿ ಭರ್ತಿ ಒಂದು ವರ್ಷಾಂತಿಕ ದಾಟಿದ ಬೆನ್ನಲ್ಲೇ ಬರಿದಾಗಿದ್ದ ಕ್ಷೇತ್ರ ಸರೋವರದಲ್ಲಿ ಮತ್ತೊಂದು ಮರಿ ಮೊಸಳೆ ಕಂಡುಬಂದಿದೆ..!

Advertisement
Advertisement
Advertisement

ಇದು ಪ್ರಪ್ರಥಮ ಕಾಣಸಿಕ್ಕುದಿದೇ ಕಾಞಂಗಾಡಿನಿಂದ ಬಂದ ಭಕ್ತ ಕುಟುಂಬಕ್ಕೆ. ಇತ್ತೀಚಿಗೆ ಅವರು ಕ್ಷೇತ್ರಕ್ಕೆ ಬಂದಿದ್ದರು. ಇವರ ಜತೆಗಿದ್ದ ಮಗುವೊಂದು “ನನಗೆ ಮೊಸಳೆ ನೋಡಬೇಕೆಂದು” ರಚ್ಚೆ ಹಿಡಿಯಿತು. “ಮೊಸಳೆ ಇಲ್ಲ ಮಗಾ… ” ಅಮ್ಮ ಎಷ್ಟೇ ಸತಾಯಿಸಿದರೂ ಮಗು ಕೇಳಲಿಲ್ಲ.. ಇದೇ ಸಂದರ್ಭಕ್ಕೆ ಕ್ಷೇತ್ರದ ಗುಹೆಯಿಂದ ಮೊಸಳೆ ಹೊರಬರಬೇಕೇ…???!

Advertisement

ಅವರದನ್ನು ಮೊಬೈಲಿನಲ್ಲಿ ಚಿತ್ರಿಸಿದರು. ಕ್ಷೇತ್ರದ ಸಂಬಂಧಪಟ್ಟವರಿಗೆಲ್ಲ ತಿಳಿಸಿದ್ದರು. ಆದರೆ ಕ್ಷೇತ್ರದ ಸಿಬಂದಿಗಳಿಗೋ, ಭಕ್ತರಿಗೋ ಅದು ದರ್ಶನ ನೀಡಿರಲೇ ಇಲ್ಲ..! ಈ ಕಾರಣದಿಂದಲೇ ಇದು ಜಿಜ್ಞಾಸೆಗೂ ಒಳಗಾಯಿತು. ಮೊಸಳೆಯೇ ಹೌದೋ.. ಎಂದು ಸಂದೇಹವೂ ಹುಟ್ಟಿತು. ವದಂತಿಗಳೂ ಹರಡಿತು. ಈ ಕಾರಣದಿಂದಲೇ.. ಮೊಸಳೆಯನ್ನು ಮೊದಲ ಬಾರಿಗೆ ಕಂಡ ಕಾಞಂಗಾಡಿನ ಕುಟುಂಬ ಮತ್ತೆ ಅನಂತಪುರ ಕ್ಷೇತ್ರಕ್ಕೆ ಬಂದರು. ಎರಡನೇ ಬಾರಿಗೂ ಅವರಿಗೆ ದರ್ಶನ ನೀಡುವುದರೊಂದಿಗೆ ಕ್ಷೇತ್ರದ ಅರ್ಚಕ, ಪರಿವಾರಕ್ಕೆಲ್ಲ ಮೊಸಳೆಯ ಮರಿ ಸ್ಪಷ್ಟವಾಗಿ ಕಾಣಸಿಕ್ಕಿದೆ.

ಇದರೊಂದಿಗೆ 75ವರ್ಷಗಳ ಕಾಲ ನಿರುಪದ್ರವಿಯಾಗಿ ಬದುಕಿದ್ದ “ಬಬಿಯ”ನ ಜಾಗಕ್ಕೆ ಮತ್ತೊಂದು ಮರಿ ಮೊಸಳೆ ತಾನಾಗಿಯೇ ಬಂದಂತಾಗಿದೆ! ಹಿಂದೆ ಕೆರೆಯಲ್ಲಿದ್ದ ಮೊಸಳೆಯನ್ನು ಬ್ರಿಟೀಷರು ಗುಂಡಿಟ್ಟು ಕೊಂದಿದ್ದರಂತೆ. ತದನಂತರ ತಾನಾಗಿಯೇ ಮತ್ತೊಂದು ಮೊಸಳೆ ಇಲ್ಲಿ ಪ್ರತ್ಯಕ್ಷಗೊಂಡಿತ್ತು. ಆತನೇ ಇತ್ತೀಚಿಗೆ ಅಗಲಿದ ಬಬಿಯ. ಅದಗಲಿ ವರ್ಷವೊಂದು ಪೂರೈಸಿದಾಗಲೇ ಮರಿ ಮೊಸಳೆ ಗೋಚರವಾಗಿದೆ. ಕ್ಷೇತ್ರದ ಸಾನ್ನಿಧ್ಯವನ್ನು ಮತ್ತೆ ಎತ್ತಿ ಹಿಡಿದಿದೆ.. ಇದಲ್ಲವೇ ಈ ದೀಪಾವಳಿಯ ಸಂಭ್ರಮ??

Advertisement

ಹಾಗೆಂದು ಈ ಮರಿ ಮೊಸಳೆಗೆ ಜನರೊಂದಿಗೆ ಬೆಸೆದು, ಬೆರೆತು ಅಭ್ಯಾಸ ಆಗಿಲ್ಲ. ಇದು ಜನರ ಸದ್ದು ಕೇಳಿದರೆ ಪೊಟರೆಯೊಳಗೆ ಜಾರುತ್ತದೆ. ಯಾರಿಲ್ಲದಿದ್ದಾಗ ಅದೃಷ್ಟಶಾಲಿಯ ಕಣ್ಣಿಗೆ ಬೀಳುತ್ತದೆ. ಆತ ಅದೃಷ್ಟಶಾಲಿ.. ಒಟ್ಟಂದದಲ್ಲಿ ಬಬಿಯ ನ ಪುನರಾಗಮನದ ಪವಾಡ ಸದೃಶ ಘಟನೆಯಿಂದ ಭಕ್ತ ಮನಸುಗಳೆಲ್ಲ ಆನಂದ ತುಂದಿಲವಾಗಿದೆ..

– ಎಂ. ನಾ. ಚಂಬಲ್ತಿಮಾರ್, 9895508277

Advertisement
It seems that another baby crocodile came to the place of "Babiya" who lived harmlessly for 75 years! Like the British shot and killed the crocodile in the lake earlier. Then another crocodile appeared here by itself. He is the recently departed Babiya. The baby crocodile is visible only when it is one year old.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಸಿರಿಧಾನ್ಯ  ಬಳಕೆ  ಕುರಿತು  ಕೃಷಿ ಇಲಾಖೆಯಿಂದ  ಸಿರಿಧಾನ್ಯ ಓಟ
January 19, 2025
10:13 PM
by: The Rural Mirror ಸುದ್ದಿಜಾಲ
ಬೆಂಗಳೂರಿನಲ್ಲಿ ತುಂತುರು ಮಳೆ | ರಾಜ್ಯಾದ್ಯಂತ ಮುಂದಿನ ಐದು ದಿನ ಮಳೆ ಸಾಧ್ಯತೆ
January 19, 2025
10:06 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 19.01.2025 | ಇಂದು ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಕೃಷಿಕರೇ ಇರಲಿ ಎಚ್ಚರ |
January 19, 2025
11:01 AM
by: ಸಾಯಿಶೇಖರ್ ಕರಿಕಳ
ಸರ್ಕಾರದ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳುವಂತೆ ಸಚಿವ ಈಶ್ವರ್ ಖಂಡ್ರೆ ಕರೆ
January 19, 2025
7:22 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror