ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ (APEDA) ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತೀಯ ಸಿರಿಧಾನ್ಯವನ್ನು ಉತ್ತೇಜಿಸುವ ಕಾರ್ಯವನ್ನು ವಹಿಸಲಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ 2023 ರ ಸಮಯದಲ್ಲಿ ರಫ್ತು ಬೇಡಿಕೆಯನ್ನು ಪೂರೈಸಲು ಈ ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. APEDA 30 ಪ್ರಮುಖ ರಾಗಿ ಆಮದು ಮಾಡುವ ದೇಶಗಳಿಗೆ ಮತ್ತು 21 ಸಿರಿಧಾನ್ಯ ಉತ್ಪಾದಿಸುವ ಭಾರತೀಯ ರಾಜ್ಯಗಳಿಗೆ ಇ-ಕ್ಯಾಟಲಾಗ್‌ಗಳನ್ನು ಪ್ರಕಟಿಸಿದೆ. ಇ-ಕ್ಯಾಟಲಾಗ್‌ಗಳು ಪ್ರತ್ಯೇಕ ದೇಶದ ಪ್ರೊಫೈಲ್‌ನಲ್ಲಿ ಮಾಹಿತಿಯನ್ನು ಹೊಂದಿವೆ:
* ಭಾರತೀಯ ಸಿರಿಧಾನ್ಯ ಮತ್ತು ಸಿರಿಧಾನ್ಯ ಮೌಲ್ಯವರ್ಧಿತ ಬುಟ್ಟಿ
* ಸಿರಿಧಾನ್ಯ ಉತ್ಪಾದನೆಯ ಸನ್ನಿವೇಶ
* ಭಾರತದ ಸಿರಿಧಾನ್ಯ ರಫ್ತು
* ಸಿರಿಧಾನ್ಯಗಳ ಅಂತರರಾಷ್ಟ್ರೀಯ ಮಾನದಂಡಗಳು
* ಮತ್ತು ದೇಶದಲ್ಲಿ ರಫ್ತುದಾರರು, ಸ್ಟಾರ್ಟ್‌ಅಪ್‌ಗಳು, ಎಫ್‌ಪಿಒಗಳು, ಆಮದುದಾರರು ಮತ್ತು ಭಾರತೀಯ ಮಿಷನ್‌ಗಳ ಸಂಪರ್ಕ ಪಟ್ಟಿ.
APEDA ಮೂರು ಜ್ಞಾನ ಪಾಲುದಾರರನ್ನು ಗುರುತಿಸಿದೆ:
1. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮಿಲೆಟ್ ರಿಸರ್ಚ್ (IIMR);
2. ಸಿರಿಧಾನ್ಯ ಮೇಲಿನ ಶ್ರೇಷ್ಠತೆಯ ಕೇಂದ್ರ – ಕೃಷಿ ವಿಜ್ಞಾನ ವಿಶ್ವವಿದ್ಯಾಲಯ, ಬೆಂಗಳೂರು
3. ಯೆಸ್ ಬ್ಯಾಂಕ್. ಈ ಜ್ಞಾನ ಪಾಲುದಾರರು ಸಿರಿಧಾನ್ಯ ಪ್ರಚಾರದ ವಸ್ತುವಿನ ಪ್ರಕಟಣೆಗಾಗಿ ವಿಷಯವನ್ನು ತಯಾರಿಸಲು ಸಹಕರಿಸುತ್ತಾರೆ.
ವಿದೇಶದಲ್ಲಿ ಭಾರತೀಯ ಮಿಷನ್‌ಗಳು ಆಯೋಜಿಸುವ ಸಿರಿಧಾನ್ಯ -ಪ್ರಚಾರದ ಕಾರ್ಯಕ್ರಮಗಳಿಗೆ ಭಾಗವಹಿಸುವವರ ಗುರುತಿಸುವಿಕೆ; ಮತ್ತು ಸಿರಿಧಾನ್ಯ ಮೌಲ್ಯ ಸರಪಳಿ ಅಭಿವೃದ್ಧಿ. ಂPಇಆಂ ಅಂತರರಾಷ್ಟ್ರೀಯ ವ್ಯಾಪಾರ ಮೇಳಗಳಲ್ಲಿ ಭಾರತೀಯ ಸಿರಿಧಾನ್ಯಗಳನ್ನು ಪ್ರಚಾರ ಮಾಡಲು ಯೋಜಿಸಿದೆ ಮತ್ತು 2023 ರ ವರ್ಷಕ್ಕೆ ಃ2ಃ (ವ್ಯಾಪಾರದಿಂದ ವ್ಯಾಪಾರ) ಸಭೆಗಳನ್ನು ನಡೆಸುತ್ತದೆ.
ಸಿರಿಧಾನ್ಯ -ನಿರ್ದಿಷ್ಟ ವೆಬ್ ಪೋರ್ಟಲ್ ಅನ್ನು ಸಹ ಪ್ರಾರಂಭಿಸಲಾಗಿದೆ. ಪೋರ್ಟಲ್ ಸಿರಿಧಾನ್ಯ, ಅವುಗಳ ಆರೋಗ್ಯ ಪ್ರಯೋಜನಗಳು, ಉತ್ಪಾದನೆ ಮತ್ತು ರಫ್ತು ಅಂಕಿಅಂಶಗಳು, ರಾಗಿ ರಫ್ತುದಾರರ ಡೈರೆಕ್ಟರಿ ಮತ್ತು ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ಸಿರಿಧಾನ್ಯ ಮತ್ತು ಸಿರಿಧಾನ್ಯ ಉತ್ಪನ್ನಗಳ ರಫ್ತಿಗೆ ಅನುಕೂಲವಾಗುವಂತೆ B2B ದೇಶದಾದ್ಯಂತ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ.