ಪ್ರಸ್ತುತ 2024-25 ನೇ ಸಾಲಿನಿಂದ ಸ್ಕ್ಯಾನ್ ಪ್ರತಿ, ಮರು ಎಣಿಕೆಗೆ ಮತ್ತು ಮರು ಮೌಲ್ಯ ಮಾಪನಕ್ಕೆ ಕರ್ನಾಟಕ ವನ್ ಮೊಬೈಲ್ ಆಪ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸ್ಕ್ಯಾನ್ ಪ್ರತಿಗಳನ್ನ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇದೇ 7 ರ ವರೆಗೆ ಅವಕಾಶವಿದೆ. ಆನ್‌ಲೈನ್ ಬ್ಯಾಂಕಿಂಗ್ ಸೌಲಭ್ಯ ಇಲ್ಲದವರು ಅರ್ಜಿ ಸಲ್ಲಿಸಿದ ನಂತರ ಚಲನ್ ಡೌನ್ ಲೋಡ್ ಮಾಡಿ ಶುಲ್ಕ ಪಾವತಿಸಲು ಇದೇ 8 ರ ವರೆಗೆ ಕಾಲವಕಾಶ ನೀಡಲಾಗಿದೆ. ಉತ್ತರ ಪತ್ರಿಕೆಗಳ ಮರು ಎಣಿಕೆ ಮತ್ತು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಇದೇ 4 ರಿಂದ 11 ರವರೆಗೆ ಅವಕಾಶ ಇದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮಾಡಿದಂತೆಯೇ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೂ ಈ ವರ್ಷ ಇನ್ನೆರಡು ಪರೀಕ್ಷೆಯ ಅವಕಾಶ ನೀಡಲಾಗುತ್ತಿದೆ. ಉತ್ತೀರ್ಣರಾಗದಿದ್ದರೆ ಅಥವಾ ಉತ್ತಮ ಅಂಕ ಲಭಿಸದಿದ್ದರೆ ವಿದ್ಯಾರ್ಥಿಗಳು ಇನ್ನು ಎರಡು ಬಾರಿ ಪರೀಕ್ಷೆ ಬರೆಯಬಹುದಾಗಿದೆ. ಎಸ್.ಎಸ್.ಎಲ್.ಸಿ. 2025 ರ ಪರೀಕ್ಷೆ -2 ಅನ್ನು ಇದೇ 26 ರಿಂದ ಜೂನ್ 2 ವರೆಗೆ ಹಾಗೂ ಪರೀಕ್ಷೆ 3 ಜೂನ್ 23 ರಿಂದ 30 ರವರೆಗೆ ನಡೆಸಲಾಗುವುದು. ಪರೀಕ್ಷೆ -2 ಕ್ಕೆ ಅಭ್ಯರ್ಥಿಗಳು ನೋಂದಣಿ ಮಾಡಿಕೊಳ್ಳಲು ನಾಳೆಯಿಂದ ಇದೇ ಹತ್ತರ ವರೆಗೆ ಅವಕಾಶ ಕಲ್ಪಿಸಿ ಕೊಡಲಾಗಿದೆ.