ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿಂದ ಗ್ಯಾರಂಟಿ #Guarantee ಗಳದ್ದು ಸದ್ದು. ಉಚಿತ ಬಸ್ ಶಕ್ತಿ ಯೋಜನೆ, ಗೃಹಜ್ಯೋತಿ, ನಂತರ ಗೃಹ ಲಕ್ಷ್ಮಿ ಯೋಜನೆ ಇನ್ನೂ ಅರ್ಜಿ ಹಂತದಲ್ಲಿದೆ. ಈಗ ಅನ್ನಭಾಗ್ಯ ಯೋಜನೆ ಜಾರಿಗೆ ಬರುತ್ತೋ ಇಲ್ವೋ ಅನ್ನೋ ಗೊಂದಲ. ಅಂತೂ ಇಂತೂ ಅಕ್ಕಿ ಸಿಗಲ್ಲ, ಕೊನೆಗೆ ಖಾತೆಗೆ ಹಣ ಬರುತ್ತೆ ಅಂತ ಹೇಳುವ ಮೂಲಕ ಸರ್ಕಾರ ಈ ಯೋಜನೆಯ ಗೊಂದಲಕ್ಕೆ ಅಂತ್ಯ ಹಾಡಿದೆ. ಆದರೆ ಇದೀಗ ಅನ್ನಭಾಗ್ಯ #AnnabhagyaScheme ದಿಂದ 6 ಲಕ್ಷ ಜನ ಹೊರಗುಳಿಯುತ್ತಾರಾ ಎಂಬ ಅನುಮಾನ ಮೂಡಿದೆ. 6 ಲಕ್ಷ ಜನರ ದಾಖಲೆ ಇಲ್ಲದಿರುವುದು ಆಹಾರ ಇಲಾಖೆಯ ಆತಂಕಕ್ಕೆ ಕಾರಣವಾಗಿದೆ. ಇನ್ನೂ ಲಿಂಕ್ ಮಾಡದವರ ಖಾತೆಗಳಿಗೆ ಹಣ ಸಿಗುವುದಿಲ್ಲ.
ಯಾರಿಗೆಲ್ಲ ಸಿಗಲ್ಲ ದುಡ್ಡು..?: ರಾಜ್ಯದಲ್ಲಿ 6 ಲಕ್ಷ ಜನ ಬಿಪಿಎಲ್ ಕಾರ್ಡ್‍ದಾರರ #BPL Card ಬ್ಯಾಂಕ್ ಖಾತೆ ಆಧಾರ್ ಗೆ ಲಿಂಕ್ ಆಗಿಲ್ಲ. ಇವರು ಲಿಂಕ್ ಮಾಡಿಸುವವರೆಗೆ ದುಡ್ಡು ಬರಲ್ಲ. ಈಗ ಲಿಂಕ್ ಮಾಡಿದ್ದರೆ ಜುಲೈ 2ನೇ ವಾರದಲ್ಲಿ ಹಣ ಬರುವ ಸಾಧ್ಯತೆಗಳಿವೆ.
ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಪಡಿತರದಾರರ ಕುಟುಂಬದ ಪ್ರತಿ ಸದಸ್ಯರಿಗೆ ತಲಾ 10 ಕೆಜಿ ಅಕ್ಕಿ ಕೊಡಲಾಗುವುದು ಎಂದು ಕಾಂಗ್ರೆಸ್ ಘೋಷಿಸಿತ್ತು. ಆದರೆ ಈಗ ಅಗತ್ಯ ಪ್ರಮಾಣದ ಅಕ್ಕಿ ಸಿಕ್ಕಿಲ್ಲ. ಹೀಗಾಗಿ 5 ಕೆಜಿ ಅಕ್ಕಿ ಹಾಗೂ ಬಾಕಿ 5 ಕೆಜಿ ಅಕ್ಕಿ ಬದಲಿಗೆ ಹಣ ನೀಡುವುದಾಗಿ ಸರ್ಕಾರ ತಿಳಿಸಿದೆ. ಪ್ರತಿ ಕೆಜಿಗೆ 34 ರೂ. ಲೆಕ್ಕದಲ್ಲಿ ತಲಾ ಒಬ್ಬರಿಗೆ 170 ರೂ. ಸಿಗಲಿದೆ. ಬಿಪಿಎಲ್ ಕಾರ್ಡ್‍ದಾರರ ಅಕೌಂಟ್‍ಗೆ ದುಡ್ಡು ಜಮೆ ಮಾಡಲು ಸರ್ಕಾರ ನಿರ್ಧರಿಸಿದೆ. ಅನ್ನಭಾಗ್ಯದ ದುಡ್ಡು ಬಿಪಿಎಲ್ ಕಾರ್ಡ್‍ದಾರರ ಖಾತೆಗೆ ಬೀಳಲು ಷರತ್ತುಗಳು ಅನ್ವಯವಾಗಲಿದೆ.
ಜಾತಿಗಣತಿ ಮಾಡಿ ಏನನ್ನು ಸಾಧಿಸಲು ಸಾಧ್ಯ? ಸದ್ಯ ಬಹಿರಂಗ ಆಗಿರುವ ವರದಿಯು ಇನ್ನಷ್ಟು…
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರು ಸರಕಾರಿ ಶಾಲೆ ವಿದ್ಯಾರ್ಥಿ ವಿದ್ಯಾರ್ಥಿನಿಯರು…
ಭಾರತದ ವಿವಿಧ ಕಡೆಗಳಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುವ ಸಾಮರ್ಥ್ಯ ಇರುವ ಡ್ರಾಗನ್ ಫ್ರುಟ್(ಕಮಲಂ) ಹಾಗೂ…
ಏಪ್ರಿಲ್ ಮಧ್ಯದ ವೇಳೆಗೆ ದೆಹಲಿಯಲ್ಲಿ ತಾಪಮಾನವು 40 ಡಿಗ್ರಿಗಿಂತ ಹೆಚ್ಚಾಗಬಹುದು, ಈ ಬಾರಿ…
ಗುಜ್ಜೆ ರೋಲ್ ಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ : ಮೊದಲಿಗೆ ಗುಜ್ಜೆ ಕಟ್…