ಸುಳ್ಯ ತಾಲೂಕಿನ ವಿವಿದೆಡೆ ಕೃಷಿಗೆ ಕಾಡಾನೆ ದಾಳಿ ತೀವ್ರಗೊಂಡಿದೆ. ಅಪಾರ ಪ್ರಮಾಣದ ಕೃಷಿ ನಾಶವಾಗುತ್ತಿದ್ದು ಕೃಷಿಕರು ಕಂಗಾಲಾಗಿದ್ದಾರೆ. ಇದೀಗ ಅರಂತೋಡು ಪ್ರದೇಶದಲ್ಲೂ ಕಾಡಾನೆ ಹಾವಳಿ ಹೆಚ್ಚಾಗಿದ್ದು ಅರಂತೋಡು ಗ್ರಾಮದ ದೇರಾಜೆ ಆದರ್ಶ ಎಂಬುವವರ ತೋಟದಲ್ಲಿ ಕಾಡಾನೆ ಹಾವಳಿಯಿಂದ ಕೃಷಿ ನಷ್ಟ ಉಂಟಾಗಿದೆ.
Advertisement
ಸುಮಾರು ಒಂದು ತಿಂಗಳಿನಿಂದ ದೇರಾಜೆ ಅಸುಪಾಸಿನಲ್ಲಿ ಕಾಡಾನೆ ಕಂಡು ಬಂದಿದ್ದು. ಸಾಕಷ್ಟು ಕೃಷಿ ಹಾನಿ ಮಾಡಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕೃಷಿ ಹಾನಿ ಸಂಭವಿಸಬಹುದಾಗಿದೆ ಎಂದು ಕೃಷಿಕರು ಆತಂಕ ತೋಡಿದ್ದಾರೆ. ಸಂಬಧಪಟ್ಟ ಇಲಾಖೆ ಗಮನ ವಹಿಸಲು ಕೃಷಿಕರು ಒತ್ತಾಯಿಸಿದ್ದಾರೆ.
Advertisement
ಊರಿನ ಹೆಚ್ಚಿನ ಜನರು ಮತ್ತು ಶಾಲಾ ಮಕ್ಕಳು ಕಾಲು ದಾರಿಯನ್ನೇ ಅವಲಂಬಿತರಾಗಿರುವುದರಿಂದ ಕಾಡನೆ ದಾಳಿ ನಡೆಸಬಹುದು ಎಂದು ಭಯಬೀತಗೋಡಿದ್ದಾರೆ. ಆದುದರಿಂದ ಸೂಕ್ತ ಕ್ರಮ ಆಗಬೇಕು ಎಂದು ಊರಿನ ಜನರು ಅಭಿಪ್ರಾಯಪಟ್ಟಿದ್ದಾರೆ.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement