ಅಪೊಲೊ ಫಾರ್ಮಸಿಯಲ್ಲಿ ಉದ್ಯೋಗಾವಕಾಶ : ಆಗಸ್ಟ್‌ 1ರಂದು ಪುತ್ತೂರಿನಲ್ಲಿ ನೇರ ಸಂದರ್ಶನ

July 30, 2026
7:26 AM
ಅಪೊಲೊ ಫಾರ್ಮಸಿ ವತಿಯಿಂದ ವಿವಿಧ ಹುದ್ದೆಗಳ ಭರ್ತಿಗಾಗಿ ಆಗಸ್ಟ್‌ 1ರಂದು ಪುತ್ತೂರಿನಲ್ಲಿ ನೇರ ಸಂದರ್ಶನ ನಡೆಯಲಿದೆ. ಎಸ್‌.ಎಸ್‌.ಎಲ್‌.ಸಿ.ಯಿಂದ ಬಿ.ಫಾರ್ಮಾವರೆಗಿನ ವಿದ್ಯಾರ್ಹತೆ ಹೊಂದಿರುವ ಪುರುಷ ಅಭ್ಯರ್ಥಿಗಳು ಭಾಗವಹಿಸಬಹುದು.

ಪುತ್ತೂರು, ಸುಳ್ಯ, ಕುಂಬ್ರ, ಬಿ.ಸಿ.ರೋಡ್, ವಿಟ್ಲ ಹಾಗೂ ಮಂಗಳೂರಿನ ಅಪೊಲೊ ಫಾರ್ಮಸಿ ಮಳಿಗೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗಾಗಿ ಆಗಸ್ಟ್‌ 1ರಂದು ನೇರ ಸಂದರ್ಶನ (Walk-in Interview) ಆಯೋಜಿಸಲಾಗಿದೆ.

ಅಪೊಲೊ ಫಾರ್ಮಸಿ ಕಂಪೆನಿಯ ವತಿಯಿಂದ ನಡೆಯಲಿರುವ ಈ ಸಂದರ್ಶನವು ಆಗಸ್ಟ್‌ 1ರಂದು ಬೆಳಿಗ್ಗೆ 10.30ರಿಂದ ಸಂಜೆ 5 ಗಂಟೆಯವರೆಗೆ ಪುತ್ತೂರಿನ ಮಿನಾರ್‌ ಕಾಂಪ್ಲೆಕ್ಸ್‌ನ ನೆಲಮಹಡಿಯ ಶಾಪ್‌ ಸಂಖ್ಯೆ 06 ಮತ್ತು 07ರಲ್ಲಿ ನಡೆಯಲಿದೆ.

ಖಾಲಿ ಇರುವ ಹುದ್ದೆಗಳು

  • ಫಾರ್ಮಾಸಿಸ್ಟ್
  • ಫಾರ್ಮಸಿ ಎಯ್ಡ್
  • ಸಿ.ಎಸ್‌.ಎ. (Customer Service Associate)
  • ಅಪ್ರೆಂಟಿಸ್‌

ವಿದ್ಯಾರ್ಹತೆ

ಎಸ್‌.ಎಸ್‌.ಎಲ್‌.ಸಿ., ಪಿ.ಯು.ಸಿ., ಯಾವುದೇ ಪದವಿ, ಡಿ.ಫಾರ್ಮಾ ಅಥವಾ ಬಿ.ಫಾರ್ಮಾ ವಿದ್ಯಾರ್ಹತೆ ಹೊಂದಿರುವ ಪುರುಷ ಅಭ್ಯರ್ಥಿಗಳು ಸ್ವ-ವಿವರವುಳ್ಳ ಬಯೋಡೇಟಾದೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು.

ಕಂಪನಿಯಿಂದ ದೊರೆಯುವ ಸೌಲಭ್ಯಗಳು

  • ಪಿ.ಎಫ್‌. (Provident Fund)
  • ಇ.ಎಸ್‌.ಐ. (Employees’ State Insurance)
  • ಬೋನಸ್
  • ಗ್ರಾಚ್ಯುಟಿ
  • ಆಕರ್ಷಕ ಮಾರಾಟ ಪ್ರೋತ್ಸಾಹಧನ (Sales Incentive)
  • ವಾರ್ಷಿಕ ವೇತನ ಹೆಚ್ಚಳ
  • ಉತ್ತಮ ಉದ್ಯೋಗ ಮತ್ತು ವೃತ್ತಿ ಬೆಳವಣಿಗೆಯ ಅವಕಾಶ

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Apollo Pharmacy is conducting a walk-in interview on August 1 at Minar Complex, Puttur, to recruit Pharmacists, Pharmacy Aides, Customer Service Associates, and Apprentices for its outlets in Puttur, Sulya, Kumbra, BC Road, Vitla, and Mangaluru. Eligible male candidates with SSLC, PUC, Degree, D.Pharm, or B.Pharm qualifications can attend with their resume.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಭಾರತದ ಕೃಷಿ ರಫ್ತಿನಲ್ಲಿ ದೊಡ್ಡ ಬದಲಾವಣೆ – ಎಮ್ಮೆ ಮಾಂಸ ರಫ್ತು 5 ಬಿಲಿಯನ್ ಡಾಲರ್ ಗುರಿಯತ್ತ..!
August 20, 2026
9:46 PM
by: ದ ರೂರಲ್ ಮಿರರ್.ಕಾಂ
ಅಡಿಕೆಯ ಭವಿಷ್ಯ ಈ ತೀರ್ಪಿನಲ್ಲಿದೆಯೇ..? ಗುಟ್ಕಾ ಬೇರೆ, ಅಡಿಕೆ ಬೇರೆ ? ಸುಪ್ರೀಂ ಕೋರ್ಟ್ ಮುಂದೆ ಇರುವ ದೊಡ್ಡ ಪ್ರಶ್ನೆಗಳು..
August 20, 2026
3:57 PM
by: ದ ರೂರಲ್ ಮಿರರ್.ಕಾಂ
ಹಬ್ಬದ ಬೇಡಿಕೆಯನ್ನೇ ಕೃಷಿ ಅವಕಾಶವನ್ನಾಗಿ ಮಾಡಿದ ಕೇರಳ : 2.52 ಲಕ್ಷ ಟನ್ ತರಕಾರಿ ಉತ್ಪಾದನೆ
August 20, 2026
3:06 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 20-08-2026 | ಕರಾವಳಿಗೆ ಇನ್ನೂ ಮಳೆ ವಿರಾಮವಿಲ್ಲ…! ಆ.23–25 ಕ್ಕೆ ಮತ್ತೆ ಮಳೆ ಹೆಚ್ಚಾಗುವ ಸೂಚನೆ
August 20, 2026
1:01 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror