#AnnabhagyaScheme | ಅನ್ನಭಾಗ್ಯ ಪಡೆಯಲು ಮತ್ತಷ್ಟು ವಿಘ್ನ | 6 ಲಕ್ಷ ಮಂದಿಗೆ ಹಣ ಸಿಗೋದು ಡೌಟು…!

July 1, 2023
8:37 PM

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿಂದ  ಗ್ಯಾರಂಟಿ #Guarantee ಗಳದ್ದು ಸದ್ದು. ಉಚಿತ ಬಸ್ ಶಕ್ತಿ ಯೋಜನೆ, ಗೃಹಜ್ಯೋತಿ, ನಂತರ ಗೃಹ ಲಕ್ಷ್ಮಿ ಯೋಜನೆ ಇನ್ನೂ ಅರ್ಜಿ ಹಂತದಲ್ಲಿದೆ. ಈಗ ಅನ್ನಭಾಗ್ಯ ಯೋಜನೆ ಜಾರಿಗೆ ಬರುತ್ತೋ ಇಲ್ವೋ ಅನ್ನೋ ಗೊಂದಲ. ಅಂತೂ ಇಂತೂ ಅಕ್ಕಿ ಸಿಗಲ್ಲ, ಕೊನೆಗೆ ಖಾತೆಗೆ ಹಣ ಬರುತ್ತೆ ಅಂತ ಹೇಳುವ ಮೂಲಕ ಸರ್ಕಾರ ಈ ಯೋಜನೆಯ ಗೊಂದಲಕ್ಕೆ ಅಂತ್ಯ ಹಾಡಿದೆ. ಆದರೆ ಇದೀಗ ಅನ್ನಭಾಗ್ಯ #AnnabhagyaScheme ದಿಂದ 6 ಲಕ್ಷ ಜನ ಹೊರಗುಳಿಯುತ್ತಾರಾ ಎಂಬ  ಅನುಮಾನ ಮೂಡಿದೆ. 6 ಲಕ್ಷ ಜನರ ದಾಖಲೆ ಇಲ್ಲದಿರುವುದು ಆಹಾರ ಇಲಾಖೆಯ ಆತಂಕಕ್ಕೆ ಕಾರಣವಾಗಿದೆ. ಇನ್ನೂ ಲಿಂಕ್ ಮಾಡದವರ ಖಾತೆಗಳಿಗೆ ಹಣ ಸಿಗುವುದಿಲ್ಲ.

Advertisement
Advertisement

ಯಾರಿಗೆಲ್ಲ ಸಿಗಲ್ಲ ದುಡ್ಡು..?: ರಾಜ್ಯದಲ್ಲಿ 6 ಲಕ್ಷ ಜನ ಬಿಪಿಎಲ್ ಕಾರ್ಡ್‍ದಾರರ #BPL Card ಬ್ಯಾಂಕ್ ಖಾತೆ ಆಧಾರ್ ಗೆ ಲಿಂಕ್  ಆಗಿಲ್ಲ. ಇವರು ಲಿಂಕ್ ಮಾಡಿಸುವವರೆಗೆ ದುಡ್ಡು ಬರಲ್ಲ. ಈಗ ಲಿಂಕ್ ಮಾಡಿದ್ದರೆ ಜುಲೈ 2ನೇ ವಾರದಲ್ಲಿ ಹಣ ಬರುವ ಸಾಧ್ಯತೆಗಳಿವೆ.

ಇಂದು ದುಡ್ಡು ಬರಲ್ಲ ಯಾಕೆ?: ಅಧಿಕಾರಿಗಳು ಪ್ರತಿ ಅಕೌಂಟ್‍ನ ಡೇಟಾ ಪರಿಶೀಲಿಸಬೇಕು. ಕುಟುಂಬದ ಸದಸ್ಯರು ಎಷ್ಟು ಜನ, ಎಷ್ಟು ದುಡ್ಡು ಕಳಿಸಬೇಕು ಅಂತಾ ಪರಿಶೀಲಿಸಬೇಕು. ಆಧಾರ್ ಹಾಗೂ ಬ್ಯಾಂಕ್ ಖಾತೆ ಲಿಂಕ್ ಪರಿಶೀಲಿಸಬೇಕು. ಖಾತೆ ನಿಷ್ಕ್ರಿಯವಾದರೆ ದುಡ್ಡು ಬೌನ್ಸ್ ಆಗಿ ವಾಪಸ್ ಬರುತ್ತೆ. ಹೀಗಾಗಿ ಕೆಲ ಸಮಯ ಬೇಕಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಪಡಿತರದಾರರ ಕುಟುಂಬದ ಪ್ರತಿ ಸದಸ್ಯರಿಗೆ ತಲಾ 10 ಕೆಜಿ ಅಕ್ಕಿ ಕೊಡಲಾಗುವುದು ಎಂದು ಕಾಂಗ್ರೆಸ್ ಘೋಷಿಸಿತ್ತು. ಆದರೆ ಈಗ ಅಗತ್ಯ ಪ್ರಮಾಣದ ಅಕ್ಕಿ ಸಿಕ್ಕಿಲ್ಲ. ಹೀಗಾಗಿ 5 ಕೆಜಿ ಅಕ್ಕಿ ಹಾಗೂ ಬಾಕಿ 5 ಕೆಜಿ ಅಕ್ಕಿ ಬದಲಿಗೆ ಹಣ ನೀಡುವುದಾಗಿ ಸರ್ಕಾರ ತಿಳಿಸಿದೆ. ಪ್ರತಿ ಕೆಜಿಗೆ 34 ರೂ. ಲೆಕ್ಕದಲ್ಲಿ ತಲಾ ಒಬ್ಬರಿಗೆ 170 ರೂ. ಸಿಗಲಿದೆ. ಬಿಪಿಎಲ್ ಕಾರ್ಡ್‍ದಾರರ ಅಕೌಂಟ್‍ಗೆ ದುಡ್ಡು ಜಮೆ ಮಾಡಲು ಸರ್ಕಾರ ನಿರ್ಧರಿಸಿದೆ. ಅನ್ನಭಾಗ್ಯದ ದುಡ್ಡು ಬಿಪಿಎಲ್ ಕಾರ್ಡ್‍ದಾರರ ಖಾತೆಗೆ ಬೀಳಲು ಷರತ್ತುಗಳು ಅನ್ವಯವಾಗಲಿದೆ.

Advertisement
Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 23.05.2025 | ಮುಂದಿನ 10 ದಿನಗಳವರೆಗೂ ರಾಜ್ಯದಲ್ಲಿ ಉತ್ತಮ ಮಳೆ
May 23, 2025
4:03 PM
by: ಸಾಯಿಶೇಖರ್ ಕರಿಕಳ
ತೆಲಿಕೆದ ಬೊಳ್ಳಿ ಅರವಿಂದ್ ಬೋಳಾರ್ ಇವರಿಗೆ ಮುಳಿಯ ಗೋಲ್ಡ್ ಅಂಡ್ ಡೈಮಂಡ್ ಕಡೆಯಿಂದ ಸನ್ಮಾನ
May 23, 2025
3:50 PM
by: ದ ರೂರಲ್ ಮಿರರ್.ಕಾಂ
ಅಪಾರ ಏಕಾದಶಿಯ ನಾಲ್ಕು ಶುಭಯೋಗ | ಐದು ರಾಶಿಯವರಿಗೆ ವಿಷ್ಣುವಿನ ಅನುಗ್ರಹ ಪ್ರಾಪ್ತಿ
May 23, 2025
7:30 AM
by: ದ ರೂರಲ್ ಮಿರರ್.ಕಾಂ
ಸಂಪಾಜೆಯಲ್ಲಿ ಮಹಿಳಾ ಗ್ರಾಮಸಭೆ | ವಿವಿಧ ಮಾಹಿತಿ -ತರಬೇತಿ
May 22, 2025
10:48 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group