ಸುಳ್ಯ ತಾಲೂಕಿನ ಅರಂತೋಡು ಎಲಿಮಲೆ ರಸ್ತೆ ದುರಸ್ತಿಗೆ ಆಗ್ರಹಿಸಿ ಚುನಾವಣಾ ಬಹಿಷ್ಕಾರ ಬ್ಯಾನರ್ ಗಳನ್ನು ಮುಖ್ಯಮಂತ್ರಿಗಳ ಆಗಮನದ ಮುನ್ನಾ ದಿನ ಕಿಡಿಗೇಡಿಗಳು ಹೊಳೆಯಲ್ಲಿ ಎಸೆದಿದ್ದರು. ಇದೀಗ ಈ ಪ್ರಕರಣ ಹೋರಾಟದ ಕಾವು ಹೆಚ್ಚಿಸಿದೆ. ಜನರೆಲ್ಲಾ ಒಂದಾಗಿ ಊರಿನ ದೈವದ ಮುಂದೆ ಪ್ರಾರ್ಥನೆ ಮಾಡಿದ್ದಾರೆ.
ಬ್ಯಾನರ್ ತೆಗೆದ ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆ ಆಗಬೇಕು ಹಾಗೂ ನಮ್ಮ ರಸ್ತೆ ಅಭಿವೃದ್ಧಿಗೆ ಆದಷ್ಟು ಬೇಗ ಕಾಲ ಕೂಡಿಬರಬೇಕು ಎಂದು ದೈವದ ಮುಂದೆ ಪ್ರಾರ್ಥನೆ ಮಾಡಲಾಯಿತು.
ಸುಳ್ಯ ಅರಂತೋಡಿನ ಅಡ್ತಲೆಯಲ್ಲಿ ಮತದಾನ ಬಹಿಷ್ಕಾರ ಬ್ಯಾನರ್ ಅಳವಡಿಸಿ ತಿಂಗಳು ಕಳೆಯಿತು.ಈಚೆಗೆ ದಕ ಜಿಲ್ಲೆಗೆ ಮುಖ್ಯಮಂತ್ರಿ ಗಳಾದ @CMofKarnataka @BSBommai ಆಗಮನದ ಸಂದರ್ಭ ಬ್ಯಾನರ್ ಕಿತ್ತೆಸೆದಿದ್ದರು. ಇದೀಗ ಗ್ರಾಮಸ್ಥರು ಬ್ಯಾನರ್ ಕಿತ್ತೆಸೆದ ಕಿಡಿಗೇಡಿಗಳಿಗೆ ದೈವದ ಮುಂದೆ ಹರಕೆ ಹೇಳಿದ್ದಾರೆ.ರಸ್ತೆ ಆಗಲಿ ಎಂದು ಪ್ರಾರ್ಥಿಸಿದರು pic.twitter.com/BmbSLNQKVx
— theruralmirror (@ruralmirror) July 16, 2022
ಮುಖ್ಯಮಂತ್ರಿಗಳ ಆಗಮನದ ಮುನ್ನಾ ದಿನ ಬಹಿಷ್ಕಾರದ ಬ್ಯಾನರ್ ಕದ್ದು ಹೊಳೆಯಲ್ಲಿ ಎಸೆದಿದ್ದರು. ಆದರೆ ಹೋರಾಟಗಾರರು ಬ್ಯಾನರ್ ಅಳವಡಿಸಿ ಕೊಡಿ ಎಂದು ಕಿಡಿಗೇಡಿಗಳಿಗೆ ನೀಡಿದ ಸಮಯ ಮುಗಿದಿರುವುದರಿಂದ ಹಾಗೂ ಯಾವ ವ್ಯಕ್ತಿಯೂ ಈ ಬಗ್ಗೆ ತಪ್ಪು ಒಪ್ಪಿಕೊಂಡು ಬ್ಯಾನರ್ ಗಳನ್ನು ಆಳವಡಿಸಿಲ್ಲ ಆದ್ದರಿಂದ ಊರಿನ ಸರ್ವ ನಾಗರಿಕರು ಸೇರಿಕೊಂಡು ಊರಿನ ದೈವಸ್ಥಾನವಾದ ಶ್ರೀ ಉಳ್ಳಾಕುಲು ದೈವಸ್ಥಾನ ಅಡ್ತಲೆ ಇಲ್ಲಿ ಬ್ಯಾನರ್ ತೆಗೆದ ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆ ಆಗಬೇಕು ಮತ್ತು ನಮ್ಮ ರಸ್ತೆ ಅಭಿವೃದ್ಧಿಗೆ ಆದಷ್ಟು ಬೇಗ ಕಾಲ ಕೂಡಿಬರಬೇಕು ಎಂದು ಪ್ರಾರ್ಥನೆ ಮಾಡಿದರು.