2025-26ನೇ ಸಾಲಿನ ಮೈಸೂರಿನ ಪಿಂಜಿರಾಪೋಲ್ ಮತ್ತು ಇತರೆ ಗೋಶಾಲೆಗಳಿಗೆ ಬೆಂಬಲ ಕಾರ್ಯಕ್ರಮದಡಿಯಲ್ಲಿ ಸಹಾಯಧನಕ್ಕಾಗಿ ಅರ್ಜಿಯನ್ನು ಕರೆಯಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕನಿಷ್ಟ 50 ಜಾನುವಾರುಗಳನ್ನು ನಿರ್ವಹಣೆ ಮಾಡುತ್ತಿರುವ, ಮೇವು ಉತ್ಪಾದನೆಗೆ ಅವಶ್ಯಕ 2.0 ಹೆಕ್ಟೇರು ಜಮೀನು ಹೊಂದಿರುವ ಹಾಗೂ ಸಂಸ್ಥೆ ನೊಂದಾವಣೆಯಾಗಿ ಕನಿಷ್ಟ ಒಂದು ವರ್ಷ ಪೂರೈಸಿರುವ ಖಾಸಗಿ ಗೋಶಾಲೆಯವರು ಅರ್ಜಿ ಸಲ್ಲಿಸಬಹುದು. ಭರ್ತಿ ಮಾಡಿದ ಅರ್ಜಿಯನ್ನು ಪೂರಕ ದಾಖಲಾತಿಗಳೊಂದಿಗೆ ಮೇ 10 ರೊಳಗಾಗಿ ಸ್ಥಳೀಯ ಪಶುವೈದ್ಯ ಅಧಿಕಾರಿಯವರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಸ್ಥಳೀಯ ಪಶುವೈದ್ಯ ಅಧಿಕಾರಿಯವರನ್ನು ಸಂಪರ್ಕಿಸಬೇಕು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕರು (ಆಡಳಿತ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel