ರಾಜ್ಯದ ಮಾವು ಬೆಳೆಗಾರರ ನೆರವಿಗೆ ಮನವಿ | 3 ಲಕ್ಷ ಸಿಬ್ಬಂದಿಗಳಿಗೆ ನಗದುರಹಿತ  ಆರೋಗ್ಯ ಯೋಜನೆ | ರಾಜ್ಯದ ದುರ್ಗಮ ಪ್ರದೇಶಗಳಿಗೆ ಸಂಚಾರಿ ಆರೋಗ್ಯ ಘಟಕ |

June 19, 2025
10:59 PM

ರಾಜ್ಯದ ಮಾವು  ಬೆಳೆಗಾರರು ಸಂಕಷ್ಟದಲ್ಲಿದ್ದು, ಅವರ ನೆರವಿಗೆ   ಧಾವಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು  ರಾಜ್ಯ ಸಚಿವ ಸಂಪುಟ  ತೀರ್ಮಾನಿಸಿದೆ ಎಂದು  ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ  ಎಚ್.ಕೆ ಪಾಟೀಲ್  ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ  ಸಚಿವ ಸಂಪುಟದ ಸಭೆಯ ನಂತರ ಅವರು,  ಬೆಂಗಳೂರು ಗ್ರಾಮಾಂತರ , ಕೋಲಾರ ಸೇರಿದಂತೆ  ವಿವಿಧ ಜಿಲ್ಲೆಗಳ ಮಾವು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ.  ಮಾವಿನ ದರ  ಕುಸಿದಿರುವುದು ಹಾಗೂ  ಆಂಧ್ರಕ್ಕೆ ಪೂರೈಕೆ ಮಾಡಲು  ನಿರ್ಬಂಧ  ಹೇರಿರುವುದರಿಂದ ರೈತರು ಕಂಗಾಲಾಗಿದ್ದಾರೆ.  ಮಾವು ಬೆಳೆಗಾರರಿಗೆ  ಕೇಂದ್ರದಿಂದ ಹೆಚ್ಚಿನ  ನೆರವನ್ನು ಪಡೆಯುವ ಜವಾಬ್ದಾರಿಯನ್ನು  ಕೃಷಿ ಸಚಿವ  ಚೆಲುವರಾಯಸ್ವಾಮಿ ಅವರಿಗೆ  ವಹಿಸಲಾಗಿದೆ  ಎಂದು ತಿಳಿಸಿದರು.

ಸರ್ಕಾರಿ ಇಲಾಖೆಗಳಲ್ಲಿ ಗುತ್ತಿಗೆ, ಹೊರಗುತ್ತಿಗೆ ಹಾಗೂ ಗೌರವ ಧನದ ಆಧಾರದ ಮೇಲೆ  ಕೆಲಸ ಮಾಡುತ್ತಿರುವ ಸುಮಾರು 3ಲಕ್ಷ ಸಿಬ್ಬಂದಿ  ಮತ್ತು  ಅವರ ಅವಲಂಬಿತರಿಗೆ ಸುವರ್ಣ ಆರೋಗ್ಯ ಸುರಕ್ಷಾ  ಟ್ರಸ್ಟ್ ಮೂಲಕ ವಾರ್ಷಿಕವಾಗಿ  5 ಲಕ್ಷ ರೂಪಾಯಿ ವರೆಗೆ ನಗದುರಹಿತ  ಆರೋಗ್ಯ ಯೋಜನೆಗೆ ಸಂಪುಟ ಒಪ್ಪಿಗೆ ನೀಡಿದೆ ಎಂದು ಹೇಳಿದರು. ರಾಜ್ಯದ ದುರ್ಗಮ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರಿಗೆ  ಪ್ರಾಥಮಿಕ ಆರೋಗ್ಯ ಮತ್ತು ಆರೈಕೆ ಸೇವೆಗಳನ್ನು ಒದಗಿಸಲು ಸಂಚಾರಿ ಆರೋಗ್ಯ ಘಟಕಗಳನ್ನು  18 ಕೋಟಿ 97 ಲಕ್ಷ ರೂಪಾಯಿ ವೆಚ್ಚದಲ್ಲಿ ಖರೀದಿಸಲು ಸಂಪುಟ ಒಪ್ಪಿಗೆ ನೀಡಿದೆ ಎಂದು ಹೇಳಿದರು.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕೇರಳದಲ್ಲಿ ಭಾರಿ ಮಳೆ ಆರ್ಭಟ : ಮಲಪ್ಪುರಂನಲ್ಲಿ ಸರಣಿ ಭೂಕುಸಿತ , ಸಂಚಾರ ಸಂಪೂರ್ಣ ಸ್ಥಗಿತ
August 3, 2026
5:45 PM
by: ದ ರೂರಲ್ ಮಿರರ್.ಕಾಂ
ಭಾರಿ ಮಳೆ ಎಚ್ಚರಿಕೆ: ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕರಾವಳಿಗೆ ಆರೆಂಜ್ – ಎಲ್ಲೋ ಅಲರ್ಟ್‌ | ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ
August 3, 2026
4:38 PM
by: ದ ರೂರಲ್ ಮಿರರ್.ಕಾಂ
ಆಕೆ ಏಕೆ ತನ್ನ ನೋವನ್ನು ಯಾರಿಗೂ ಹೇಳುವುದಿಲ್ಲ..?
August 3, 2026
3:37 PM
by: ಮಹೇಶ್ ಪುಚ್ಚಪ್ಪಾಡಿ
ಹಿಂದೂ ಮಹಾಸಾಗರದ ಹವಾಮಾನದಲ್ಲಿ ಹಠಾತ್ ಬದಲಾವಣೆ – ಮತ್ತೆ ಮಹಾಮಳೆಗೆ ಕಾರಣವಾಗುತ್ತಿದೆಯೇ?
August 3, 2026
12:03 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror