ಅಡಿಕೆಗೆ ಕಾಟ ನೀಡಲು ಇನ್ನೊಂದು ಕೀಟ – “ಥ್ರಿಪ್ಸ್‌” | ಅಡಿಕೆ ಬೆಳೆಗಾರರಿಗೆ ಆತಂಕ ಬೇಡ ಎಚ್ಚರ ಇರಲಿ |

October 15, 2024
9:13 PM
ದಾವಣಗೆರೆಯಲ್ಲಿ ಅಡಿಕೆಗೆ ಥ್ರಿಪ್ಸ್‌(Thrips) ಎಂದು ಕರೆಯಲ್ಪಡುವ ಕೀಟವು ಕಂಡುಬಂದಿದೆ. ಇದೀಗ ಅಡಿಕೆ ಬೆಳೆಗಾರರು ಈ ಕೀಟದ ಕುರಿತು ಗಮನ ಇಡುವುದು ಮುಖ್ಯವಾಗಿದೆ.

ಈಚೆಗೆ ಕೆಲವು ಸಮಯಗಳಿಂದ ಅಡಿಕೆ ಬೆಳೆಯ ಮೇಲೆ ಕೀಟಗಳ ಹಾವಳಿ, ರೋಗಗಳ ಹಾವಳಿ ಹೆಚ್ಚುತ್ತಿದೆ. ಎಲ್ಲದಕ್ಕೂ ಪ್ರಮುಖವಾದ ಕಾರಣ ಹವಾಮಾನ. ಇದೀಗ ಇನ್ನೊಂದು ಕೀಟವು ಅಡಿಕೆಗೆ ಹಾವಳಿ ನೀಡಲು ಆರಂಭವಾಗಿದೆ. ಥ್ರಿಪ್ಸ್‌(Thrips) ಎಂದು ಕರೆಯಲ್ಪಡುವ ಕೀಟವು ಇದೀಗ ಅಡಿಕೆಯ ಮೇಲೆ ಕಾಟ ನೀಡಲು ಆರಂಭಿಸಿದೆ. ದಾವಣಗೆರೆಯಲ್ಲಿ  ಥ್ರಿಪ್ಸ್‌ ಹುಳದ ಬಾಧೆ ಆರಂಭವಾಗಿದೆ.…..ಮುಂದೆ ಓದಿ….

ಕಳೆದ ಕೆಲವು ಸಮಯಗಳಿಂದ ಅಡಿಕೆಗೆ ಎಲೆಚುಕ್ಕಿ ರೋಗವು ತೀವ್ರವಾಗು ಬಾಧಿಸುತ್ತಿದೆ. ಈ ಬಾರಿಯೂ ಕೂಡಾ ಸೆಪ್ಟಂಬರ್‌ ತಿಂಗಳ ಅಂತ್ಯದವರೆಗೂ ಕಾಣಿಸದ ಎಲೆಚುಕ್ಕಿ ರೋಗ ಈಚೆಗೆ 10 ದಿನಗಳಿಂದ ಅಲ್ಲಲ್ಲಿ ತೀವ್ರವಾಗಿ ಕಾಣಿಸಿದೆ. ಅದರ ನಡುವೆ ರಿಂಗ್‌ಸ್ಫಾಟ್‌ ವೈರಸ್‌ ಕೂಡಾ ಶಿರಸಿ, ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಕಡೆ ಬಾಧಿಸುತ್ತಿದೆ. ಇದೀಗ ದಾವಣಗೆರೆಯಲ್ಲಿ ಥ್ರಿಪ್ಸ್‌(Thrips) ಎಂದು ಕರೆಯಲ್ಪಡುವ ಕೀಟವು ಕಂಡುಬಂದಿದೆ. ದಾವಣಗೆರೆಯ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತಜ್ಞರು ಥ್ರಿಪ್ಸ್ ಹುಳದ ಬಾಧೆಯನ್ನು ಮೊದಲು ಗುರುತಿಸಿದ್ದು, ಬೆಂಗಳೂರಿನ ಐ.ಸಿ. ಎ.ಆರ್ – ಎನ್.ಬಿ.ಎ.ಐ.ಆರ್ ಸಂಸ್ಥೆಯ ಕೃಷಿ ವಿಜ್ಞಾನಿಗಳ ಸಹಾಯದಿಂದ ಕೀಟವನ್ನು Grape Vine Thrips  ಎಂದು ಗುರುತಿಸಲಾಗಿದೆ.

1956 ರಲ್ಲಿ ಕರ್ನಾಟಕ ಮತ್ತು 1959 ರಲ್ಲಿ ಕೇರಳ ರಾಜ್ಯದ ಕೆಲವು ಅಡಿಕೆ ಬೆಳೆಯುವ ಪ್ರದೇಶದಲ್ಲಿ ಈ ಮೊದಲು ಥ್ರಿಪ್ಸ್ ಕೀಟದ ಬಾಧೆಯನ್ನು ವರದಿ ಮಾಡಲಾಗಿದ್ದು, ಹಲವು ದಶಕಗಳ ನಂತರ ಮತ್ತೊಮ್ಮೆ ಈ ರಸ ಹೀರುವ ಕೀಟವನ್ನು ಅಡಿಕೆ ಸಸಿಗಳ ಸೋಗೆಯಲ್ಲಿ ಗಮನಿಸಲಾಗಿದೆ. ದ್ರಾಕ್ಷಿ, ದಾಳಿಂಬೆ, ಕ್ರೋಟನ್, ಗುಲಾಬಿ, ಮೆಣಸು, ಗೇರು ಸೇರಿದಂತೆ ಇನ್ನಿತರ ಹಲವು ಬೆಳೆಗಳಿಗೂ ಈ ಕೀಟವು ಬಾಧಿಸುತ್ತದೆ. 11 ರಿಂದ 33 ದಿನಗಳ ಜೀವನ ಚಕ್ರ ಇರುವ ಈ ಕೀಟವು, ಅಡಿಕೆ ಎಲೆಯ ಅಡಿಭಾಗದಿಂದ ರಸಹೀರಿದಾಗ, ಎಲೆ ಬಿಳುಚಾಗುವುದನ್ನು (silvery blotches) ಕಾಣಬಹುದು. ನಂತರ ಎಲೆಯು ಹಳದಿ ಮಿಶ್ರಿತ ಕಂದು ಬಣ್ಣಕ್ಕೆ ತಿರುಗಿ, ಒಣಗುತ್ತವೆ. ಇದರಿಂದ ಎಲೆಗಳು ಸುಕ್ಕುಗಟ್ಟಲು ಕಾರಣವಾಗುತ್ತದೆ. ಅಥವಾ  ಎಲೆಯು ತೆಳು ಕಂದು ಬಣ್ಣಕ್ಕೆ ತಿರುಗಬಹುದು ಮತ್ತು ಅಕಾಲಿಕವಾಗಿ ಉದುರಿಹೋಗಬಹುದು. ಮುಂದುವರಿದು ಇದು ಅಡಿಕೆ ಹೂವುಗಳು ಒಣಗಲು ಕೂಡಾ ಕಾರಣವಾಗಬಹುದು. ಎಲೆಗಳ ಮೇಲೆ ಪರಿಣಾಮ ಬೀರುವುದರಿಂದ  ಸಸ್ಯದ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ ಎಂದು ಈಗಾಗಲೇ ಅಧ್ಯಯನಗಳಿಂದ ತಿಳಿದಿದೆ. ಬೇಸಿಗೆಯ ಸಮಯದಲ್ಲಿ ಈ ಕೀಟದ ಹಾವಳಿ ಹೆಚ್ಚು ಎಂದು ವರದಿಗಳಿರುವ ಹಿನ್ನಲೆಯಲ್ಲಿ, ಈಗಲೇ ಈ ಕೀಟವು ತನ್ನ ಕಾರ್ಯಚಟುವಟಿಕೆಯನ್ನು ಹೆಚ್ಚಿಕೊಂಡಿರುವ ಕಾರಣದಿಂದ ಈ ಕೀಟದ ಕುರಿತು ಗಮನ ಇಡುವುದು ಮುಖ್ಯವಾಗಿದೆ.

ದಾವಣಗೆರೆಯ ಪ್ರದೇಶದ ಕೆಲವು ಕಡೆ ಈಗಾಗಲೇ ಮೈಟ್‌ ಹಾವಳಿಯು ಅಡಿಕೆಗೆ ಕಾಣಿಸಿಕೊಂಡಿತ್ತು, ಇದರ ನಡುವೆಯೇ ಈಗ ಥ್ರಿಪ್ಸ್‌ ಕಾಣಿಸಿಕೊಂಡಿದೆ.  ಹೀಗಾಗಿ ಅಡಿಕೆ ಬೆಳೆಗಾರರು ಎಚ್ಚರ ವಹಿಸಬೇಕಿದೆ. ಇದಕ್ಕೆ ಸೂಕ್ತ ಔಷಧಿ ಸಿಂಪಡಣೆಯ ಬಗ್ಗೆ ತಜ್ಞರು ಮಾಹಿತಿ ನೀಡಲಿದ್ದಾರೆ.

The Arecanut crop has been experiencing a rise in pests and diseases due to changing weather patterns. Recently, a new pest called Thrips has emerged as a threat to the Arecanut crop in Davangere. This infestation of thrips is a concerning development for Arecanut farmers in the area.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕಾಂಪೌಂಡ್ ರಬ್ಬರ್ ಆಮದು ಹೆಚ್ಚಳ : 10 ವರ್ಷಗಳ ವಿವರ ಲೋಕಸಭೆಯಲ್ಲಿ ಬಹಿರಂಗ
March 11, 2026
7:19 AM
by: ದ ರೂರಲ್ ಮಿರರ್.ಕಾಂ
ದಾಖಲೆಯ ಆಹಾರಧಾನ್ಯ ಉತ್ಪಾದನೆ | 10 ವರ್ಷಗಳಲ್ಲಿ 357 ಮಿಲಿಯನ್ ಟನ್
March 11, 2026
7:08 AM
by: ದ ರೂರಲ್ ಮಿರರ್.ಕಾಂ
ಒಂದೇ ತೋಟದಲ್ಲಿ ಹಲವು ಬೆಳೆ – ವರ್ಷಪೂರ್ತಿ ಆದಾಯ | ಗದಗದ ರೈತ ಸಹೋದರರ ಸಮಗ್ರ ಕೃಷಿ ಮಾದರಿ
March 10, 2026
11:25 PM
by: ದ ರೂರಲ್ ಮಿರರ್.ಕಾಂ
ಅಡಿಕೆ ಇಳುವರಿ ಕುರಿತು “ದ ರೂರಲ್ ಮಿರರ್.ಕಾಂ” ಸಮೀಕ್ಷೆ | ಬಹುತೇಕ ತೋಟಗಳಲ್ಲಿಅಡಿಕೆ ಇಳುವರಿ ಕುಸಿತ
March 10, 2026
10:42 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror