ಇದೊಂಥರ ಮೀನುಗಳು ಇದ್ದಂತೆ..!! ಮೀನುಗಳು ಕಣ್ಣಿಗೆ ಕಾಣಿಸುತ್ತವೆ. ಈ ಸೂಕ್ಷ್ಮಾಣು ಜೀವಿಗಳು ಕಣ್ಣಿಗೆ ಕಾಣಿಸದು. ಮೀನುಗಳನ್ನು ನಿಮ್ಮ ಕೃಷಿ ಜಮೀನಿಗೆ ತಂದು ಸುರಿದರೆ ಅವು ಬದುಕುತ್ತವೆಯೇ..? ಹಾಗೆಯೇ ಸೂಕ್ಷ್ಮಾಣು ಜೀವಿಗಳಿಗೂ ನಿಮ್ಮ ಕೃಷಿ ಭೂಮಿಯಲ್ಲಿ ಬಾಳಲು ಅನುಕೂಲ ವಾದ, ಜಾಗ ವಾತಾವರಣ ಆಹಾರ ಎಲ್ಲವೂ ಇರಬೇಕು.. ಈ ಸೂಕ್ಷ್ಮಾಣು ಜೀವಿಗಳು ಆಯಸ್ಸು ಕೆಲವೇ ಸೆಕೆಂಡ್ ಗಳು.. ಡಾಕ್ಟರು ಸಾಯ್ಲಿ ನೋ ಇನ್ಯಾವುದೋ ಕಂಪನಿಯ ದ್ರಾವಣ ರೂಪದ ಏಎಂಸಿ ಯೋ.. ಅಮ್ಮತವೋ ಅನ್ನಪೂರ್ಣಕ್ಕನೋ ಇನ್ಯಾವುದೋ ಘನ ರೂಪದ ಗೊಬ್ಬರವೋ ಏಎಂಸಿಯನ್ನ ಕಾರ್ಖಾನೆಯಿಂದ ಚೀಲದಲ್ಲಿ ತುಂಬಿ ಕಳಿಸಿ ರಿಟೀಲ್ ಏಜನ್ಸಿ ಯವನಿಗೆ ಬಂದು ಅಲ್ಲಿಂದ ನೀವು ತಂದು ನಿಮ್ಮ ತೋಟಕ್ಕೆ ಹಾಕುವ ತನಕವೂ ಸೆಕೆಂಡ್ ಗೆ ಹುಟ್ಟಿ ಸಾಯುವ ಸೂಕ್ಷ್ಮಾಣು ಜೀವಿಗಳು ಜೀವ ಇಟ್ಟುಕೊಂಡು ಇರಲು ಸಾಧ್ಯವೇ..?
ಏಎಂಸಿ ಹಾಕುವ ಕೃಷಿ ಬೆಳೆಯ ಭೂಮಿ ಸಾವಯವಯುಕ್ತವಾಗಿರಬೇಕು.. ಏಎಂಸಿ ಸೂಕ್ಷ್ಮಾಣು ಜೀವಿಗಳಿಗೆ ಸಗಣಿ ಆಹಾರವಾಗಿ ಬೇಕು. ಜೊತೆಯಲ್ಲಿ ಯಾವುದಾದರೂ ಕರಗುವ ಸಾವಯವ ಕಾಂಪೋಸ್ಟ್ ಮಾದ್ಯಮ ಬೇಕು. ಈ ಕಾಂಪೋಸ್ಟ್ ಮಾದ್ಯಮ ದಲ್ಲಿ ಈ ಸೂಕ್ಷ್ಮಾಣು ಜೀವಿಗಳು ವಾಸ ಮಾಡುತ್ತಾ ಸಗಣಿಯನ್ನು ಆಹಾರವಾಗಿ ತಿನ್ನುತ್ತಾ ತಮ್ಮ ಸಂತಾನ ವೃದ್ದಿ ಮಾಡಿಕೊಳ್ಳುತ್ತಾ ಕೃಷಿ ಭೂಮಿಯಲ್ಲಿ ಕೃಷಿ ಪೂರಕ ಚಟುವಟಿಕೆಗಳನ್ನು ಮಾಡುತ್ತವೆ.. ಏಎಂಸಿ ದ್ರಾವಣವನ್ನು ಸುಮ್ಮನೆ ನೀರಿನಲ್ಲಿ ಕರಡಿ ಅಡಿಕೆ ಮರದ ಬುಡಕ್ಕೆ ಹಾಕಿದರೆ ಏಎಂಸಿ ಕದಡಿದ ಕೆಲಸ ಆಗುತ್ತದೆ, ಏಎಂಸಿ ಮಾರಿದವನಿಗೆ, ಏಎಂಸಿ ತಯಾರಿಸಿದವನಿಗೆ ಲಾಭವಾಗುತ್ತದೆ..
ಇದರ ವಸ್ತು ವಿಚಾರ ಇಷ್ಟು.. ನಾವು ನಮ್ಮ ಗೊಬ್ಬರ ತಯಾರಿಕಾ ಕೇಂದ್ರದಲ್ಲಿ ಚಾಲ್ತಿ ಮಾರುಕಟ್ಟೆಯ ಎಲ್ಲಾ ಕಂಪನಿಗಳಿಗಿಂತ ಅತ್ಯಂತ ಕಡಿಮೆ ದರದಲ್ಲಿ ಏಎಂಸಿ ದ್ರಾವಣವನ್ನೂ ಮತ್ತು ಟ್ರೈಕೋಡರ್ಮ, ಸುಡಮನೋಸ್, ಅಜಟೋಬ್ಯಾಕ್ಟರ್, ಪಿಎಸ್ ಬಿ ಮತ್ತು ಕೆಎಸ್ ಬಿ ದ್ರಾವಣವನ್ನು ಸಗಣಿ ಗೊಬ್ಬರ + ಕೋಕೋಪಿಥ್ ನೊಂದಿಗೆ ಸಮ್ಮಿಳಿತ ಗೊಳಿಸಿ ಫ್ರೆಷ್ ಗೊಬ್ಬರ ತಯಾರಿಸಿ ಮಾರಾಟ ಮಾಡುತ್ತೇವೆ.
ನಾವು ದ್ರವ ಮತ್ತು ಘನ ರೂಪದ ಗೊಬ್ಬರವನ್ನು ತಯಾರಿಸಿ ದಾಸ್ತಾನು ಮಾಡಿಡುವ ಕ್ರಮ ಇಟ್ಟುಕೊಂಡಿಲ್ಲ. ರೈತ ಗ್ರಾಹಕ ಬೇಡಿಕೆಗನುಗುಣವಾಗಿ ತಯಾರಿಸಿ ಕೊಡುತ್ತೇವೆ. ದಯವಿಟ್ಟು ರೈತೋದ್ಯಮವನ್ನ ಪ್ರೋತ್ಸಾಹಿಸಿ ಎಂದು ಕೋರುತ್ತಿದ್ದೇನೆ..
ಬರಹ – ಪ್ರಬಂಧ ಅಂಬುತೀರ್ಥ
9481801869
ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎರಡು ಹಂತಗಳಲ್ಲಿ ಹಾಲಿನ ದರ ಒಟ್ಟು…
ರಾಜ್ಯದಲ್ಲಿ ನೈಋತ್ಯ ಮುಂಗಾರು ಉತ್ತರ ಒಳನಾಡಿನಲ್ಲಿ ತೀವ್ರವಾಗಿದ್ದು, ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ…
ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ರೈತರಿಗೆ ಸಕ್ರಮಕ್ಕಾಗಿ 42,289 ಮಂದಿ ಅರ್ಜಿ ಸಲ್ಲಿಸಿದ್ದಾರೆ…
ಕನ್ನಡವನ್ನು ಕಲುಷಿತ ಮಾಡಿರುವ ಪರಕೀಯ ಶಬ್ದಗಳನ್ನು ಅವರಿಗೇ ಬಿಟ್ಟುಬಿಡೋಣ. ಶುದ್ಧ ಕನ್ನಡದ ಸುಂದರ…
ಜಮ್ಮು ಕಾಶ್ಮೀರದ ಕಥುವಾದಲ್ಲಿ ಭಾರೀ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ಏಳು ಜನ…
ದೇಶದ ಜಿಡಿಪಿಯಲ್ಲಿ ಗಮನಾರ್ಹ ರೀತಿಯ ಬೆಳವಣಿಗೆಯಾಗುತ್ತಿದ್ದು, ಬೇರೆ ದೇಶದವರು ಭಾರತದಲ್ಲಿ ಹೂಡಿಕೆ ಮಾಡಲು…