ಅರ್ಕ ಮೈಕ್ರೋಬಿಯಲ್ ಕನ್ಸೇರ್ಷಿಯ.. ಅಂದರೆ AMC ಬಳಕೆ ಹೇಗೆ..? : ಏಎಂಸಿ ಎಂದರೆ ಮಣ್ಣಿಗೆ ಬೇಕಾಗುವ ಸೂಕ್ಷ್ಮಾಣು ಜೀವಿಗಳು.

July 15, 2024
1:16 PM

ಏಎಂಸಿ(AMC) ದ್ರಾವಣವನ್ನು ನೀರಿನೊಂದಿಗೆ ಕದಡಿ ಭೂಮಿಗೆ(Land) ಹಾಕಿ ಎಂದು ಕೃಷಿ ತಜ್ಞರು(Agriculture expert) ಸಲಹೆ ನೀಡುತ್ತಾರೆ.. ಈಗ ಮಾರುಕಟ್ಟೆಯಲ್ಲಿ(Market) ಹಲವಾರು ಕಂಪನಿಗಳು(Company) ಈ ಏಎಂಸಿಯನ್ನು ಚಂದ ಚಂದದ ಕಂಟೇನರ್‌ನಲ್ಲಿ ರೈತರಿಗೆ(Farmer) ಮಾರಿ ಹಣ(Money) ಮಾಡಿಕೊಳ್ಳುತ್ತಿದೆ. ಆದರೆ ಈ ಮೈಕ್ರೋಬಿಯಲ್(Microbial) ಸೂಕ್ಷ್ಮಾಣು ಜೀವಿಗಳು(Microorganisms), ಗೊಬ್ಬರ(Manure) ಅಲ್ಲ.. ಅವು ಕಣ್ಣಿಗೆ ಕಾಣದ ಅಸಂಖ್ಯಾತ ಕೋಟ್ಯಂತರ ಜೀವಿಗಳು.

ಇದೊಂಥರ ಮೀನುಗಳು ಇದ್ದಂತೆ..!! ಮೀನುಗಳು ಕಣ್ಣಿಗೆ ಕಾಣಿಸುತ್ತವೆ. ಈ ಸೂಕ್ಷ್ಮಾಣು ಜೀವಿಗಳು ಕಣ್ಣಿಗೆ ಕಾಣಿಸದು. ಮೀನುಗಳನ್ನು ನಿಮ್ಮ ಕೃಷಿ ಜಮೀನಿಗೆ ತಂದು ಸುರಿದರೆ ಅವು ಬದುಕುತ್ತವೆಯೇ..? ಹಾಗೆಯೇ ಸೂಕ್ಷ್ಮಾಣು ಜೀವಿಗಳಿಗೂ ನಿಮ್ಮ ಕೃಷಿ ಭೂಮಿಯಲ್ಲಿ ಬಾಳಲು ಅನುಕೂಲ ವಾದ, ಜಾಗ ವಾತಾವರಣ ಆಹಾರ ಎಲ್ಲವೂ ಇರಬೇಕು.. ಈ ಸೂಕ್ಷ್ಮಾಣು ಜೀವಿಗಳು ಆಯಸ್ಸು ಕೆಲವೇ ಸೆಕೆಂಡ್ ಗಳು.. ಡಾಕ್ಟರು ಸಾಯ್ಲಿ ನೋ ಇನ್ಯಾವುದೋ ಕಂಪನಿಯ ದ್ರಾವಣ ರೂಪದ ಏಎಂಸಿ ಯೋ.. ಅಮ್ಮತವೋ ಅನ್ನಪೂರ್ಣಕ್ಕನೋ ಇನ್ಯಾವುದೋ ಘನ ರೂಪದ ಗೊಬ್ಬರವೋ ಏಎಂಸಿ‌ಯನ್ನ ಕಾರ್ಖಾನೆಯಿಂದ ಚೀಲದಲ್ಲಿ ತುಂಬಿ ಕಳಿಸಿ ರಿಟೀಲ್ ಏಜನ್ಸಿ ಯವನಿಗೆ ಬಂದು ಅಲ್ಲಿಂದ ನೀವು ತಂದು ನಿಮ್ಮ ತೋಟಕ್ಕೆ ಹಾಕುವ ತನಕವೂ ಸೆಕೆಂಡ್ ಗೆ ಹುಟ್ಟಿ ಸಾಯುವ ಸೂಕ್ಷ್ಮಾಣು ಜೀವಿಗಳು ಜೀವ ಇಟ್ಟುಕೊಂಡು ಇರಲು ಸಾಧ್ಯವೇ..?

Advertisement
Advertisement
ಏಎಂಸಿ ಹಾಕುವ ಕೃಷಿ ಬೆಳೆಯ ಭೂಮಿ ಸಾವಯವಯುಕ್ತವಾಗಿರಬೇಕು..
ಏಎಂಸಿ ಸೂಕ್ಷ್ಮಾಣು ಜೀವಿಗಳಿಗೆ ಸಗಣಿ ಆಹಾರವಾಗಿ ಬೇಕು. ಜೊತೆಯಲ್ಲಿ ಯಾವುದಾದರೂ ಕರಗುವ ಸಾವಯವ ಕಾಂಪೋಸ್ಟ್ ಮಾದ್ಯಮ ಬೇಕು. ಈ ಕಾಂಪೋಸ್ಟ್ ಮಾದ್ಯಮ ದಲ್ಲಿ ಈ ಸೂಕ್ಷ್ಮಾಣು ಜೀವಿಗಳು ವಾಸ ಮಾಡುತ್ತಾ ಸಗಣಿಯನ್ನು ಆಹಾರವಾಗಿ ತಿನ್ನುತ್ತಾ ತಮ್ಮ ಸಂತಾನ ವೃದ್ದಿ ಮಾಡಿಕೊಳ್ಳುತ್ತಾ ಕೃಷಿ ಭೂಮಿಯಲ್ಲಿ ಕೃಷಿ ಪೂರಕ ಚಟುವಟಿಕೆಗಳನ್ನು ಮಾಡುತ್ತವೆ.. ಏಎಂಸಿ ದ್ರಾವಣವನ್ನು ಸುಮ್ಮನೆ ನೀರಿನಲ್ಲಿ ಕರಡಿ ಅಡಿಕೆ ಮರದ ಬುಡಕ್ಕೆ ಹಾಕಿದರೆ ಏಎಂಸಿ ಕದಡಿದ ಕೆಲಸ ಆಗುತ್ತದೆ, ಏಎಂಸಿ ಮಾರಿದವನಿಗೆ, ಏಎಂಸಿ ತಯಾರಿಸಿದವನಿಗೆ ಲಾಭವಾಗುತ್ತದೆ..

ಇದರ ವಸ್ತು ವಿಚಾರ ಇಷ್ಟು.. ‌‌‌ ನಾವು ನಮ್ಮ ಗೊಬ್ಬರ ತಯಾರಿಕಾ ಕೇಂದ್ರದಲ್ಲಿ ಚಾಲ್ತಿ ಮಾರುಕಟ್ಟೆಯ ಎಲ್ಲಾ ಕಂಪನಿಗಳಿಗಿಂತ ಅತ್ಯಂತ ಕಡಿಮೆ ದರದಲ್ಲಿ ಏಎಂಸಿ ದ್ರಾವಣವನ್ನೂ ಮತ್ತು ಟ್ರೈಕೋಡರ್ಮ, ಸುಡಮನೋಸ್, ಅಜಟೋಬ್ಯಾಕ್ಟರ್, ಪಿಎಸ್ ಬಿ ಮತ್ತು ಕೆಎಸ್ ಬಿ ದ್ರಾವಣವನ್ನು ಸಗಣಿ ಗೊಬ್ಬರ + ಕೋಕೋಪಿಥ್ ನೊಂದಿಗೆ ಸಮ್ಮಿಳಿತ ಗೊಳಿಸಿ ಫ್ರೆಷ್ ಗೊಬ್ಬರ ತಯಾರಿಸಿ ಮಾರಾಟ ಮಾಡುತ್ತೇವೆ.
ನಾವು ದ್ರವ ಮತ್ತು ಘನ ರೂಪದ ಗೊಬ್ಬರವನ್ನು ತಯಾರಿಸಿ ದಾಸ್ತಾನು ಮಾಡಿಡುವ ಕ್ರಮ ಇಟ್ಟುಕೊಂಡಿಲ್ಲ. ರೈತ ಗ್ರಾಹಕ ಬೇಡಿಕೆಗನುಗುಣವಾಗಿ‌ ತಯಾರಿಸಿ ಕೊಡುತ್ತೇವೆ. ದಯವಿಟ್ಟು ರೈತೋದ್ಯಮವನ್ನ ಪ್ರೋತ್ಸಾಹಿಸಿ ಎಂದು ಕೋರುತ್ತಿದ್ದೇನೆ..

ಬರಹ – ಪ್ರಬಂಧ ಅಂಬುತೀರ್ಥ
9481801869

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಬಾಗಲಕೋಟೆ ಜಿಲ್ಲೆಯ  ಶೂರ್ಪಾಲಿಯ ಶ್ರೀಲಕ್ಷ್ಮೀ ನರಸಿಂಹ ದೇವಾಲಯ
May 16, 2025
9:59 PM
by: The Rural Mirror ಸುದ್ದಿಜಾಲ
ಕಾಯಕ ಗ್ರಾಮ  ಯೋಜನೆ | ಹಿಂದುಳಿದ ಗ್ರಾಮಗಳನ್ನು ದತ್ತು ಸ್ವೀಕರಿಸುವಂತೆ ಸಲಹೆ
May 16, 2025
9:51 PM
by: The Rural Mirror ಸುದ್ದಿಜಾಲ
ಡೆಂಘೀ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳಲು ಸರ್ಕಾರದ ಸೂಚನೆ
May 16, 2025
9:43 PM
by: The Rural Mirror ಸುದ್ದಿಜಾಲ
ಕನಿಷ್ಠ ಬೆಂಬಲ ಬೆಲೆಯಲ್ಲಿ ಸೂರ್ಯಕಾಂತಿ ಖರೀದಿ ಪ್ರಕ್ರಿಯೆ ಶೀಘ್ರ ಆರಂಭ
May 16, 2025
9:38 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group