ಗ್ರಾಮೀಣ ಪ್ರದೇಶಗಳಲ್ಲಿ ಆಕ್ರಮ ನಿವೇಶನಗಳು ಮೂಲಭೂತ ಸೌಲಭ್ಯಗಳನ್ನು ಪಡೆಯುತ್ತಿರುವ ಕಾರಣ ಆಸ್ತಿ ದಾಖಲೆಗಳ ಕೊರತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಇಂತಹ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ಕರ್ನಾಟಕ ಸರ್ಕಾರ ಇ-ಸ್ವತ್ತು 2.0 ಯೋಜನೆಯನ್ನು ಜಾರಿಗೊಳಿಸಿದೆ. ಗ್ರಾಮೀಣಾಭಿವೃಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಆಸ್ತಿಗಳಿಗೆ ಇ-ಸ್ವತ್ತು ದಾಖಲೆಯನ್ನು ವಿತರಣೆ ಮಾಡಲು ಮುಖ್ಯಮಂತ್ರಿ ಚಾಲನೆ ನೀಡಿದ್ದಾರೆ.
ಈ ಯೋಜನೆ ಅರ್ಜಿ ಸಲ್ಲಿಸಲು ಕೃಷಿ ಜಮೀನಿನಲ್ಲಿ ಅನುಮತಿ ಇಲ್ಲದೆ ನಿರ್ಮಿಸಿದ ಮನೆಗಳು, ಭೂಪರಿವರ್ತನೆ ಆದೇಶ ಇಲ್ಲದ ನಿವೇಶನಗಳು, ಅನುಮೋದಿತ ಲೇಜೌಟ್ ನಲ್ಲಿ ನಿವೇಶನಗಳು, ಅನುಮೋದಿತ ಲೇಜೌಟ್ ನಲ್ಲಿ ಉಲ್ಲಂಘನೆ ಇರುವ ಕಟ್ಟಡಗಳು ಲೇಜೌಟ್ ಪ್ಲಾನ್ ಇಲ್ಲದ ಸೌಕರ್ಯ ನೀಡಿ ಭೂಮಿ ಸೈಟ್ ಗಳು ಮತ್ತು ಏಕ ನಿವೇಶನ ಆಸ್ತಿ ಆರ್ಹವಾಗಿದೆ. ಇದಕ್ಕೆ ಅರ್ಜಿದಾರನು ಅಸ್ತಿ ಮಾಲೀಕರಾಗಿರಬೇಕು ಅಥವಾ ಅವರ ಪ್ರತಿನಿಧಿಯಾಗರಬೇಕು.
ಅಗತ್ಯ ದಾಖಲೆಗಳು: ನೋಂದಾಯಿತ ಪ್ರಮಾಣ ಪತ್ರ, ಆಧಾರ್ ಕಾರ್ಡ್, ತೆರಿಗೆ ಪಾವತಿ ರಸೀದಿ, ಬೆಸ್ಕಾಂ ಖಾತೆ, ಐಡಿ ಆರ್ ಟಿಸಿ ಇತ್ಯಾದಿ.
ಮನೆಯಲ್ಲೆ ಆನ್ ಲೈನ್ ಅರ್ಜಿ ಸೌಲಭ್ಯ, ಅರ್ಜಿ ಸಲ್ಲಿಸುವುದು ಸಂಪೂರ್ಣ ಡಿಜಿಟಲ್ ಅಗಿದ್ದು, eswathṳkarnataka̤̤govt̤.in ವೆಬ್ ಸೈಟ್ ಗೆ ಭೇಟಿ ನೀಡಿ ಹಂತಹಂತವಾಗಿ ಮಾಹಿತಿ ಸಲ್ಲಿಸಿ.


